Home District ರಂಗೇರಿದ ಬೆಳಗಾವಿ ಉಪಚುನಾವಣಾ ಕಣ!; ಪ್ರಜಾಟಿವಿ ವಿಶೇಷ ವರದಿ

ರಂಗೇರಿದ ಬೆಳಗಾವಿ ಉಪಚುನಾವಣಾ ಕಣ!; ಪ್ರಜಾಟಿವಿ ವಿಶೇಷ ವರದಿ

426
0

ವರದಿ-ಚಂದ್ರು ಎಚ್.ಶ್ರೀರಾಮುಡು

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಾವು ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಮತ ಬೇಟೆ ಶುರುಮಾಡಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಜಗದೀಶ್ ಶೆಟ್ಟರ್ ಟೆಂಪಲ್ ರನ್ ಮಾಡಿದ್ರೆ ಇತ್ತ ಸತೀಶ್ ಜಾರಕಿಹೊಳಿ‌ ಮನೆಗೆ ಹೆಬ್ಬಾಳ್ಕರ್ ಭೇಟಿ ನೀಡಿ ಮಾತುಕತೆ ನಡೆಸಿ ರಣತಂತ್ರ ರೂಪಿಸಿದ್ದಾರೆ.

ಕುಂದಾನಗರಿಯಲ್ಲಿ ಸದ್ಯ ಉಪಚುನಾವಣೆ ರಣಕಣ ಜೋರಾಗಿದೆ. ದಿ.ಸುರೇಶ ಅಂಗಡಿ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷದಲ್ಲಿ ಮತ ಭೇಟೆ ಜೋರಾಗಿ ನಡೆಸಿದ್ದಾರೆ. ಇಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸತೀಶ ಜಾರಕಿಹೊಳಿ‌ ಮನೆಗೆ ಭೇಟಿ ನೀಡಿ ಉಪ ಚುನಾವಣೆ ಕುರಿತ ಮಹತ್ವದ ಮಾತುಕತೆ ನಡೆಸಿದರು. ಇನ್ನು ನಿನ್ನೆಯಷ್ಟೆ ಸಿಎಂ ಯಡಿಯೂರಪ್ಪ ಎಲ್ಲಾ ಸಮುದಾಯದ ಪ್ರಮುಖ ಸಭೆ ಕರೆದು ಮಾತುಕತೆ ನಡೆಸಿದ್ದರು ಬಿಜೆಪಿ ಅಭ್ಯರ್ಥಿ ಎರಡು ಲಕ್ಷ ಮತಗಳಿಂದ ಗೆಲ್ಲಿಸಿ ಅಂತಾ ಮನವಿ ಮಾಡಿಕೊಂಡರಿದ್ದಾರೆ ಇದಕ್ಕೆ ಟಾಂಗ್ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಎರಡು ಲಕ್ಷ ಮತಗಳು ಬಿದ್ದು ಗೆದ್ದರೆ ಅದು ಗೆಲುವೇ, ಒಂದೆ ಒಂದು ಮತಗಳಿಂದ ಗೆದ್ದರೂ ಅದೂ ಕೂಡ ಗೆಲವು ಗೆಲವೇ. ಗೆಲವು ಮುಖ್ಯ ಈ ಬಾರಿ ಗೆಲವು ನಮ್ಮದೇ ಅಂತಾ ವಿಶ್ವಾಸ ವ್ಯಕ್ತಪಡಿಸಿದರು

