Home Home ಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ!

ಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ!

Corona in Chamarajanagar | ಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ!

380
0

-ನಾ.ಅಶ್ವಥ್ ಕುಮಾರ್

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹಾಗೂ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ.ಶನಿವಾರ ಒಂದೇ ದಿನ 355 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 6 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 404 ಸೋಂಕಿತರು ಮೃತಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 3087 ಕ್ಕೆ ಇಳಿದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಶನಿವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 423 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 22460 ಮಂದಿ ಗುಣಮುಖರಾಗಿದ್ದಾರೆ .

ಶನಿವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 309 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 46 ಮಂದಿ ಸೇರಿ 355 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ. ಶನಿವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 355 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 109 ಮಂದಿ , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 74 ಮಂದಿ, ಕೋಳ್ಳೆಗಾಲ ತಾಲ್ಲೂಕಿನಲ್ಲಿ 63 ಮಂದಿ , ಹನೂರು ತಾಲ್ಲೂಕಿನಲ್ಲಿ 76 ಮಂದಿ, ಯಳಂದೂರು ತಾಲ್ಲೂಕಿನಲ್ಲಿ 31 ಮಂದಿ ಹೊರ ಜಿಲ್ಲೆಯ ಇಬ್ಬರು ಸೇರಿ 355 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಶುಕ್ರವಾರ 2222 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 185240 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ.

ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ಪಟ್ಟಣದ 34 ವರ್ಷದ ಮಹಿಳೆ, ತಾಲ್ಲೂಕಿನ ರೇಚಂಬಳ್ಳಿ ಗ್ರಾಮದ 48 ವರ್ಷದ ಮಹಿಳೆ, ಸರಗೂರು ಗ್ರಾಮದ 43 ವರ್ಷದ ಪುರುಷ, ಯಳಂದೂರು ತಾಲ್ಲೂಕಿನ ಕಂದಹಳ್ಳಿ ಗ್ರಾಮದ 60 ವರ್ಷದ ಪುರುಷ, ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ 65 ವರ್ಷದ ಪುರುಷ, ಹನೂರು ಪಟ್ಟಣದ 68 ವರ್ಷದ ಪುರುಷ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದೂವರೆಗೂ 404 ಮಂದಿ ಮೃತರಾಗಿದ್ದು, ಇದೂವರೆಗೂ ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

29.05.2021

VIACorona in Chamarajanagar | ಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ!
SOURCECorona in Chamarajanagar | ಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ!
Previous articleಜೂನ್7ರ ಬಳಿಕದ ‘Lockdown’ ಕುರಿತು C.M ಹೇಳಿದ್ದೇನು ಗೊತ್ತೇ?!
Next articleವ್ಯಾಕ್ಸಿನ್ ವಿರುದ್ಧ ಮೊದಲು ಅಪಪ್ರಚಾರ ಮಾಡಿದ್ದು ಕಾಂಗ್ರೆಸ್; ಬಿಜೆಪಿ ರಾಜ್ಯ SC ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

LEAVE A REPLY

Please enter your comment!
Please enter your name here