Home Home ಬ್ಲ್ಯಾಕ್ ಫಂಗಸ್ 7 ಪ್ರಕರಣ : ಇಬ್ಬರಿಗೆ ಶಸ್ತ್ರ ಚಿಕಿತ್ಸೆ,ಆತಂಕ ಬೇಡ; ಜಿಲ್ಲಾಧಿಕಾರಿ ಆರ್ ವೆಂಕಟೇಶ...

ಬ್ಲ್ಯಾಕ್ ಫಂಗಸ್ 7 ಪ್ರಕರಣ : ಇಬ್ಬರಿಗೆ ಶಸ್ತ್ರ ಚಿಕಿತ್ಸೆ,ಆತಂಕ ಬೇಡ; ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ್

487
0
SHARE

ರಾಯಚೂರು; ಬ್ಲ್ಯಾಕ್ ಫಂಗಸ್ 7 ಪ್ರಕರಣ : ಇಬ್ಬರಿಗೆ ಶಸ್ತ್ರ ಚಿಕಿತ್ಸೆ – ಆತಂಕ ಬೇಡ. ಮೂರನೇ ಅಲೆಗೆ ಮುಂಚಿತವಾಗಿ ಜಿಲ್ಲೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ ಐಸಿಯು ಆಕ್ಸಿಜನ್ ವಿಭಾಗ ತೆರೆಯಲಾಗಿದೆ — ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ್.

ರಾಯಚೂರು ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಯಲ್ಲಿ ೨೮ ಹಾಸಿಗೆಗಳ ಪ್ರತ್ಯೇಕ ವ್ಯವಸ್ಥೆ ಮಾಡುವುದರೊಂದಿಗೆ ಮೂರನೇ ಅಲೆ ಕೊರೊನಾ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗೂ ೫೦ ಮಕ್ಕಳ ವೆಂಟಿಲೇಟರ್ ವಿಭಾಗ ಹಾಗೂ ೨೦೦ ಮಕ್ಕಳ ಹಾಸಿಗೆಗಳ ಆಕ್ಸಿಜನ್ ವಿಭಾಗವನ್ನು ಸಿದ್ಧಗೊಳಿಸಲು ಸೂಚಿಸಲಾಗಿದೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಹೇಳಿದರು.

ಅವರಿಂದು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸಿದರು. ಬ್ಲ್ಯಾಕ್ ಫಂಗಸ್ ಪ್ರಕರಣ ಹಿನ್ನೆಲೆಯಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ ೭ ಜನ ಬ್ಲ್ಯಾಕ್ ಫಂಗಸ್‌ಗೆ ಗುರಿಯಾಗಿದ್ದರೆ ಈ ಏಳು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ತಲಾ ೧೪ ಹಾಸಿಗೆಗಳ ಎರಡು ವಿಭಾಗಗಳನ್ನು ಆರಂಭಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ರಿಮ್ಸ್ ಆಸ್ಪತ್ರೆಯ ಇಎನ್‌ಟಿ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಇಬ್ಬರಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ಎಂಪೋಟೇರಿಸಿನ್ ಬಿ ಔಷಧಿ ಲಭ್ಯವಿಲ್ಲ. ಆದರೆ, ಸರ್ಕಾರದಿಂದ ೫೦ ಇಂಜಕ್ಷನ್ ಮಂಜೂರಾಗಿವೆ. ಇಂದು ಸಂಜೆ ವೇಳೆಗೆ ಜಿಲ್ಲೆಗೆ ತಲುಪುವ ನಿರೀಕ್ಷೆಯಿದೆ.

