ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ: ಸಿ.ಎನ್ ಅಶ್ವಥ್ ನಾರಾಯಣ್

ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ: ಸಿ.ಎನ್ ಅಶ್ವಥ್ ನಾರಾಯಣ್

298
0

ಮಂಡ್ಯ, ಮೇ 20; ಜಿಲ್ಲಾ ಉಸ್ತುವಾರಿ ಸಚಿವರ, ಜನಪ್ರತಿನಿಧಿಗಳ, ಹಾಗೂ ಜಿಲ್ಲಾಡಳಿತ,ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಉತ್ತಮ ನಿರ್ವಹಣೆಯಾಗಿದೆ ಎಂದು ಉಪಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.
ನಗರದ ಮಿಮ್ಸ್ ನಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯವರು ಮನೆ,ಮನೆ ತೆರಳಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಟ್ರಾಯಸ್, ಟೆಲಿ ಟ್ರಾಯಸ್ಸಿಂಗನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದಾರೆ ಎಂದರು.
RAT ಟೆಸ್ಟ್ ,ಆರ್ ಟಿ ಪಿ.ಸಿ ಆರ್ ಟೆಸ್ಟ್ ನ್ನು ಟಾರ್ಗೆಟ್ ಕ್ಕಿಂತ 18 % ಜಾಸ್ತಿಯನ್ನು ಮಾಡಿರುವುದು ಮಾದರಿಯಾಗಿದೆ ಎಂದರು.

ಮುಂಗಡವಾಗಿ ಔಷದಿ ಆರ್ ಟಿ ಪಿ.ಆರ್ ಕಿಟ್ ನ್ನು ಜಿಲ್ಲೆಗೆ ತರಿಸಿಕೊಳ್ಳಿ, ಕೋವಿಡ್ ಪರೀಕ್ಷೆ ಒಳಪಡಿಸಿ , ಸಂಪರ್ಕಿತರನ್ನು ಪತ್ತೆ ಹಚ್ಚಿ ಎಂದರು.
ಜಿಲ್ಲೆಯಲ್ಲಿ ಸೋಂಕಿತರನ್ನು ಪತ್ತೆ ಹಚ್ಚಿ ಸಂಪರ್ಕಿತರನ್ನು 20-25 ಜನರನ್ನು ಗುರುತಿಸಿ ಪರೀಕ್ಷೆ ಮಾಡುತ್ತಿರುವುದು ರಾಜ್ಯಕ್ಕೆ ಮಂಡ್ಯ ಜಿಲ್ಲೆ ಮಾದರಿ ಎಂದರು.
ಆಶಾಕಾರ್ಯಕರ್ತೆಯರಿಗೆ ,ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ವಾಹನ ವ್ಯವಸ್ಥೆ ಮಾಡಿ , ಮನೆ ,ಮನೆಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ ಔಷದಿ, ಕಿಟ್ ಗಳನ್ನು ನೀಡಿ ಗುಣಮುಖರಾಗುವಂತೆ ಮಾಡಿ ಎಂದರು.

ಹೋಮ್ ಐಶೋಲೇಷನ್ ನ್ನು ನಿರ್ಬಂಧಿಸಿ, ಕೋವಿಡ್ ಕೇರ್ ಸೆಂಟರ್ ಗಳ ಸಂಖ್ಯೆ ಹೆಚ್ಚಿಸಿ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಿ ಎಂದರು.
ಜಿಲ್ಲಾಡಳಿತದ ವತಿಯಿಂದ ಲ್ಯಾಬ್ ಟೆಸ್ಟ್ , ಸಿ.ಟಿ ಸ್ಕ್ಯಾನ್ ನ್ನು ಉಚಿತವಾಗಿ ಮಾಡಿಸಿ ಎಂದರು.ಮಿಮ್ಸ್ ನಿಂದ ತಾಲ್ಲೂಕಿನ ಎಲ್ಲಾ ಕಡೆ ವೈದ್ಯರನ್ನು ನಿಯೋಜಿಸಿ ಚಿಕಿತ್ಸೆ ಸಹಕರಿಸಿ ಎಂದರು.ಸ್ವಾಬ್ ಟೆಸ್ಟ್ ಮಾಡುವಾಗ ಸೋಂಕಿತರ ಪೂರ್ಣ ವಿಳಾಸ ಪಡೆದು ಸಂಪರ್ಕಿತರನ್ನು ಗುರುತಿಸಿ, ಚಿಕಿತ್ಸೆ ನೀಡಿ ಎಂದರು.ಜಿಲ್ಲೆಗೆ ಅಕ್ಸಿಜನ್ ಬೆಡ್, ಐಸಿಯು ಬೆಡ್ ಗಳ ವ್ಯವಸ್ಥೆ ಯನ್ನು ಹೆಚ್ಚು ಮಾಡುತ್ತೇವೆ ಜೊತೆಗೆ ಸಮುದಾಯ ಆರೋಗ್ಯ ಕೇಂದ್ರ , ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ, ಆಕ್ಸಿಜನ್ ಜನರೇಟರ್, ಆಕ್ಸಿಜನ್ ಕಾನ್ಸ್ನಟ್ರೇಟರ್ ನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದರು.ಲಸಿಕೆ ಕೇಂದ್ರದಲ್ಲಿ ಇನ್ನು ಮುಂದೆ ಲಸಿಕೆಗೆ ತೊಂದರೆ ಆಗಲ್ಲ , ಔಷದಿಯನ್ನು ಸಕಾಲದಲ್ಲಿ ಜಿಲ್ಲೆಗೆ ಒದಗಿಸುತ್ತೇವೆ ಅಧಿಕಾರಿಗಳು ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಎಂದರು.ಇನ್ನು ಬ್ಲಾಕ್ ಫಂಗಸ್ ಸಂಬಂಧ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಕ್ರಮವಹಿಸುತ್ತೇವೆ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ, ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್ .ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ , ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ , ಜಿ.ಪಂ ಸಿಇಒ ದಿವ್ಯಾಪ್ರಭು, ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ಮಿಮ್ಸ್ ನಿರ್ದೇಶಕರಾದ ಹರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

VIAಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ: ಸಿ.ಎನ್ ಅಶ್ವಥ್ ನಾರಾಯಣ್
SOURCEಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ: ಸಿ.ಎನ್ ಅಶ್ವಥ್ ನಾರಾಯಣ್
Previous articleಕೊರೋನಾ ಹೆಸರಿನಲ್ಲಿ ಕರಾಳ ದಂಧೆ!
Next articleತಂದೆ ತಾಯಿ ಇಲ್ಲದ ಹಸುಗೂಸು ಯಾರ ಮಡಿಲಿಗೆ?

LEAVE A REPLY

Please enter your comment!
Please enter your name here