Home District ಆಕ್ಸಿಜನ್ ದುರಂತದ ಬಗ್ಗೆ ಪ್ರಶ್ನಿಸಿದಾಗ ನಾಜೂಕಾಗಿ ನುಣುಚಿಕೊಂಡ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ

ಆಕ್ಸಿಜನ್ ದುರಂತದ ಬಗ್ಗೆ ಪ್ರಶ್ನಿಸಿದಾಗ ನಾಜೂಕಾಗಿ ನುಣುಚಿಕೊಂಡ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ

ಆಕ್ಸಿಜನ್ ದುರಂತದ ಬಗ್ಗೆ ಪ್ರಶ್ನಿಸಿದಾಗ ನಾಜೂಕಾಗಿ ನುಣುಚಿಕೊಂಡ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ

490
0

ವರದಿ: ನಾ.ಅಶ್ವಥ್ ಕುಮಾರ್
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಚಾಮರಾಜನಗರ ಜಿಲ್ಲಾಧಿಕಾರಿ ಎಂ ಆರ್ ರವಿ, ಕೋವಿಡ್ ನಿರ್ವಹಣೆಗೆ ಆಸ್ಪತ್ರೆಯಲ್ಲಿ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.ನಂತರ ವೈದ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಯಾವುದೇ ಕಾರಣಕ್ಕೂ ಖಾಸಗಿ ಕ್ಲಿನಿಕ್ ಗಳು ಕೋರೊನಾ ಸಂಬಂಧಿತ ಖಾಯಿಲೆಗಳಿಗೆ ಚಿಕಿತ್ಸೆ ನೀಡಬಾರದು, ಕೆಲವು ದಿನಗಳ ಮಟ್ಟಿಗೆ ಖಾಸಗಿ ವೈದ್ಯರು ಚಿಕಿತ್ಸೆ ನೀಡಿ ನಂತರ ಕೊರೋನ ರೋಗವೂ ಉಲ್ಭಣಗೊಂಡು ಜೀವ ಹೋಗುವ ಹಂತಕ್ಕೆ ತಲುಪಿದಾಗ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ನಂತರ ರೋಗಿಯ ಜೀವ ಉಳಿಸಿಕೊಳ್ಳಲು ಕಷ್ಟ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹೋಮ್ ಐಸೋಲಷನ್ ನಲ್ಲಿ ಇರುವವರು ಬೇಜವಾಬ್ದಾರಿತನದಿಂದ ಹೊರಗಡೆ ಸುತ್ತಾಡಬಾರದು. ಇಷ್ಟೊಂದು ಸಾವು ನೋವು ಸಂಭವಿಸುತ್ತಿದ್ದರು ಸಹ ಭಯವಿಲ್ಲದೇ ಆಚೆ ಸುತ್ತಾಡುವುದು ಸರಿಯಲ್ಲ ಎಂದರು.

ಇನ್ನುಳಿದಂತೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಿಂದ 24 ಜನ ಸಾವನ್ನಪ್ಪಿದ್ದರು. ಇದರ ಬಗ್ಗೆ ಗುರುವಾರ ಹೈಕೋರ್ಟ್ ನ ತ್ರಿಸದಸ್ಯ ಪೀಠ ವರದಿ ಸಲ್ಲಿಸಿತ್ತು. ಇದರ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಆ ವಿಚಾರದ ಬಗ್ಗೆ ಏನು ಮಾತನಾಡದೇ ನಾಜೂಕಾಗಿ ನುಣುಚಿಕೊಂಡರು.

VIAಆಕ್ಸಿಜನ್ ದುರಂತದ ಬಗ್ಗೆ ಪ್ರಶ್ನಿಸಿದಾಗ ನಾಜೂಕಾಗಿ ನುಣುಚಿಕೊಂಡ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ
SOURCEಆಕ್ಸಿಜನ್ ದುರಂತದ ಬಗ್ಗೆ ಪ್ರಶ್ನಿಸಿದಾಗ ನಾಜೂಕಾಗಿ ನುಣುಚಿಕೊಂಡ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ
Previous articleಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ!
Next articleಚಾಮರಾಜನಗರದಲ್ಲಿ ಕಂಡುಬಂದ ಕೊರೋನಾದ ಕರಾಳಮುಖ!

LEAVE A REPLY

Please enter your comment!
Please enter your name here