Home Cinema ಕೊರೋನಾ ಸುಳಿಯಲ್ಲಿ ಬಚ್ಚನ್ ಕುಟುಂಬ.. ಬೆಚ್ಚಿದೆ ಬಣ್ಣದ ಲೋಕ..! ದಿಗ್ಬಂಧನದಲ್ಲಿದ್ದರೂ ಮನೆಯೊಳಗೆ ಬಂದಿದ್ದೇಗೆ ಕೊರೋನಾ ಕಂಟಕ..!

ಕೊರೋನಾ ಸುಳಿಯಲ್ಲಿ ಬಚ್ಚನ್ ಕುಟುಂಬ.. ಬೆಚ್ಚಿದೆ ಬಣ್ಣದ ಲೋಕ..! ದಿಗ್ಬಂಧನದಲ್ಲಿದ್ದರೂ ಮನೆಯೊಳಗೆ ಬಂದಿದ್ದೇಗೆ ಕೊರೋನಾ ಕಂಟಕ..!

698
0
SHARE

ಮುಂಬೈ. ಬಚ್ಚನ್ ಕುಟುಂಬಕ್ಕೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನುವ ವಿಚಾರ ಇಡೀ ಭಾರತೀಯ ಚಿತ್ರರಂಗವನ್ನೇ ದಂಗುಬಿಡಿಸಿಬಿಟ್ಟಿದೆ. ಈ ಕೊರೋನಾ ಎನ್ನುವ ಮಹಾಮಾರಿ ಹೇಳಿಕೇಳಿ ಬರಲ್ಲ. ಆದರೆ ಮಾರ್ಚ್.25ರಿಂದ ಅಂದ್ರೇ ಲಾಕ್‌ಡೌನ್ ಶುರುವಾದಗಿನಿಂದ ಮನೆಯಲ್ಲೇ ಇದ್ದ ಬಾಲಿವುಡ್ ಕಾ ಶಹನ್ ಷಾ ಅಮಿತಾಭ್‌ಗೆ ಕೊರೋನಾ ಪಾಸಿಟಿವ್ ಆಗಿರೋ ಮಾಹಿತಿ ಎಲ್ಲರಿಗೂ ಬಿಗ್ ಶಾಕ್ ನೀಡಿದೆ. ಈ ಡೆಡ್ಲಿ ಕೊರೋನಾ ಎಲ್ಲಿ,ಹೇಗೆ, ಯಾವಾಗ ವಕ್ಕರಿಸುತ್ತೆ ಅಂತ ಹೇಳೊಕೆ ಅಸಾಧ್ಯ. ಇದೇ ವಿಚಾರಕ್ಕೆ ಬಾಲಿವುಡ್ ಘಟಾನುಘಟಿಗಳು ಈಗ ಜೀವ ಭಯದಲ್ಲಿದ್ದಾರೆ.

ಅಮಿತಾಭ್ ಟ್ವಿಟರ್‌ನಲ್ಲಿ ತಮಗೆ ಕೊರೋನಾ ಪಾಸಿಟಿವ್ ಇದೆ. 10 ದಿನಗಳಿಂದ ತಮ್ಮ ಸಂಪರ್ಕದಲ್ಲಿದ್ದವರಿಗೂ ಕೊರೋನಾ ಟೆಸ್ಟ್ ಮಾಡಿಕೋಳ್ಳೊಕೆ ಹೇಳಿದೀನಿ ಎನ್ನುತ್ತ ಟ್ವಿಟರ್‌ನಲ್ಲಿ ಬಾಂಬ್ ಹಾಕಿದ್ರು. ಈ ವಿಷಯ ಬಾಲಿವುಡ್ ಅಂಗಳದಲ್ಲಿ ಪಾದರಸದಂತೆ ಹರಿದಾಡ್ತು. ಬೇಗ ಹುಷಾರಾಗಿಬಿಡಿ ಬಿಗ್ ಬಿ ಎನ್ನುತ್ತ ಕೋಟ್ಯಂತರ ಜನ ಅಮಿತಾಭ್ ಬಚ್ಚನ್ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ ಮಾಡಿದ್ರು. ತಮ್ಮ ಮನೆಯಿಂದ ಕೇವಲ ಒಂದು ಕಿಲೊಮಿಟರ್ ದೂರದಲ್ಲಿರೋ ಮುಂಬೈನ ನಾನಾವತಿ ಆಸ್ಪತ್ರೆಯ ಬಳಿ ಅಭಿಮಾನಿ ಬಳಗವೂ ಜಮಾಯಿಸಿಬಿಡ್ತು. ಆದರೆ ಅಲ್ಲೇ ಕಾದಿತ್ತು ನೋಡಿ ಮತ್ತೊಂದು ಸ್ಫೋಟಕ ಸುದ್ಧಿ.

