Home Latest ಗಡಿ ರಸ್ತೆಗಳ ಸಂಸ್ಥೆ, ನಿರ್ಮಿತ ಸೇತುವೆಗಳ ಲೋಕಾರ್ಪಣೆ ಮಾಡಲಿರುವ ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್

ಗಡಿ ರಸ್ತೆಗಳ ಸಂಸ್ಥೆ, ನಿರ್ಮಿತ ಸೇತುವೆಗಳ ಲೋಕಾರ್ಪಣೆ ಮಾಡಲಿರುವ ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್

306
0
SHARE

ನವದೆಹಲಿ. ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಖ್​ನೂರ್​ ಸೆಕ್ಟರ್‌ನ ನಾಲ್ಕು ಮತ್ತು ಜಮ್ಮು-ರಾಜ್‌ಪುರ ಪ್ರದೇಶದ ಎರಡು ಸೇತುವೆಗಳನ್ನು ರಕ್ಷಣಾ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸಿರುವ ಆರು ಸೇತುವೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ಗುರುವಾರ ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಸೇತುವೆಗಳು ಸುಮಾರು 300 ರಿಂದ 100 ಮೀಟರ್ ದೂರದಲ್ಲಿವೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಆರ್​ಒ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ರಾಜ್​ನಾಥ್​ ಸಿಂಗ್ , ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಮತ್ತು ಪಾಕಿಸ್ತಾನ ಗಡಿಯ ನಿಯಂತ್ರಣ ರೇಖೆ (ಎಲ್​ಒಸಿ) ಬಳಿಯ ಮೂಲ ಸೌಕರ್ಯಗಳ ಸುಧಾರಣೆ ಕುರಿತು ಚರ್ಚಿಸಿದರು.

ಚೀನಾ – ಭಾರತ ಗಡಿ ವಿವಾದದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಸೇನಾ ಪಡೆಗಳ ಸಂಚಾರಕ್ಕೆ ಅಡಚಣೆಯಾಗದಂತೆ ಗಡಿಯಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕೆಂದು ಸಭೆಯಲ್ಲಿ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಗಡಿ ರಸ್ತೆಗಳ ಸಂಸ್ಥೆ (ಬಿಆರ್​ಒ) ದೂರದ ಗಡಿ ಪ್ರದೇಶಗಳಲ್ಲಿ ರಸ್ತೆಗಳು, ಸೇತುವೆಗಳು, ಸುರಂಗಗಳು ಮತ್ತು ವಾಯುನೆಲೆಗಳ ನಿರ್ಮಾಣದಲ್ಲಿ ತೊಡಗಿರುವ ಪ್ರಮುಖ ರಸ್ತೆ ನಿರ್ಮಾಣ ಸಂಸ್ಥೆಯಾಗಿದೆ.

ನೆರೆಯ ರಾಷ್ಟ್ರಗಳಾದ ಭೂತಾನ್, ಮ್ಯಾನ್ಮಾರ್​, ಮತ್ತು ಅಫಘಾನಿಸ್ತಾನಗಳಲ್ಲಿಯೂ ಈ ಸಂಸ್ಥೆ ನಿರ್ಮಾಣ ಕಾರ್ಯಗಳನ್ನು ಮಾಡಿದೆ ಎಂದು ಸಭೆಯಲ್ಲಿ ರಕ್ಷಣಾ ಸಚಿವರಿಗೆ ಬಿಆರ್‌ಒ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.

 

LEAVE A REPLY

Please enter your comment!
Please enter your name here