Home District ಚಾಮರಾಜನಗರ ಜಿಲ್ಲೆಯಲ್ಲಿ ಇಂದು 794 ಮಂದಿ ಕೋರೊನಾ ದೃಢ – 3801 ಸಕ್ರಿಯ ಪ್ರಕರಣ

ಚಾಮರಾಜನಗರ ಜಿಲ್ಲೆಯಲ್ಲಿ ಇಂದು 794 ಮಂದಿ ಕೋರೊನಾ ದೃಢ – 3801 ಸಕ್ರಿಯ ಪ್ರಕರಣ

ಚಾಮರಾಜನಗರ ಜಿಲ್ಲೆಯಲ್ಲಿ ಇಂದು 794 ಮಂದಿ ಕೋರೊನಾ ದೃಢ – 3801 ಸಕ್ರಿಯ ಪ್ರಕರಣ

218
0
SHARE

ಗುರುವಾರ ಹದಿನಾಲ್ಕು ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ. ಬುಧವಾರ 1616 ಮಂದಿಗೆ ಲಸಿಕೆ ಇದೂವರೆಗೂ 159095 ಮಂದಿಗೆ ಲಸಿಕೆ.

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಮಂಗಳವಾರ ಕರಾಳವೆನಿಸಿದೆ.

ಗುರುವಾರ ಒಂದೇ ದಿನ 794 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ ಹದಿನಾಲ್ಕು ಮಂದಿ ಸಾವನ್ನಪ್ಪಿದ್ದು ಇದೂವರೆಗೂ 212 ಸೋಂಕಿತರು ಮೃತಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 3801 ಕ್ಕೇರಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಗುರುವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 379 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 10325 ಮಂದಿ ಗುಣಮುಖರಾಗಿದ್ದಾರೆ . ಗುರುವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 744 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 50 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ .

ಗುರುವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 794 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 293 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 170 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 190 , ಹನೂರು ತಾಲ್ಲೂಕಿನಲ್ಲಿ 67 , ಯಳಂದೂರು ತಾಲ್ಲೂಕಿನಲ್ಲಿ 67 ಮಂದಿ ಹಾಗೂ ಹೊರ ಜಿಲ್ಲೆಯ 7 ಮಂದಿ ಸೇರಿ 794 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಬುಧವಾರ 1616 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 159095 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ಪಟ್ಟಣದ 49 ವರ್ಷದ ಮಹಿಳೆ, ಹೊನ್ನಹಳ್ಳಿ ಗ್ರಾಮದ 55 ವರ್ಷದ ಪುರುಷ, ಉಮ್ಮತ್ತೂರು ಗ್ರಾಮದ 40 ವರ್ಷದ ಪುರುಷ, ಬಂಡಿಗೆರೆ ಗ್ರಾಮದ 50 ವರ್ಷದ ಪುರುಷ, ಕೊಳ್ಳೇಗಾಲ ಪಟ್ಟಣದ 40 ವರ್ಷದ ಪುರುಷ, ತಾಲ್ಲೂಕಿನ ಬಂಡಳ್ಳಿ ಗ್ರಾಮದ 50 ವರ್ಷದ ಪುರುಷ, ಕುಂತೂರು ಗ್ರಾಮದ 45 ವರ್ಷದ ಮಹಿಳೆ, ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದ 32 ವರ್ಷದ ಪುರುಷ, ಯಳಂದೂರು ತಾಲ್ಲೂಕಿನ ಮಲ್ಲಿಗಳ್ಳಿ ಗ್ರಾಮದ 63 ವರ್ಷದ ಪುರುಷ, ಕೆಸ್ತೂರುಗ್ರಾಮದ 70 ವರಷದ ಪುರುಷ, ಕಂದಹಳ್ಳಿ ಗ್ರಾಮದ 45 ವರ್ಷದ ಪುರುಷ, ಹನೂರು ಪಟ್ಟಣದ 60 ವರ್ಷದ ಪುರುಷ, ತಾಲ್ಲೂಕಿನ ಪಿ.ಬಿ ದೊಡ್ಡಿ ಗ್ರಾಮದ 80 ವರ್ಷದ ಮಹಿಳೆ, ದೊಮ್ಮನ ಗದ್ದೆ ಗ್ರಾಮದ 39 ವರ್ಷದ ಪುರುಷ ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here