ಅಮಿತಾಭ್ ಪುತ್ರ ಅಭಿಷೇಕ್ ಬಚ್ಚನ್‌ಗೂ ಕೊರೋನಾ ಪಾಸಿಟಿವ್ ಎಂಬ ಸುದ್ಧಿ ಗಾಯದ ಮೇಲೆ ಬರೆ ಎಳೆದಂತೆ ಬಂತು. ಅಭಿಷೇಕ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಯಾರು ಆತಂಕಪಡೋ ಅಗತ್ಯವಿಲ್ಲ. ಆಲ್ ಈಸ್ ಫೈನ್. ನಮ್ಮಲ್ಲಿ ಕೆಲವು ಮೈಲ್ಡ್ ಸಿಂಪಟಮ್ಸ್ ಕಾಣಿಸಿಕೊಂಡಿದೆ. ಸೂಕ್ತ ಚಿಕಿತ್ಸೆಯೂ ನಡೆಯುತ್ತಿದೆ ಎಂಬ ಟ್ವಿಟ್ ಹಾಕಿದ್ರು. ಆ ಸಮಯದಲ್ಲಿ ಐಶ್ಚರ್ಯ ರೈ ಬಚ್ಚನ್ ಹಾಗೂ ಜಯಾ ಬಚ್ಚನ್‌ಗೆ ಕೊರೋನಾ ನೆಗೆಟಿವ್ ಕಾಣಿಸಿಕೊಂಡಿತ್ತು. ಬಟ್, ಬೆಳಿಗ್ಗೆ ನಡೆದಿದ್ದೇ ಬೇರೆ, ಐಶ್ಚರ್ಯ ಹಾಗೂ ಪುತ್ರಿ ಆರಾಧ್ಯಗೂ ಕೊರೋನಾ ಪಾಸಿಟಿವ್ ಇದೆ ಎಂಬ ಮಾಹಿತಿ ಬಾಲಿವುಡ್ ಮಂದಿಗೆ ನಡುಕಹುಟ್ಟಿಸಿಬಿಡ್ತು. ಒಟ್ಟಾರೆಯಾಗಿ ಬಚ್ಚನ್ ಕುಟುಂಬದ ನಾಲ್ಕು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂಬ ರಿಪೋರ್ಟ ಕೊಟ್ಟುಬಿಡ್ತು ಮುಂಬೈನ ನಾನಾವತಿ ಹಾಸ್ಪಿಟಲ್.

ಬಚ್ಚನ್ ಕುಟುಂಬಕ್ಕೆ ಕೊರೋನಾ ಅಂಟಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೆ ಅವರ ಬಳಿಯೇ ಉತ್ತರವಿಲ್ಲ. ಯಾಕಂದ್ರೆ ಅಮಿತಾಭ್ ಮನೆಯಲ್ಲಿ ಸುರಕ್ಷಿತವಾಗಿದ್ರು. ಅಭಿಷೇಕ್ ಮಾತ್ರ ತಮ್ಮ ಮುಂದಿನ ಚಿತ್ರಕ್ಕಾಗಿ ಡಬ್ಬಿಂಗ್ ನಡೆಸಲು ಆಚೆ ತೆರಳಿದ್ರು. ಲಾಕ್‌ಡೌನ್ ಸಡಿಲಿಕೆಯ ಭಾಗವಾಗಿ ಶೂಟಿಂಗ್ ಶುರುವಾದಗಿನಿಂದ ಶೂಟಿಂಗ್‌ನಲ್ಲೂ ಭಾಗಿಯಾಗಿದ್ರು.