ಎಂಪೋಟೇರಿಸಿನ್ ಇಂಜಕ್ಷನ್ ಪರ್ಯಾಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಏಳು ಜನ ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆಗೆ ೩೫೦ ಎಂಪೋಟೇರಿಸಿನ್ ಇಂಜಕ್ಷನ್ ಅಗತ್ಯವಿದೆ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ೪೦ ರಿಂದ ೫೦ ಇಂಜಕ್ಷನ್ ನೀಡಬೇಕಾಗುತ್ತದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿ ದೊರೆಯುವ ಪರ್ಯಾಯ ಔಷಧಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಬ್ಲ್ಯಾಕ್ ಫಂಗಸ್ ಕಂಡು ಬಂದರೂ, ರಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಪ್ರಕರಣ ಬಂದರೇ ರಿಮ್ಸ್ ಆಸ್ಪತ್ರೆಗೆ ಕಳುಹಿಸಲು ಸೂಚಿಸಲಾಗಿದೆ. ಈಗಾಗಲೇ ಕೊರೊನಾ ಚಿಕಿತ್ಸೆಗೆ ಸಂಬಂಧಿಸಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತ್ಯಂತ ವೈಜ್ಞಾನಿಕ ಮತ್ತು ಅಗತ್ಯಕ್ಕನುಗುಣವಾಗಿ ಚಿಕಿತ್ಸೆ ನೀಡುತ್ತಿರುವುದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಶೇ.೫೦ ರಷ್ಟು ಹಾಸಿಗೆಗಳು ಖಾಲಿಯಿವೆ. ವೆಂಟಿಲೇಟರ್ ಸಹ ಲಭ್ಯವಿವೆ. ಯಾರು ಆತಂಕ ಪಡುವುದು ಬೇಡ. ಮೂರನೇ ಅಲೆ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳ ಮೇಲೆ ಇದು ಪರಿಣಾಮ ಬೀರುವ ಮುನ್ಸೂಚನೆ ಹಿನ್ನೆಲೆಯಲ್ಲಿ ೫೦ ಮಕ್ಕಳ ಚಿಕಿತ್ಸಾ ವೆಂಟಿಲೇಟರ್‌ದೊಂದಿಗೆ ೨೦೦ ಆಕ್ಸಿಜನ್ ಆಧಾರಿತ ಚಿಕಿತ್ಸೆಗೆ ವಿಭಾಗಗಳನ್ನು ಆರಂಭಿಸಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ರಿಮ್ಸ್ ಆಸ್ಪತ್ರೆಗೆ ೨೦ ಕೆಎಲ್ ಆಕ್ಸಿಜನ್ ಟ್ಯಾಂಕ್ ಅಳವಡಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮುಂದಿನ ಎರಡು ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ಜಿಲ್ಲೆಯಲ್ಲಿ ೫೦ ಕೆಎಲ್ ಆಕ್ಸಿಜನ್ ಲಭ್ಯವಿದೆ. ರಿಮ್ಸ್ ನೂತನ ಟ್ಯಾಂಕ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ನಂತರ ಜಿಲ್ಲೆಯಲ್ಲಿ ೭೦ ಕೆಎಲ್ ಆಕ್ಸಿಜನ್ ಲಭ್ಯವಿರುತ್ತದೆ. ೫ ದಿನಕ್ಕೆ ಸಾಕಾಗುವಷ್ಟು ಆಕ್ಸಿಜನ್ ಸೌಲಭ್ಯ ದೊರೆಯಲಿದೆ. ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಯಾರು ಭಯಪಡುವ ಅಗತ್ಯವಿಲ್ಲವೆಂದು ಅವರು ಧೈರ್ಯ ಹೇಳಿದರು.

ಈ ಸಂದರ್ಭದಲ್ಲಿ ರಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವನಗೌಡ ಎಂ. ಪಾಟೀಲ್, ಡಾ. ಬಾಸ್ಕರ್ ಸೇರಿದಂತೆ ರಿಮ್ಸ್ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.

 

<div class=”iframely-embed”><div class=”iframely-responsive” style=”padding-bottom: 70.0844%; padding-top: 120px;”><a href=”http://prajaatvkannada.com/corona-doctor/” data-iframely-url=”//cdn.iframe.ly/ljCtrcZ”></a></div></div><script async src=”//cdn.iframe.ly/embed.js” charset=”utf-8″></script>

LEAVE A REPLY

Please enter your comment!
Please enter your name here