Home Cinema ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನ!; ಸಾವು ಬದುಕಿನ ನಡುವೆ ಹೋರಾಟ

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನ!; ಸಾವು ಬದುಕಿನ ನಡುವೆ ಹೋರಾಟ

1103
0

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ವಿವಾಹ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಇದರಿಂದ ಮನನೊಂದು ಚೈತ್ರಾ ಕೋಲಾರದ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರಿಯಕರ ನಾಗಾರ್ಜುನ್ ಮದುವೆಯಾದ ಬಳಿಕ ವಿವಾದ ಸೃಷ್ಠಿಯಾಗಿದ್ದು, ಪೆನಾಯಿಲ್ ಕುಡಿದಿರುವ ಚೈತ್ರಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

ಪೆನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಕೊಟ್ಟೂರು, ಮತ್ತೊಂದೆಡೆ ಆತಂಕದಿಂದ ಆಸ್ಪತ್ರೆ ಹೊರಭಾಗದಲ್ಲಿ ವೈದ್ಯರೊಂದಿಗೆ ಚರ್ಚೆ ಮಾಡುತ್ತಿರುವ ಪೋಷಕರು ಇದೆಲ್ಲಾ ದೃಶ್ಯಗಳು ಕಡು ಬಂದಿದ್ದು ಕೋಲಾರದ ಇಟಿಸಿಎಂ ಆಸ್ಪತ್ರೆಯಲ್ಲಿ. ಹೌದು ಕಳೆದ ಮಾರ್ಚ್- ೨೯ ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬುವರೊಂದಿಗೆ ಮದುವೆಯಾದ ದಿನವೇ ಮದುವೆ ವಿವಾದ ಪೊಲೀಸ್ ಠಾಣೆ ಮಟ್ಟಿಲೇರುವ ಮೂಲಕ ವಿವಾಹ ವಿವಾದ ಸೃಷ್ಠಿಯಾಗಿತ್ತು.

ಅಂದಿನಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಗುರುವಾರ ಮುಂಜಾನೆ ೫ ಗಂಟೆ ಸುಮಾರಿಗೆ ಕೋಲಾರ ನಗರದ ಕುರುಬರಪೇಟೆ ಮನೆಯಲ್ಲಿ ಪೆನಾಯಿಲ್ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾಳೆ. ಪೆನಾಯಿಲ್ ಕುಡಿದು ವಾಂತಿ ಮಾಡುತ್ತಾ ಒದ್ದಾಡುತ್ತಿದ್ದ ಚೈತ್ರಾಳನ್ನ ಕಂಡ ಪೋಷಕರು ಕೂಡಲೆ ಆಕೆಯನ್ನ ಮನೆಗೆ ಕೂಗಳತೆ ದೂರದಲ್ಲಿರುವ ಇಟಿಸಿಎಂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮದುವೆ ವಿಚಾರವಾಗಿ ವಿವಾದ ಉಂಟಾಗಿ ತೀವ್ರ ಬೇಸರದಲ್ಲಿದ್ದ ಚೈತ್ರಾ ಇತ್ತೀಚೆಗೆ ಬಹಳ ನೊಂದುಕೊಂಡಿದ್ದಳು ಹಾಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಅನ್ನೋದು ಪೋಷಕರ ಮಾತು.

ಇನ್ನೂ ಚೈತ್ರಾ ಮದುವೆ ಕುರಿತು ತಗಾದೆ ತೆಗೆದಿರುವ ನಾಗಾರ್ಜುನ್ ಪೋಷಕರು ಚೈತ್ರಾ ಸಿನಿಮಾ ರಂಗದಲ್ಲಿರುವುದೆ ಪೋಷಕರ ವಿರೋಧಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸಿನಿಮಾ ರಂಗದಲ್ಲಿರುವುದರಿಂದ ನಡೆತೆ ಸರಿಯಿಲ್ಲ ಜೊತೆಗೆ ಜಾತಿ ಅಡ್ಡಿಯೂ ಇರಬಹುದು ಎನ್ನಲಾಗಿದೆ. ಹಾಗಾಗಿ ಕಳೆದ ೧೦ ದಿನಗಳಿಂದ ಎರಡು ಕುಟುಂಬದವರ ಮಧ್ಯೆ ಮಾತಕತೆ ನಡೆಯಿತಿದ್ದು, ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಚೈತ್ರಾ ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾಳೆ ಎಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ನಾಗರ್ಜುನ್ ಸಂಬಂಧಿಕರು ದೂರು ನೀಡಿದ್ದಾರೆ. ಜೊತೆಗೆ ಚೈತ್ರಾ ಪ್ರೀತಿಯ ಸಂಕೇತದ ಹಲವು ವೀಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಲ್ಲದೇ ಹೀಗಾಗಲೆ ಮದುವೆ ವಿವಾದ ಎಲ್ಲೆಡೆ ಹರಡಿದ್ದು ಮರ್ಯಾದೆಗೆ ಅಂಜಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಅನ್ನೋದು ಅಣ್ಣಾ ಪ್ರದೀಪ್ ಮಾತು. ಸಧ್ಯ ೨೪ ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ, ಪ್ರಾಣಕ್ಕೆ ಯಾವುದೆ ರೀತಿಯ ತೊಂದರೆ ಇಲ್ಲ ಅನ್ನೋದು ವೈದ್ಯರ ಮಾತು.

ಒಟ್ಟಿನಲ್ಲಿ ನವ ವಧುವಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕಾಗಿದ್ದ ಚೈತ್ರಾ ಪೋಷಕರ ವಿರೋಧ ಕಟ್ಟಿಕೊಂಡು ಇತ್ತ ನಾಗಾರ್ಜುನ್ ಪ್ರೀತಿಯೂ ಇಲ್ಲದೆ, ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾಳೆ. ಇದು ಇನ್ನೂ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತೇ ಏನೆಲ್ಲಾ ಆಗುತ್ತೆ ಆನ್ನೋದನ್ನ ಕಾದು ನೋಡಬೇಕಿದೆ.

Previous articleನಾಳೆಯಿಂದಲೇ ನೈಟ್ ಕರ್ಫೂ ಜಾರಿ ಆಗುತ್ತಾ?; ಪ್ರಜಾ ಟಿವಿ ವಿಶೇಷ ವರದಿ
Next articleಸಾರಿಗೆ ನೌಕರರ ಮುಷ್ಕರ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದೇನು?!

LEAVE A REPLY

Please enter your comment!
Please enter your name here