Home District ಬಿಳಿಗಿರಿರಂಗನ ಬೆಟ್ಟಕ್ಕೆ ಕೊನೆಗೂ ಬಂತು ಹೊಸ ರಥ; ಹೊಸ ರಥ ಬೆಟ್ಟಕ್ಕೆ ಬರುತ್ತಿದ್ದಂತೆ ವರುಣನ ಸಿಂಚನ!

ಬಿಳಿಗಿರಿರಂಗನ ಬೆಟ್ಟಕ್ಕೆ ಕೊನೆಗೂ ಬಂತು ಹೊಸ ರಥ; ಹೊಸ ರಥ ಬೆಟ್ಟಕ್ಕೆ ಬರುತ್ತಿದ್ದಂತೆ ವರುಣನ ಸಿಂಚನ!

ಬಿಳಿಗಿರಿರಂಗನ ಬೆಟ್ಟಕ್ಕೆ ಕೊನೆಗೂ ಬಂತು ಹೊಸ ರಥ; ರಥ ಬೆಟ್ಟಕ್ಕೆ ಬರುತ್ತಿದ್ದಂತೆ ವರುಣನ ಸಿಂಚನ

634
0

ಚಾಮರಾಜನಗರ ಬ್ರೇಕಿಂಗ್: ಬಿಳಿಗಿರಿರಂಗನ ಬೆಟ್ಟಕ್ಕೆ ಕೊನೆಗೂ ಬಂತು ಹೊಸ ರಥ. ಕಳೆದ ನಾಲ್ಕು ವರ್ಷಗಳಿಂದ ರಥೋತ್ಸವ ಇಲ್ಲದೆ ಕಳೆಗುಂದಿದ್ದ ಬಿಳಿಗಿರಿರಂಗನ ಬೆಟ್ಟ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ. ನೂತನ ರಥ ಬೆಟ್ಟಕ್ಕೆ ಬರುತ್ತಿದ್ದಂತೆ ವರುಣನ ಸಿಂಚನ.ಬೆಂಗಳೂರಿನಿಂದ ನೂತನ ರಥ ಅಡ್ಡಿ ಇಲ್ಲದೆ ಬಿಳಿಗಿರಿರಂಗನ ಬೆಟ್ಟಕ್ಕೆ ಆಗಮನ.ಮಂಗಳವಾದ್ಯದೊಂದಿಗೆ ಬರಮಾಡಿಕೊಂಡ ದೇವಾಲಯದ ಆಡಳಿತ ಮಂಡಲಿ.

ಹೌದು…, ಅಂತೂ ಇಂತೂ ಬಿಳಿಗಿರಿರಂಗನ ಬೆಟ್ಟಕ್ಕೆ ಬಂತೇ ಬಿಡ್ತು ನೂತನ ರಥ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ನೂತನ ರಥ ಆಗಮಿಸುತ್ತಿದ್ದಂತೆ ವರುಣನ ಸಿಂಚನವಾಗಿದ್ದು ವಿಶೇಷವಾಗಿದೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಇದ್ದ ಹಳೆಯ ರಥ ಶಿಥಲವಾಗಿದ್ದರಿಂದ ಕಳೆದ ನಾಲ್ಕು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ನೂತನ ರಥ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ಮುಂದಾಗಿ ಬೆಂಗಳೂರಿನಲ್ಲಿ ನೂತನ ರಥ ನಿರ್ಮಾಣ ಮಾಡುವ ಕಾರ್ಯ ಮಾಡಿಸಿತು.

ಯುಗಾದಿ ಕಳೆದು ಮೂರು ದಿನಗಳಲ್ಲೆ ಬೆಂಗಳೂರಿನಿAದ ನೂತನ ರಥ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲದೆ ತಲುಪಿದ್ದದು, ದೇವಾಲಯದ ಆಡಳಿತ ಮಂಡಲಿ ಮಂಗಳ ವಾದ್ಯಗಳೊಂದಿಗೆ ಬರಮಾಡಿಕೊಂಡರು.

ಬಿಳಿಗಿರಿರಂಗನ ಬೆಟ್ಟಕ್ಕೆ ನೂತನ ರಥ ಗುರುವಾರ ಆಗಮಿಸುವ ಹಿನ್ನಲೆಯಲ್ಲಿ ಬುಧವಾರವೇ ಬೆಟ್ಟದಲ್ಲಿದ್ದ ಹಳೇ ರಥವನ್ನು ಜೆಸಿಬಿ ಮೂಲಕ ಸ್ಥಾನ ಪಲ್ಲಟ ಮಾಡಿದ್ದು, ಹಳೆಯ ರಥ ನಿಲುಗಡೆಯ ಸ್ಥಳದಲ್ಲೇ ನೂತನ ರಥ ನಿಲ್ಲುತ್ತಿದೆ.

ಏಪ್ರಿಲ್ 2 ರಂದು ಬಿಳಗಿರಿರಂಗನಬೆಟ್ಟದಲ್ಲಿ ನೂತನ ಜೀರ್ಣೋದ್ದಾರ ದೇವಾಲಯದ ಮಹಾ ಸಂಪ್ರೋಕ್ಷಣೆ, ರಾಜಗೋಪುರ ಕಳಸ ಪ್ರತಿಷ್ಠಾಪನೆ ದಾರ್ಮಿಕ ಕಾರ್ಯ ನಡೆದಿದ್ದು, ಇದಾದ ವಾರದ ಅಂತರದಲ್ಲೇ ನೂತನ ರಥ ಆಗಮಿಸಿದ್ದು ಭಕ್ತರಲ್ಲಿ ಸಂತಸ ಕಂಡು ಬಂದಿದೆ.

VIAಬಿಳಿಗಿರಿರಂಗನ ಬೆಟ್ಟಕ್ಕೆ ಕೊನೆಗೂ ಬಂತು ಹೊಸ ರಥ; ರಥ ಬೆಟ್ಟಕ್ಕೆ ಬರುತ್ತಿದ್ದಂತೆ ವರುಣನ ಸಿಂಚನ
SOURCEಬಿಳಿಗಿರಿರಂಗನ ಬೆಟ್ಟಕ್ಕೆ ಕೊನೆಗೂ ಬಂತು ಹೊಸ ರಥ; ರಥ ಬೆಟ್ಟಕ್ಕೆ ಬರುತ್ತಿದ್ದಂತೆ ವರುಣನ ಸಿಂಚನ
Previous articleಕೊರೊನಾ ಹಿನ್ನಲೆ; ಜನರ ಜೀವದ ಬಗ್ಗೆ ಬಿಜೆಪಿ ನಾಯಕರಿಗೆ ಸ್ವಲ್ಪವೂ ಕಾಳಜಿ ಇಲ್ಲ; ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
Next articleಉಪಚುನಾವಣೆ ಸಮಯದಲ್ಲಿ 2ಮೂಟೆಯಷ್ಟು ಹಣ ಪೊಲೀಸರ ವಶಕ್ಕೆ; ಈ ಕುರಿತು ಡಿಕೆಶಿ ಹೇಳಿದ್ದೇನು?

LEAVE A REPLY

Please enter your comment!
Please enter your name here