Home Home ಕೊರೋನಾ ತಡೆಗೆ ಚಾಮರಾಜನಗರ ಜಿಲ್ಲಾಡಳಿತ ಮಾಡಿದ್ದೇನು ಗೊತ್ತೇ?

ಕೊರೋನಾ ತಡೆಗೆ ಚಾಮರಾಜನಗರ ಜಿಲ್ಲಾಡಳಿತ ಮಾಡಿದ್ದೇನು ಗೊತ್ತೇ?

ಕೊರೋನಾ ತಡೆಗೆ ಚಾಮರಾಜನಗರ ಜಿಲ್ಲಾಡಳಿತ ಮಾಡಿದ್ದೇನು ಗೊತ್ತೇ?

402
0
SHARE

ಚಾಮರಾಜನಗರ : ಜಿಲ್ಲೆಯಲ್ಲಿ ಕೋರೊನಾ ಸೋಂಕು ತಡೆಗಟ್ಟುವ ಸಲುವಾಗಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಅದರಲ್ಲೂ ಪಟ್ಟಣ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಹಲವಾರು ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಕೋರೊನಾ ಸೋಂಕು ತಡೆಗೆ ಮುಂದಾಗಿದೆ.ಚಾಮರಾಜನಗರ ನಗರಸಭೆಯು ಕೋರೊನಾ ಸೋಂಕು ನಿಯಂತ್ರಣ ಮಾಡಲು ಎಲ್ಲಾ ರೀತಿಯ ಕಸರತ್ತು ಮಾಡಿದೆ. ಭಾನುವಾರ ಬೆಳಗ್ಗೆಯಿಂದಲೇ ನಗರಸಭೆಯ ಮುಂಭಾಗ ರಸ್ತೆ ಬಂದ್ ಮಾಡಿದ್ದು, ರಥದ ಬೀದಿಯನ್ನು ಸಹ ಬಂದ್ ಮಾಡಿದೆ.

ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರು ನಗರಸಭೆಯ ಕಛೇರಿಯ ಮುಂದೆ ಸಂಚಾರ ಮಾಡುವ ಹಿನ್ನಲೆಯಲ್ಲಿ ಹಾಗೂ ಲಾಕ್ ಡೌನ್ ವೇಳೆಯಲ್ಲಿ ವಾಹನ ಸವಾರರಿಗೆ ಬ್ರೇಕ್ ಹಾಕುವ ಕಾರಣ ಈ ಕ್ರಮ ವಹಿಸಲಾಗಿದೆ ಎನ್ನಲಾಗಿದೆ.ಭಾನುವಾರ ಬೆಳಗ್ಗೆಯೇ ಪೌರ ಕಾರ್ಮಿಕರು ಪ್ರಮುಖ ರಸ್ತೆಗಳಿಗೆ ಕಲ್ಲುಗಳನ್ನು ಇಟ್ಟು, ಹಗ್ಗದಿಂದ ರಸ್ತೆ ಬಂದ್ ಮಾಡಿದ್ದರು. ಸಾರ್ವಜನಿಕರು ಇದರ ಅರಿವಿಲ್ಲದೆ ಸಂಚಾರ ಮಾಡಲು ಹೋಗಿ ರಸ್ತೆ ಬಂದ್ ಆಗಿರುವುದನ್ನು ಕಂಡು ಅಡ್ಡ ಮಾರ್ಗವನ್ನು ಅನುಸರಿಸಿದರು.

ಈಗಾಗಲೇ ಜಿಲ್ಲಾಡಳಿತ ಪಟ್ಟಣ ಪ್ರದೇಶದ ನಗರಸಭೆಯ ಮುಂಭಾಗ ತಳ್ಳುಗಾಡಿಯಲ್ಲಿ ತರಕಾರಿ ಮಾರುವುದನ್ನು ನಿರ್ಭಂಧಿಸಿದೆ. ಹಾಗೂ ಕೋರೊನಾ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲು ನಗರಸಭೆಯ ಅಧಿಕಾರಿಗಳ ಮೂಲಕ ನಗರ ಪ್ರದೇಶದಲ್ಲಿ ಹೆಚ್ಚಾಗಿ ವಾಹನ ಸಂಚಾರ ಮಾಡಬಹುದಾದ ರಸ್ತೆ ಬಡಾವಣೆಗಳನ್ನು ಬಂದ್ ಮಾಡಲು ನಿರ್ದೇಶನ ನೀಡಲಾಗಿದೆ.

LEAVE A REPLY

Please enter your comment!
Please enter your name here