ರಾಷ್ಟ್ರಧ್ವಜಕ್ಕೆ BJP ನಾಯಕರಿಂದ ಅವಮಾನ: ರಾಷ್ಟ್ರಧ್ವಜದ ಬ್ಯಾಡ್ಜ್ ಉಲ್ಟಾ ಧರಿಸಿದ ಕಮಲ ನಾಯಕರು

ಬೆಂಗಳೂರು ರಾಜಕೀಯ

ಬೆಂಗಳೂರು : 75ನೇ ಸ್ವಾತಂತ್ರ್ಯ ಮಹೋತ್ಸವದಲ್ಲಿ ಸಚಿವರ ಮಹಾ ಎಡವಟ್ಟಾಗಿದ್ದು, ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕೆ ಬಿಜೆಪಿ ನಾಯಕರು ಅವಮಾನ ಮಾಡಿದ್ದಾರೆ. ನಗರದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ABVP ಧ್ವಜ ಹಾರಾಟ ಮಾಡಿದ್ದು, ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಿಸುವ ಹಾಗಿಲ್ಲ. ಸಚಿವರ ಈ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷರು, ಸಚಿವರಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ.

ಇನ್ನು, ಕೆ.ಆರ್.ಪುರಂನಲ್ಲಿ ಕಟೀಲ್​ ಹಾಗೂ ಸಚಿವ ಬೈರತಿ ಬಸವರಾಜ್​ರಿಂದ ಅಪಮಾನ ಆಗಿದ್ದು, ರಾಷ್ಟ್ರಧ್ವಜದ ಬ್ಯಾಡ್ಜ್ ಅನ್ನು ಕಮಲ ನಾಯಕರು ಉಲ್ಟಾ ಧರಿಸಿದ್ದಾರೆ. ಬ್ಯಾಡ್ಜ್​ ಉಲ್ಟಾ ಹಾಕಿಕೊಂಡು ರೋಡ್ ಶೋ ಕೊಟ್ಟ ನಾಯಕರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಾರ್ವಜನಿಕರ ಮುಂದೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published.