Home Health ನಾಡಿನ ದೊರೆ ‘ಯಡಿಯೂರಪ್ಪನವರನ್ನೂ ಬಿಡದ ಮಹಾಮಾರಿ ಕೊರೊನಾ’!

ನಾಡಿನ ದೊರೆ ‘ಯಡಿಯೂರಪ್ಪನವರನ್ನೂ ಬಿಡದ ಮಹಾಮಾರಿ ಕೊರೊನಾ’!

372
0
SHARE

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿತ್ತು, ಮತ್ತೆ ಒಂದೇ ದಿನದಲ್ಲಿ 2,17ಲಕ್ಷ ಮಂದಿಗೆ ಕೊರೊನಾ ಸೋಂಕು ತಗಲಿರುವುದರಿಂದ ಒಟ್ಟು ಸೋಂಕಿತರ ಸಂಖ್ಯೆ ಒಂದೂವರೆ ಕೋಟಿಯತ್ತ ಮುಖ ಮಾಡಿದೆ. ಕಳೆದ 24 ಗಂಟೆಗಳಲ್ಲಿ 2,17,353 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದು ದಾಖಲೆಯಾಗಿದೆ. ಇದರ ಜತೆಗೆ ದೇಶದ ಕೊರೊನಾ ಪಿಡೀತರ ಸಂಖ್ಯೆ 1,42,91,917ಕೋಟಿಗೆ ಏರಿಕೆಯಾಗಿದೆ.ಕೊರೊನಾ ಸೋಂಕು ಹೆಚ್ಚಾಗುತ್ತಾ ಇರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 15ಲಕ್ಷದ ಗಡಿ ದಾಟಿದೆ. ನಿನ್ನೆಯಿಂದ 1185 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 1,74,308ಲಕ್ಷವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಚೇತರಿಕೆ ಪ್ರಮಾಣವೂ ಗಣನೀಯವಾಗಿ ಕುಸಿಯತೊಡಗಿದೆ.

ನಾಡಿನ ದೊರೆ ಯಡಿಯೂರಪ್ಪಗೆ ಮಹಾಮಾರಿ ಕೊರೊನಾ ವಕ್ಕರಿಸಿದೆ. ಉಪಚುನಾವಣೆ ಪ್ರಚಾರದ ವೇಳೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಆರ್‌ಟಿಪಿಸಿಆರ್ ಟೆಸ್ಟ್‌ ಮಾಡಿಸಿದಾಗ ಪಾಸಿಟಿವ್ ಬಂದಿದೆ. ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್ ಬಂದಿರುವುದು ಇಡೀ ರಾಜ್ಯದ ಜನರನ್ನೇ ದಿಘ್ಬೆರಗಾಗಿಸಿದೆ. ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ಬಿಎಸ್ ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಸಿಎಂ ಯಡಿಯೂರಪ್ಪ. 2ನೇ ಬಾರಿಗೆ ಸಿಎಂ ಯಡಿಯೂರಪ್ಪಗೆ ಕೊರೊನಾ ದೃಢಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯಡಿಯೂರಪ್ಪ ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪಗೆ ಹೆಚ್ಚಿನ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ಸಿಎಂಗೆ ಜ್ವರ ಕಂಡುಬಂದಿದ್ದು, ತೀವ್ರ ಜ್ವರ ಹಿನ್ನಲೆ ಯಡಿಯೂರಪ್ಪಗೆ ಕೊರೂನಾ ಟೆಸ್ಟ್ ನಡೆಸಲಾಗಿದೆ. ಕೋವಿಡ್ ಮೊದಲ ಡೋಸ್ ಪಡೆದಿದ್ದ ಸಿಎಂ ಬಿಎಸ್‌ವೈ. ಲಸಿಕೆ 2ನೇ ಡೋಸ್ ಪಡೆಯಲು ಇನ್ನೂ ಸಮಯವಿತ್ತು. ಆ್ಯಂಟಿಜೆನ್ ಟೆಸ್ಟ್‌ನಲ್ಲಿ ಕೊರೊನಾ ನೆಗಟಿವ್ ಬಂದಿತ್ತು. RTPCR ಟೆಸ್ಟ್ ವರದಿಯಲ್ಲಿ ಕೊರೊನಾ ಹಾಸಿಟಿವ್ ಕಂಡು ಬಂದಿರುವುದು ರಾಜ್ಯದಲ್ಲೇ ದೊಡ್ಡ ಸುದ್ದಿಯಾಗಿದೆ.

LEAVE A REPLY

Please enter your comment!
Please enter your name here