Home Health ಚಾಮರಾಜನಗರ ಜಿಲ್ಲೆಯಲ್ಲಿ 910 ಮಂದಿ ಕೋರೊನಾ ದೃಢ; 4522 ಸಕ್ರಿಯ ಪ್ರಕರಣ; ಇಂದು 12...

ಚಾಮರಾಜನಗರ ಜಿಲ್ಲೆಯಲ್ಲಿ 910 ಮಂದಿ ಕೋರೊನಾ ದೃಢ; 4522 ಸಕ್ರಿಯ ಪ್ರಕರಣ; ಇಂದು 12 ಮಂದಿ ದುರ್ಮರಣ

ಚಾಮರಾಜನಗರ ಜಿಲ್ಲೆಯಲ್ಲಿ 910 ಮಂದಿ ಕೋರೊನಾ ದೃಢ; 4522 ಸಕ್ರಿಯ ಪ್ರಕರಣ; ಇಂದು 12 ಮಂದಿ ದುರ್ಮರಣ

408
0

ಭಾನುವಾರ 12 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ; ಶನಿವಾರ 743 ಮಂದಿಗೆ ಲಸಿಕೆ ಇದೂವರೆಗೂ 163797 ಮಂದಿಗೆ ಲಸಿಕೆ

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಭಾನುವಾರ ಕರಾಳವೆನಿಸಿದೆ.ಭಾನುವಾರ ಒಂದೇ ದಿನ 910 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 12 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 237 ಸೋಂಕಿತರು ಮೃತಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 4522 ಕ್ಕೇರಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 562 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 11766 ಮಂದಿ ಗುಣಮುಖರಾಗಿದ್ದಾರೆ . ಭಾನುವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 882 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 28 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

09.05.2021 bulletin

ಭಾನುವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 910 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 439 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 138 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 133 , ಹನೂರು ತಾಲ್ಲೂಕಿನಲ್ಲಿ 157 , ಯಳಂದೂರು ತಾಲ್ಲೂಕಿನಲ್ಲಿ 33 ಮಂದಿ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ 10 ಮಂದಿ ಸೇರಿ 910 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಶನಿವಾರ 743 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 163797 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಕೋರೊನಾ ಸೋಂಕಿನಿಂದ ಮೃತವರೆಂದರೆ,
ಚಾಮರಾಜನಗರ ಪಟ್ಟಣದ 55 ವರ್ಷದ ಮಹಿಳೆ, ತಾಲ್ಲೂಕಿನ ಕೆ.ಕೆ. ಹುಂಡಿ ಗ್ರಾಮದ 52 ವರ್ಷದ ಪುರುಷ, ಅಮಚವಾಡಿ ಗ್ರಾಮದ 39 ವರ್ಷದ ಪುರುಷ, ವಿ.ಸಿ.ಹೊಸೂರು ಗ್ರಾಮದ 38 ವರ್ಷದ ಮಹಿಳೆ, ಗುಂಡ್ಲುಪೇಟೆ ಪಟ್ಟಣದ 33 ವರ್ಷದ ಪುರುಷ, ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ 45 ವರ್ಷದ ಮಹಿಳೆ, ಕೊಳ್ಳೇಗಾಲ ಪಟ್ಟಣದ 75 ವರ್ಷದ ಪುರುಷ, 64 ವರ್ಷದ ಪುರುಷ, 58 ವರ್ಷದ ಮಹಿಳೆ, ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ 50 ವರ್ಷದ ಪುರುಷ, ಪಿಜಿ.ಪಾಳ್ಯ ಗ್ರಾಮದ 55 ವರ್ಷದ ಪುರುಷ, ಕೊಂಗರಹಳ್ಳಿ (ಕಾಮಗೆರೆ ) ಗ್ರಾಮದ 58 ವರ್ಷದ ಪುರುಷ, ಸಾವನ್ನಪ್ಪಿದ್ದಾರೆ. ಇದೂವರೆಗೂ 237 ಕೋವಿಡ್ ಸೋಂಕಿತರು ಮೃತಪಟ್ಟಿದ್ದರೆ, ದೃಡೀಕೃತ ಕೋವಿಡ್ ಪಾಸಿಟೀವ್ ರೋಗಿಯು ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಚಾಮರಾಜನಗರ ಜಿಲ್ಲೆಯಲ್ಲಿ 910 ಮಂದಿ ಕೋರೊನಾ ದೃಢ; 4522 ಸಕ್ರಿಯ ಪ್ರಕರಣ; ಇಂದು 12 ಮಂದಿ ದುರ್ಮರಣ
SOURCEಚಾಮರಾಜನಗರ ಜಿಲ್ಲೆಯಲ್ಲಿ 910 ಮಂದಿ ಕೋರೊನಾ ದೃಢ; 4522 ಸಕ್ರಿಯ ಪ್ರಕರಣ; ಇಂದು 12 ಮಂದಿ ದುರ್ಮರಣ
Previous articleಪಿಎಂ ಜೊತೆ ಸಿಎಂ ಮಾತನಾಡಿದ್ದೇನು ಗೊತ್ತೇ?
Next articleಬೇಸರಗೊಂಡ ಕೇರಳದ ವಿದ್ಯಾರ್ಥಿನಿಯರು!

LEAVE A REPLY

Please enter your comment!
Please enter your name here