ಮನೆಕಳ್ಳತನ ಮಾಡಿ ಎಸ್ಕೇಪ್ ಆದವನು ಹೆಂಡತಿಗಾಗಿ ಬಂದು ತಾನೇ ಶರಣಾದ.!

ಬೆಂಗಳೂರು

ಆತ  ನೇಪಾಳದಿಂದ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ.  ಜೀವ್ನ ಚನ್ನಾಗೇ ನಡೀತಿತ್ತು. ತಿಂಗಳ ಹಿಂದೆಯಷ್ಟೆ ಮದುವೆನೂ ಆಗಿದ್ದ. ಬರ್ತಿದ್ದ ಸಂಬಳದಲ್ಲಿ ಸಂಸಾರ ತೂಗಿಸೋದು ಕಷ್ಟ ಅಂತ  ದಿಢೀರ್ ಅಂತ ದುಡ್ಡು ಮಾಡಬೇಕೂ ಅಂತ ಕಳ್ಳತನ ಮಾಡೋಕ್ಕೆ  ಇಳಿದಿದ್ದ. ಪ್ಲಾನ್ ಮಾಡಿದಂತೆ ಕಳವು ಮಾಡಿ ಪರಾರಿಯಾಗಿದ್ದ. ಆದ್ರೆ ತನ್ನ ಹೆಂಡತಿಗಾಗಿ ಕದ್ದ ಮಾಲು ಸಮೇತ ಬಂದು ಪೊಲೀಸ್ರಿಗೆ ಶರಣಾಗಿದ್ದಾನೆ.

ಈ ಫೋಟೋದಲ್ಲಿರುವ ಸುರೇಂದ್ರ ಅಲಿಯಾಸ್ ಗೂರ್ಖಾ ಹಾಗೂ ಗಣೇಶ್ ಅಲಿಯಾಸ್ ಕಡ್ಕ ಮೂಲತಃ ನೇಪಾಳದವರು. ಕಳೆದ 12 ವರ್ಷಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಇವರು ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸ ಮಾಡ್ತಿದ್ರು. ಕೆಲಸ ಮಾಡುವ ವೇಳೆಯೇ ಬೀಗ ಹಾಕಿದ್ದ ಮನೆಗಳನ್ನ ಟಾರ್ಗೆಟ್ ಮಾಡಿ, ರಾತ್ರಿವೇಳೆ ಬೀಗ ಮುರಿದು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗ್ತಿದ್ರು. ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿ ಕಳ್ಳತನ ಮಾಡಿದ್ರು. ಇಲ್ಲಿ ಮನೆಗಳವು ಮಾಡಿಕೊಂಡು ಸೀದಾ ನೇಪಾಳಕ್ಕೆ ಹೋಗಿದ್ದ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಪೊಲೀಸ್ರಿಗೆ ಇರಲಿಲ್ಲ. ಆದ್ರೆ ಈ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದೇ ಒಂದು ಸ್ಕೂಟಿ.

ಪ್ರಕರಣವನ್ನ ದಾಖಲಿಸಿಕೊಂಡ ಚಂದ್ರಾಲೇಔಟ್ ಪೊಲೀಸ್ರು ಮನೆಯ ಬಳಿ ಇದ್ದ ಸಿಸಿಟಿವಿ ಪರಿಶೀಲನೆ ಮಾಡಿದ್ರು. ಆ ಮನೆಯ ಬಳಿ ಟೈಮ್ ಅಲ್ಲದ ಟೈಮ್ನಲ್ಲಿ ನಿಂತಿದ್ದ ಸ್ಕೂಟಿ ಬಗ್ಗೆ ಪೊಲೀಸ್ರಿಗೆ ಅನುಮಾನ ಮೂಡಿತ್ತು. ಹೀಗಾಗಿ ಸ್ಕೂಟಿ ನೀಡಿದ  ಸುಳಿವಿನ ಮೇರಗೆ ಆರೋಪಿಗಳ ಗುರುತು ಪತ್ತೆಮಾಡಿದ್ರು. ಸ್ಕೂಟಿ ಬೆನ್ನತ್ತಿದ್ದ  ಪೊಲೀಸರಿಗೆ  ಗಣೇಶನ ಮನೆ ವಿಳಾಸ ಪತ್ತೆಯಾಗಿತ್ತು. ಆದ್ರೆ ಅದಾಗ್ಲೆ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ರು.

ಆದರೆ ಆರೋಪಿಯ ಕುಟುಂಬ ಬೆಂಗಳೂರಿನಲ್ಲೇ ಇದ್ದ ಕಾರಣಕ್ಕೆ ಗಣೇಶನ ಹೆಂಡತಿಯನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿ ಗಣೇಶ ಕದ್ದ ಮಾಲಿನ ಸಮೇತ ಬಂದು ಶರಣಾಗಿದ್ದಾನೆ. ಕರಣದ 2ನೇ ಆರೋಪಿ ಗಣೇಶ್ ಶರಣಾಗತಿ ನಂತ್ರ ಎ1 ಆರೋಪಿ ಬಗ್ಗೆ ಸುಳಿವು ಕೊಟ್ಟು, ಆತನ ಬಂಧನವೂ ಆಗಿದೆ. ಹೊಸ ಹೆಂಡತಿ ಮೇಲಿನ ಪ್ರೀತಿಯಿಂದಾಗಿ ಕಳವು ಪ್ರಕರಣವೊಂದು ಸುಖಾಂತ್ಯ ಕಂಡಿದೆ.