Home District ಬೀದರ್ ಜಿಲ್ಲಾ ಉಸ್ತುವಾರಿಯನ್ನು ಸಚಿವ ಪ್ರಭು ಚವ್ಹಾಣ್ ಅವರಿಂದ ಹಿಂಪಡೆದ ಸರ್ಕಾರ

ಬೀದರ್ ಜಿಲ್ಲಾ ಉಸ್ತುವಾರಿಯನ್ನು ಸಚಿವ ಪ್ರಭು ಚವ್ಹಾಣ್ ಅವರಿಂದ ಹಿಂಪಡೆದ ಸರ್ಕಾರ

606
0

ಬೀದರ್ ; ಬಸವಕಲ್ಯಾಣ ಉಪಚುನಾವಣೆ ದಿನದಂದೆ ಬೀದರ್ ಜಿಲ್ಲಾ ಉಸ್ತುವಾರಿಯನ್ನು ಸಚಿವ ಪ್ರಭು ಚೌವಾಣ್ ಅವರಿಂದ ಹಿಂಪಡೆದ ಬಿಎಸ್ ವೈ ಸರ್ಕಾರ.ಆರು ಜನ ಹೊಸ ಸಚಿವರಿಗೆ ನಿಯುಕ್ತಿ ಮಾಡಿದ ಸರ್ಕಾರ.ಅರವಿಂದ ಲಿಂಬಾವಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವವರಿಗೆ ಹೊಸದಾಗಿ ಬೀದರ್ ಉಸ್ತುವಾರಿ ಹೆಗಲಿಗೆ.ಬಸವಕಲ್ಯಾಣ ಉಪ ಚುನಾವಣೆ ಗೆದ್ದ ಖುಷಿಯಲ್ಲೆ ಸಚಿವ ಪ್ರಭು ಚೌವಾಹ ಅವರಿಗೆ ತವರು ಜಿಲ್ಲೆಯ ಉಸ್ತುವಾರಿ ಕಸಿದುಕೊಂಡು ಯಾದಗಿರಿ ಜಿಲ್ಲೆಗೆ ಸೀಮಿತ ಮಾಡಿದ ಬಿಎಸ್ ವೈ ಸರ್ಕಾರ.ಕೋವಿಡ್ ಹಿನ್ನಲೆ ಬ್ರಿಮ್ಸ್ ನಿರ್ವಹಣೆಯಲ್ಲಿ ವಿಫಲತೆ ಹಿನ್ನಲೆ ಈ ಕ್ರಮ ಎನ್ನುತ್ತದೆ ಮೂಲಗಳು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ತೆಗೆದು ಯಾದಗಿರಿಗೆ ಸೀಮಿತ ಪಡಿಸಿದ ರಾಜ್ಯ ಸರ್ಕಾರ.

ಬಸವಕಲ್ಯಾಣ ಉಪಚುನಾವಣೆ ಹಿನ್ನಲೆ. ಬಿಜೆಪಿ ಗೆಲುವು ಸಾಧಿಸಿದ ಪರಿಣಾಮವಾಗಿ ಸಚಿವ ಪ್ರಭುಚೌಹಾಣ್ ಹರ್ಷವನ್ನು ವ್ಯಕ್ತಪಡಿಸಿದರು. ಬಸವಕಲ್ಯಾಣ ಮಾಹಾಜನತೆಗೆ ಧನ್ಯವಾದ ಸಲ್ಲಿಸುವ ಮೂಲಕ ತಮ್ಮ ಕೃತಜ್ನತೆಯನ್ನು ಮತದಾರ ಪ್ರಭುಗಳಿಗೆ ಸಚಿವ ಪ್ರಭುಚೌಹಾಣ್ ಸಲ್ಲಿಸಿದರು. ಕಲ್ಯಾಣದ ಅಭಿವೃದ್ಧಿಗೆ ಸಿಎಂ ಬಿಎಸ್ಜ ಯಡಿಯೂರಪ್ಪನವರ ಜೊತೆ ಚರ್ಚೆ ಮಾಡುತ್ತೇವೆ. ಜಿಲ್ಲೆಯಲ್ಲಿ ಜೋಡೆತ್ತಿನ ಹಾಗೆ ಕೆಲಸ‌ಮಾಡುತ್ತೆವೆ. ಕೋವಿಡ್ ನಿಯಂತ್ರಣಕ್ಕೆ ಮೊದಲು ಆದ್ಯತೆ ನೀಡುತ್ತೆವೆ. ಬಳಿಕ ಕಲ್ಯಾಣದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿವೆ. ನನ್ನ ಅನುಭವ ಶರಣು ಸಲಗರ್ ಅವರಿಗೆ ಧಾರೆ ಎರೆಯುವೆ ಎಂದು ಪಶುಸಚಿವ ಪ್ರಭುಚೌಹಾಣ್ ಹೇಳಿಕೆ ನೀಡಿದ್ದಾರೆ.

Previous articleಬೀದರ್ ಉಪಚುನಾವಣೆ; ಗೆಲುವು ಸಾಧಿಸಿದ ಪ್ರಭು ಚವ್ಹಾಣ್ ಹೇಳಿದ್ದೇನು ಗೊತ್ತೇ?
Next articleಕೊರೋನಾ ಅಲೆ ಪರಿಣಾಮವಾಗಿ ಬಂದ್ ಆಗುತ್ತಿರುವ ಕೋಟೆ ನಾಡಿನ ಬಾಗಿಲುಗಳು!

LEAVE A REPLY

Please enter your comment!
Please enter your name here