ಈ ಕುರಿತು ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಇ‌ನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ ಆಗಿದ್ದರಿಂದ ಲಿಂಗಾಯತ ಸಮುದಾಯದ ಪ್ರಭಾವಿ ಶಾಸಕಿ ಹೆಬ್ಬಾಳ್ಕರ್ ಇಂದು ಅಬ್ಬರದ ಪ್ರಚಾರ ನಡೆಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಪ್ರಚಾರ ಕಾರ್ಯ ಶುರು ಮಾಡಿ ಮತಬೇಡೆ ಶುರುಮಾಡಿದ್ದಾರೆ. ಬೆಳಗಾವಿ ಕ್ಷೇತ್ರದ ಉಚಗಾಂವ್, ಹಿಂಡಲಗಾ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಭೇಟೆಗೆ ಇಳಿದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರ ಸಭೆ ಹಾಗೂ ಲಿಂಗಾಯತ ಮುಖಂಡರ ಭೇಟಿ ಸೇರಿದಂತೆ ಚುನಾವಣೆ ರಣತಂತ್ರ ರೂಪಿಸಿದ್ದಾರೆ. ಪ್ರಮುಖವಾಗಿ ಹೆಬ್ಬಾಳ್ಕರ್ ಲಿಂಗಾಯತ ಸಮುದಾಯದ ಪ್ರಭಾವಿ ಇರುವುದರಿಂದ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದು ಮತ ಬೇಟೆಗೆ ಪ್ಲಾನ ಮಾಡಿದ್ದಾರೆ. ಇದಕ್ಕು ಮುನ್ನವೇ ಮಾತನಾಡಿ ಮೊದಲನೆಯದಾಗಿ. ಅಭ್ಯರ್ಥಿ ಮೇಲೆ ಚುನಾವಣೆ ಟರ್ನ ಆಗುತ್ತೆ. ಜಿಲ್ಲೆಯಲ್ಲಿ ತಮ್ಮದೇ ಆದ ಓಟ್ ಬ್ಯಾಂಕ್ ಇಟ್ಟುಕೊಂಡ ನಾಯಕ ಸತೀಶ್ ಜಾರಕಿಹೊಳಿ‌. ಸತೀಶ್ ಜಾರಕಿಹೊಳಿ‌ ವಯಕ್ತಿಕ ಸಂಪರ್ಕ, ನಾಯಕನ ನೋಡಿ ಸಪೋರ್ಟ್ ಮಾಡ್ತಿವಿ ಅಂತಾ ಹೇಳುತ್ತಿದ್ದಾರೆ. ಎಲ್ಲಾ ಸಮುದಾಯ ಜನರು ಮತ ನೀಡ್ತಾರೆ. ನಾನು ಸ್ಪರ್ಧೆ ಮಾಡಿದ್ದ 2013 ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ‌ ನೇತೃತ್ವದಲ್ಲಿ ನಡೆದಿತ್ತು. ಈಗಾ ನನ್ನನ್ನು ಕರೆದರೆ ನಾನು ಹೋಗಿ ಪ್ರಚಾರ ಮಾಡ್ತಿನಿ. ಎಲ್ಲಾ ಸತೀಶ್ ಜಾರಕಿಹೊಳಿ‌ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಚುನಾವಣೆ ನಡೆಯುತ್ತದೆ. ಗೆಲವು ನಮ್ಮದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು

ನಂತರ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಇನ್ನು ಇತ್ತ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಬಿಜೆಪಿ ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಬಡೆಕೊಳ್ಳಮಠಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸೇರಿದಂತೆ ಹಲವು ನಾಯಕರು ಭೇಟಿ ಆಶೀರ್ವಾದ ಪಡೆದರು. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಅರಳಿಕಟ್ಟಿ, ಸೇರಿದಂತೆ ಹಲವು ಹಳ್ಳಿಗಳಲ್ಲಿ ಪ್ರಚಾರ ಸಭೆ ನಡೆಸಿ ಮತ ಬೇಟೆ ನಡೆಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇನ್ನೂ ಉಪಚುನಾವಣೆ ಹಿನ್ನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ಗೋಕಾಕ್ ತಾಲೂಕಿನ ಘಟಪ್ರಭಾ ಬಳಿಯ ಜೆಜಿಕೊ ಆಸ್ಪತ್ರೆ ಮುಂದಿನ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 50 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡು, ತನಿಖೆ ನಡೆಸಿದ್ದಾರೆ ಎಂದರು.

ಒಟ್ಟಿನಲ್ಲಿ ಕ್ಷೇತ್ರದಲ್ಲಿ ಉಪಚುನಾವಣೆ ಅಬ್ಬರ ಜೋರಾಗಿದ್ದು ಮತ ಬೇಟೆಗೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ತಂತ್ರಗಾರಿಕೆ ಶುರುಮಾಡಿದ್ದಾರೆ. ಇತ್ತ ಅಭ್ಯರ್ಥಿಗಳು ಮತದಾರರನ್ನ ಮನ ಒಲಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಅನುಕಂಪದ ಅಲೆ ಕೈ ಹಿಡಿಯುತ್ತಾ? ಅಥವಾ ಸತೀಶ್ ಜಾರಕಿಹೊಳಿ‌ ಜೈ ಅಂತಾರಾ ಕಾದು ನೋಡಬೇಕು

Previous articleನೇಣಿಗೆ ಶರಣಾದ ಬಿಬಿಎಂಪಿ ನೌಕರ!
Next articleಇಂದು ಸಿದ್ಧಗಂಗಾ ಶ್ರೀಗಳ 114 ನೇ ಜನ್ಮಜಯಂತಿ; ಸಿದ್ಧಗಂಗಾ ಮಠದಲ್ಲಿ ವಿಶೇಷ ಆಚರಣೆ

LEAVE A REPLY

Please enter your comment!
Please enter your name here