ಬಿಜೆಪಿಯವರ ಹರ್ ಘರ್ ತಿರಂಗ ಕೇವಲ ನಾಟಕವಷ್ಟೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು ರಾಜಕೀಯ

ಬೆಂಗಳೂರು: ಹರ್ ಘರ್ ತಿರಂಗ ಅಭಿಯಾನ ನಾಟಕ, ಕೇವಲ ಲೂಟಿಯೇ ಬಿಜೆಪಿ ಕೊಡುಗೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಸಂಬಂಧ ಸರ್ವಜ್ಞ ನಗರದಲ್ಲಿ ಮಾತನಾಡಿದ ಅವರು, ಇಂದು ನಾವೆಲ್ಲ ಸ್ವತಂತ್ರ್ಯರಾಗಿದ್ದೇವೆ. ಇದಕ್ಕೆಲ್ಲಾ ಕಾಂಗ್ರೆಸ್ ಪಕ್ಷವೇ ಕಾರಣ. ದೇಶಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಆ.15ರಂದು 75ನೇ ಸ್ವಾತಂತ್ರೋತ್ಸವದ ನಡಿಗೆ ಹಮ್ಮಿಕೊಂಡಿದ್ದೇವೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ.

ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗದ ಜನರು ಭಾಗವಹಿಸಲಿದ್ದಾರೆ ಎಂದರು. ಇನ್ನೂ ರಾಷ್ಟ್ರಧ್ವಜಕ್ಕೆ ಗೌರವ ಕೊಡುತ್ತಿರೋದು ಕಾಂಗ್ರೆಸ್. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕಾಂಗ್ರೆಸ್​ನಿಂದ ಆಗಿದೆ. ದೇಶಕ್ಕೆ ಇವರದ್ದೇನು ಕೊಡುಗೆ ಇದೆ. ಬಿಜೆಪಿಯವರ ಹರ್ ಘರ್ ತಿರಂಗ ಕೇವಲ ನಾಟಕವಷ್ಟೆ. ಲೂಟಿಯೇ ಇವರ ಕೊಡುಗೆ. ಬರೀ‌ ಲೂಟಿ ಮಾಡೋದೆ ಇವರ ಕೆಲಸ. ಇಡೀ ದೇಶದಲ್ಲಿ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published.