ಇಂದು ಚಾಮರಾಜನಗರ ಜಿಲ್ಲೆಯಲ್ಲಿ 508 ಮಂದಿ ಕೋರೊನಾ ದೃಡ; 10 ಮಂದಿ ಆಸ್ಪತ್ರೆಯಲ್ಲಿ ದುರ್ಮರಣ

ಇಂದು ಚಾಮರಾಜನಗರ ಜಿಲ್ಲೆಯಲ್ಲಿ 508 ಮಂದಿ ಕೋರೊನಾ ದೃಡ; 10 ಮಂದಿ ಆಸ್ಪತ್ರೆಯಲ್ಲಿ ದುರ್ಮರಣ

357
0

ವರದಿ: ನಾ.ಅಶ್ವಥ್ ಕುಮಾರ್

ಸೋಮವಾರ ಚಾಮರಾಜನಗರ ಜಿಲ್ಲೆಯಲ್ಲಿ 508 ಮಂದಿ ಕೋರೊನಾ ದೃಡ –3793 ಸಕ್ರಿಯ ಪ್ರಕರಣ;ಸೋಮವಾರ 10 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ; ಭಾನುವಾರ 237 ಮಂದಿಗೆ ಲಸಿಕೆ ಇದೂವರೆಗೂ 171537 ಮಂದಿಗೆ ಲಸಿಕೆ.

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹಾಗೂ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ.ಸೋಮವಾರ ಒಂದೇ ದಿನ 508 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 10 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 307 ಸೋಂಕಿತರು ಮೃತಪಟ್ಟಿದ್ದಾರೆ.ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 3897ಕ್ಕೆ ಇಳಿದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 822 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 16902ಮಂದಿ ಗುಣಮುಖರಾಗಿದ್ದಾರೆ . ಸೋಮವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 490ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 18 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.ಸೋಮವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 508 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 191 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 103, ಕೋಳ್ಳೆಗಾಲ ತಾಲ್ಲೂಕಿನಲ್ಲಿ 121, ಹನೂರು ತಾಲ್ಲೂಕಿನಲ್ಲಿ 53, ಯಳಂದೂರು ತಾಲ್ಲೂಕಿನಲ್ಲಿ 37 ಮಂದಿ, ಹೊರ ಜಿಲ್ಲೆಯ ಒಬ್ಬರು ಸೇರಿ 508 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಭಾನುವಾರ 237 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 171537 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ.

ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ತಾಲ್ಲೂಕಿನ ಕಿಲಗೆರೆ ಗ್ರಾಮದ 66 ವರ್ಷದ ಪುರುಷ, ಹಳೇಪುರ ಗ್ರಾಮದ 70 ವರ್ಷದ ಮಹಿಳೆ, ಕೂಡ್ಲೂರು ಗ್ರಾಮದ 57 ವರ್ಷದ ಪುರುಷ, ಬಾಗಳಿ ಗ್ರಾಮದ 65 ವರ್ಷದ ಪುರುಷ, ಪಟ್ಟಣದ 37 ವರ್ಷದ ಪರುಷ, ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ 32 ವರ್ಷದ ಮಹಿಳೆ, ಲಕ್ಕರಸನಪಾಳ್ಯದ 68 ವರ್ಷದ ಮಹಿಳೆ, ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ 54 ವರ್ಷದ ಪುರುಷ, ಯಳಂದೂರು ಆಶ್ರಯ ಬಡಾವಣೆಯ 50 ವರ್ಷದ ಪುರುಷ, ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ 65 ವರ್ಷದ ಮಹಿಳೆ, ಕೋವಿಡ್ ಆಸ್ಪತ್ರೆಯಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ. ಇದೂವರೆಗೂ ಕೋವಿಡ್ ಸೋಂಕಿತರು ಮೃತಪಟ್ಟಿದ್ದರೆ, ದೃಡೀಕೃತ ಕೋವಿಡ್ ಪಾಸಿಟೀವ್ ರೋಗಿಯು ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಇಂದು ಚಾಮರಾಜನಗರ ಜಿಲ್ಲೆಯಲ್ಲಿ 508 ಮಂದಿ ಕೋರೊನಾ ದೃಡ; 10 ಮಂದಿ ಆಸ್ಪತ್ರೆಯಲ್ಲಿ ದುರ್ಮರಣ
SOURCEಇಂದು ಚಾಮರಾಜನಗರ ಜಿಲ್ಲೆಯಲ್ಲಿ 508 ಮಂದಿ ಕೋರೊನಾ ದೃಡ; 10 ಮಂದಿ ಆಸ್ಪತ್ರೆಯಲ್ಲಿ ದುರ್ಮರಣ
Previous articleಖುಷಿಯಿಂದ ಜನರಿಗೆ ರುಚಿಯಾದ ಅಡುಗೆ!
Next articleಗುಂಡ್ಲುಪೇಟೆ ಆಸ್ಪತ್ರೆಗೆ ಆಮ್ಲಜನಕ ಸಾಂಧ್ರಕ ಹಸ್ತಾಂತರ

LEAVE A REPLY

Please enter your comment!
Please enter your name here