ಭಾರತ್ ಜೋಡೊ ಯಾತ್ರೆ: ಬಾಲಕಿಗೆ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ..! Video

ರಾಷ್ಟ್ರೀಯ

ತಿರುವನಂತಪುರಂ: ಕಾಂಗ್ರೆಸ್‌ ಗೆ ವರ್ಚಸ್ಸು ಹೆಚ್ಚಿಸಲು ಹಾಗೂ ದೇಶದ ಜನರಲ್ಲಿ ಐಕ್ಯತೆ ಮೂಡಿಸಲುವ ನಿಟ್ಟಿನಲ್ಲಿ ರಾಹುಲ್‌ ಗಾಧಿ ಕೈಗೊಂಡಿರುವ ಭಾರತ್‌ ಜೋಡೋ ಯಾತ್ರೆ 11 ನೇ ಪೂರೈಸಿ 12ನೇ ದಿನಕ್ಕೆ ಕಾಲಿಟ್ಟಿದೆ . ಕೇರಳದ ಹರಿಪಾಡ್‌ ನಲ್ಲಿ ಭಾನುವಾರ ಭಾರತ್ ಜೋಡೋ ಯಾತ್ರೆ ವೇಳೆ ಬಾಲಕಿ ಚಪ್ಪಲಿ ಧರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆರವಾಗಿರುವ,

ಫೋಟೋ ಹಾಗೂ ವಿಡಿಯೋ ಎಲ್ಲರ ಗಮನ ಸೆಳೆದಿದೆ. ರಾಹುಲ್. ಇತ್ತ ಕರ್ನಾಟಕದತ್ತ ಸಾಗುತ್ತಿರುವ ಯಾತ್ರೆಗೆ ಕೇರಳದಲ್ಲಿ ವ್ಯಾಫಕ ಬೆಂಬಲ ವ್ಯಕ್ತವಾಗಿದೆ. ರಾಹುಲ್‌ ಪಾದಯಾತ್ರೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದಾರೆ. ಇಕ್ಕೆಲಗಳಲ್ಲಿ ರಾಹುಲ್‌ ನೋಡಲು ಕಾತುರದಿಂದ ಕಾದು ರಾಹುಲ್‌ ಗೆ ಶುಭಾಶಯಕೊರುತ್ತಿದ್ದಾರೆ.