Home District ದಿನೇ ದಿನೇ ಪ್ರಭಲವಾಗುತ್ತಿದೆ ಯಡಿಯೂರಪ್ಪ ವಿರೋಧಿ ಬಣ; ಅವರನ್ನು ಕೆಳಗಿಳಿಸಲು ಮುಹೂರ್ತ ಫಿಕ್ಸ್!

ದಿನೇ ದಿನೇ ಪ್ರಭಲವಾಗುತ್ತಿದೆ ಯಡಿಯೂರಪ್ಪ ವಿರೋಧಿ ಬಣ; ಅವರನ್ನು ಕೆಳಗಿಳಿಸಲು ಮುಹೂರ್ತ ಫಿಕ್ಸ್!

1003
0

ವರದಿ: ಗೋವಿಂದರಾಜು

ಒಂದು ಕಡೆ ಸಾರಿಗೆ ನೌಕರರ ಪ್ರತಿಭಟನೆ ಬಸ್ ಬಂದ್,ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ, ಮೂರು ಕ್ಷೇತ್ರಗಳ ಉಪಚುನಾವಣೆ, ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ಅಂತೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ತಲೆ ಕೆಡಿಸಿಕೊಂಡು ಕೂತಿದ್ರೆ, ಮತ್ತೊಂದೆಡೆ ಯಡಿಯೂರಪ್ಪ ವಿರೋಧಿ ಬಣ, ನಾಯಕತ್ವ ಬದಲಾವಣೆಗೆ ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮೇ 2 ರಂದು ಉಪಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಬಸಗೌಡ ಪಾಟೀಲ್ ಯತ್ನಾಳ್ ಮಾತನಾಡಿ ಒಂದು ಕಡೆ ಸಾರಿಗೆ ನೌಕರರ ಪ್ರತಿಭಟನೆ ಬಸ್ ಬಂದ್,ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ, ಮೂರು ಕ್ಷೇತ್ರಗಳ ಉಪಚುನಾವಣೆ, ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ಅಂತೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ತಲೆ ಕೆಡಿಸಿಕೊಂಡು ಕೂತಿದ್ರೆ, ಮತ್ತೊಂದೆಡೆ ಯಡಿಯೂರಪ್ಪ ವಿರೋಧಿ ಬಣ, ನಾಯಕತ್ವ ಬದಲಾವಣೆಗೆ ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಯಡಿಯೂರಪ್ಪ ವಿರೋಧಿ ಬಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಧಾರವಾಡ ಶಾಸಕ ಅರವಿಂದ ಬೆಲ್ಲದ್ ಅವರು ಇಂದೂ ಕೂಡ ವಿಧಾನಸೌಧದಲ್ಲಿ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಮೇ 2 ರಂದು ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಶತಸಿದ್ದ ಎಂದರು. ಸೂರ್ಯ ಚಂದ್ರ ಇರುವವರೆಗೂ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎಂದರೆ ಏನರ್ಥ, ಯಡಿಯೂರಪ್ಪ ಕುಟುಂಬ ವರ್ಗಕ್ಕೆ ಈ ರಾಜ್ಯವನ್ನು ಯಾರಾದರೂ ಬರೆದುಕೊಟ್ಟಿದ್ದಾರಾ, ಪಕ್ಷದ ಸಿದ್ದಾಂತದ ಹಿನ್ನೆಲೆಯಲ್ಲಿ ಅವರಿಗೆ ಎರಡೂವರೆ ವರ್ಷ ಅವಕಾಶ ಕೊಟ್ಟಿದ್ದೆ ಹೆಚ್ಚು ಎಂದರು.

ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದ ಗ್ರಾಮೀಣಾಭಿವೃಧ್ದಿ ಸಚಿವ ಕೆ.ಎಸ್.ಈಶ್ವರಪ್ಪ ತಣ್ಣಗಾಗಿಲ್ಲ.ಅವರು ಯಾರಿಗೂ ಶರಣಾಗಿಲ್ಲ. ಈಶ್ವರಪ್ಪನವರಂತೆಯೇ ಇನ್ನು ಹಲವು ಬಿಜೆಪಿ ಶಾಸಕರು ಸಧ್ಯದಲ್ಲೇ ರೊಚ್ಚಿಗೇಳಲಿದ್ದಾರೆ. ಬಿಜೆಪಿ ಹೈ ಕಮಾಂಡ್ ವೀಕ್ ಆಗಿಲ್ಲ. ಪೆಡರಲ್ ಬ್ಯಾಂಕ್ ಹಗರಣ, ಅಧಿಕಾರಿಗಳ ವರ್ಗಾವಣೆ ದಂಧೆ, ಕೋರ್ಟ್ ಛೀಮಾರಿ ಹಾಕಿರುವುದು ಎಲ್ಲವನ್ನೂ ಹೈ ಕಮಾಂಡ್ ಗಮನಿಸುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಎಲ್ಲ ಗೊತ್ತಿದೆ ಆದರೆ, ಅವರು ಏನೂ ಮಾಡಲಾಗುತ್ತಿಲ್ಲ. ಇಷ್ಟರಲ್ಲೇ ಎಲ್ಲದಕ್ಕೂ ಕೊನೆ ಹಾಡುತ್ತಾರೆ ಎಂದು ಯತ್ನಾಳ್ ಹೇಳಿದ್ರು.

ಇದೇ ವೇಳೆ ಕಾಂಗ್ರೆಸ್ ಪ್ರಮುಖರ ಮೇಲೂ ಸಹ ಯತ್ನಾಳ್ ಹರಿಹಾಯ್ದಿದ್ದಾರೆ.ಯಡಿಯೂರಪ್ಪ ಸಿಎಂ ಆಗಿ ಮುಂದುವರಿದ್ರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುಲಭವಾಗಿ ಸ್ವೀಪ್ ಮಾಡುತ್ತೆ ಅಂತಾ ಕಾಂಗ್ರೆಸ್ ನಾಯಕರು ಲೆಕ್ಕಾ ಹಾಕಿದ್ದಾರೆ. ಹಾಗಾಗಿಯೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಯಡಿಯೂರಪ್ಪನವರ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.

Previous articleಬಸ್ ನಿಲ್ದಾಣದಲ್ಲಿ ಕುಡಿದು ಬಂದು ಗಲಾಟೆ ಮಾಡಿದ ಸಾರಿಗೆ ಇಲಾಖೆ ಸಿಬ್ಬಂದಿ; ವಿಡಿಯೋ ವೈರಲ್
Next articleಮುಷ್ಕರದ ನಡುವೆಯೂ ರಸ್ತೆಗಿಳಿದ ಸರ್ಕಾರಿ ಬಸ್ಸುಗಳು!

LEAVE A REPLY

Please enter your comment!
Please enter your name here