Home Home ಸಾವಿನ ಮನೆಯಾಯಿತೇ ಚಾಮರಾಜನಗರ?; ಇಂದಿನ ಕೊರೋನಾ ವರದಿ

ಸಾವಿನ ಮನೆಯಾಯಿತೇ ಚಾಮರಾಜನಗರ?; ಇಂದಿನ ಕೊರೋನಾ ವರದಿ

ಇಂದಿನ ಕೊರೋನಾ ವರದಿ

286
0

ವರದಿ: ನಾ ಅಶ್ವಥ ಕುಮಾರ್

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹಾಗೂ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಸೋಮವಾರ ಒಂದೇ ದಿನ 440 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 12 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 359 ಸೋಂಕಿತರು ಮೃತಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 3356 ಕ್ಕೆ ಇಳಿದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 595 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 20483 ಮಂದಿ ಗುಣಮುಖರಾಗಿದ್ದಾರೆ . ಸೋಮವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 398 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 42 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ . ಸೋಮವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 440 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 138 ಮಂದಿ , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 110 ಮಂದಿ, ಕೋಳ್ಳೆಗಾಲ ತಾಲ್ಲೂಕಿನಲ್ಲಿ 100 ಮಂದಿ , ಹನೂರು ತಾಲ್ಲೂಕಿನಲ್ಲಿ 72 ಮಂದಿ , ಯಳಂದೂರು ತಾಲ್ಲೂಕಿನಲ್ಲಿ 20 ಮಂದಿ ಸೇರಿ 440 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಭಾನುವಾರ 622 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 176992 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ . ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ತಾಲ್ಲೂಕಿನ ದೇಮಹಳ್ಳಿ ಗ್ರಾಮದ 43 ವರ್ಷದ ಪುರುಷ, ಕುಮಚಹಳ್ಳಿ ಗ್ರಾಮದ 60 ವರ್ಷದ ಪುರುಷ, ಕೋಡಿಮೋಳೆ ಗ್ರಾಮದ 18 ವರ್ಷದ ಯುವಕ. ಮಸಣಾಪುರ ಗ್ರಾಮದ 60 ವರ್ಷದ ಪುರುಷ, ಅರಕಲವಾಡಿ ಗ್ರಾಮದ 60 ವರ್ಷದ ಮಹಿಳೆ, ಕೊಳ್ಳೇಗಾಲ ಪಟ್ಟಣದ 65 ವರ್ಷದ ಮಹಿಳೆ, 60 ವರ್ಷದ ಪುರುಷ, 75 ವರ್ಷದ ಪುರುಷ, ತಾಲ್ಲೂಕಿನ ಬೂದಬಾಳು ಗ್ರಾಮದ 45 ವರ್ಷದ ಮಹಿಳೆ, ಮಧುವನಹಳ್ಳಿ ಗ್ರಾಮದ 37 ವರ್ಷದ ಪುರುಷ, ಗುಂಡ್ಲುಪೇಟೆ ಪಟ್ಟಣದ 55 ವರ್ಷದ ಪುರುಷ, 45 ವರ್ಷದ ಪುರುಷ ಕೋವಿಡ್ ಆಸ್ಪತ್ರೆಯಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.

ಇದೂವರೆಗೂ ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಇಂದಿನ ಕೊರೋನಾ ವರದಿ
SOURCEಇಂದಿನ ಕೊರೋನಾ ವರದಿ
Previous articleಮೋದಿ ವಿರುದ್ಧ ಗುಡುಗಿದ ಟಗರು!
Next articleಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕೊಕ್

LEAVE A REPLY

Please enter your comment!
Please enter your name here