ಸತತವಾಗಿ ಸಿನಿಮಾಸಂಬಂಧಿತ ಕೆಲಸಗಳಲ್ಲಿ ನಿರತರಾಗಿದ್ದ ವೆಬ್ ಸೀರಿಸ್‌ನತ್ತಲೂ ಆಸಕ್ತಿವಹಿಸಿದ್ರು. ಬೇರೆಬೇರೆ ಜಾಗಗಳಿಗೆ ತೆರಳಿ ಅಲ್ಲಿಂದ ತಮ್ಮ ಮನೆಗೆ ಕೊರೋನಾ ಅಂಟಿಸಿಕೊಂಡು ಬಂದ್ರ ಎನ್ನುವ ಪ್ರಶ್ನೆಯೂ ಈಗ ಅಭಿಮಾನಿಗಳನ್ನ ಕಾಡ್ತಿದೆ. ಅಬಿಷೇಕ್ ಡಬ್ಬಿಂಗ್‌ಗೆ ಹೋಗುತ್ತಿದ್ದ ಸ್ಟುಡಿಯೋ ಕೂಡ ಸೀಲ್ ಆಗಿದೆ.

ಇದರ ಮಧ್ಯೆಯೇ ಅಮಿತಾಭ್ ಬಚ್ಚನ್ ತಮ್ಮ ಅಭಿಮಾನಿಗಳ ಆತಂಕವನ್ನ ಅರ್ಥ ಮಾಡಿಕೊಂಡು ಆಸ್ಪತ್ರೆಯಿಂದಲೇ ವಿಡಿಯೋ ಮೂಲಕ ಮನವಿಯೊಂದನ್ನ ಮಾಡಿದ್ದಾರೆ. ನಾನು ಈಗ ಸುಧಾರಿಸಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿಯೇ ಇದಕ್ಕೆಲ್ಲ ಕಾರಣ. ನಾನು ದೇವರನ್ನೂ ನಿಮ್ಮಲ್ಲೇ ನೋಡುತ್ತೇನೆ ಎನ್ನುವ ಭಾವುಕ ಮೇಸೆಜ್ ಕೊಟ್ಟಿದ್ದಾರೆ.

ಹಾಗೆಯೇ ತಮ್ಮ ಆರೋಗ್ಯದ ಪಿನ್ ಟು ಪಿನ್ ಮಾಹಿತಿ ಕೊಟ್ಟಿರೋ ಅಮಿತಾಭ್ ಮುಂಬೈನ ನಾನಾವತಿ ಆಸ್ಪತ್ರೆಯವರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೊಣ ಎನ್ನುವ ಕರೆ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಬಣ್ಣದ ಲೋಕಕ್ಕೂ ಕೊರೋನಾ ಪಂಚ್ ಸರಿಯಾಗೇ ತಟ್ಟಿದೆ. ಇಷ್ಟುದಿನ ತಮ್ಮ ಟ್ವಿಟರ್‌ನಲ್ಲಿ ಮೂಢನಂಬಿಕೆ ಹಾಗೂ ಕವನಗಳಿಂದ ಬಹಳ ಚರ್ಚೆಗೀಡಾಗಿದ್ದ ಅಮಿತಾಭ್ ಈಗ ಕೊರೋನಾ ವಿಷಯದಲ್ಲೂ ಸುದ್ಧಿಯಾಗಿದ್ದಾರೆ. ಒಂದೇ ಸಲ ಕುಟುಂಬದ ನಾಲ್ವರಿಗೆ ಕೊರೋನಾ ದೃಢ ಪಟ್ಟಿರೋ ವಿಷಯವನ್ನ ಅರಗಿಸಿಕೊಳ್ಳೊಕೆ ಬಹಳ ಸಮಯ ಬೇಕಾಗುತ್ತದೆ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ ಎಂಬ ಸಂದೇಶವೂ ಈ ಘಟನೆಗಳಿಂದ ಅರ್ಥವಾಗಬೇಕಿದೆ. ಎಲ್ಲವೂ ಸರಿಹೋಗಿ ಬಚ್ಚನ್ ಕುಟುಂಬ ಆರೋಗ್ಯಕರವಾಗಿ ವಾಪಸ್ ಆಗಲಿ ಎನ್ನುವ ಆಶಯ ಮಾತ್ರ ಭಾರತೀಯ ಚಿತ್ರರಂಗ ಹಾಗೂ ಅಭಿಮಾನಿ ದೇವರುಗಳದ್ದು.

 

LEAVE A REPLY

Please enter your comment!
Please enter your name here