Home District ಇಂದು ಚಾಮರಾಜನಗರ ಜಿಲ್ಲೆಯಲ್ಲಿ 469 ಕೋರೊನಾ ದೃಢ; 2596 ಸಕ್ರಿಯ ಪ್ರಕರಣ; 8 ದುರ್ಮರಣ

ಇಂದು ಚಾಮರಾಜನಗರ ಜಿಲ್ಲೆಯಲ್ಲಿ 469 ಕೋರೊನಾ ದೃಢ; 2596 ಸಕ್ರಿಯ ಪ್ರಕರಣ; 8 ದುರ್ಮರಣ

422
0

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಭಾನುವಾರ ಕರಾಳವೆನಿಸಿದೆ. ಭಾನುವಾರ ಒಂದೇ ದಿನ 469 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ ಎಂಟು ಮಂದಿ ಸಾವನ್ನಪ್ಪಿದ್ದು ಇದೂವರೆಗೂ 159 ಸೋಂಕಿತರು ಮೃತಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 2596 ಕ್ಕೇರಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 308 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 9084 ಮಂದಿ ಗುಣಮುಖರಾಗಿದ್ದಾರೆ . ಭಾನುವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 449 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 20 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಭಾನುವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 469 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 176 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 126 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 78 , ಹನೂರು ತಾಲ್ಲೂಕಿನಲ್ಲಿ 52 , ಯಳಂದೂರು ತಾಲ್ಲೂಕಿನಲ್ಲಿ 32 ಹಾಗೂ ಹೊರ ಜಿಲ್ಲೆಯ ಐವರು ಸೇರಿದಂತೆ 469 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಶನಿವಾರ 1866 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 154674 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಕೋರೊನಾ ಸೋಂಕಿನಿಂದ ಮೃತವರೆಂದರೆ, ಏಪ್ರಿಲ್ 19 ರಂದು ದಾಖಲಾಗಿದ್ದ ಚಾಮರಾಜನಗರ ತಾಲ್ಲೂಕಿನ ದೇಶಿಗೌಡನಪುರ ಗ್ರಾಮದ 35 ವರ್ಷದ ಪುರುಷ, ಏಪ್ರಿಲ್ 26 ರಂದು ದಾಖಲಾಗಿದ್ದ ಕೊಳ್ಳೇಗಾಲ ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದ 56 ವರ್ಷದ ಪುರುಷ, ಏಪ್ರಿಲ್ 28 ರಂದು ದಾಖಲಾಗಿದ್ದ ಚಾಮರಾಜನಗರ ತಾಲ್ಲೂಕಿನ ನಲ್ಲೂರು ಮೋಳೆ ಗ್ರಾಮದ 70 ವರ್ಷದ ಪುರುಷ, ಏಪ್ರಿಲ್ 29 ರಂದು ದಾಖಲಾಗಿದ್ದ ಚಾಮರಾಜನಗರ ಪಟ್ಟಣದ 36 ವರ್ಷದ ಪುರುಷ, ಏಪ್ರಿಲ್ 30 ರಂದು ದಾಖಲಾಗಿದ್ದ ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ 34 ವರ್ಷದ ಪುರುಷ, ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಗ್ರಾಮದ 52 ವರ್ಷದ ಮಹಿಳೆ, ಮೇ 1 ರಂದು ದಾಖಲಾಗಿದ್ದ ಗುಂಡ್ಲುಪೇಟೆ ತಾಲ್ಲೂಕಿನ ಚಂಗವಾಡಿ ಗ್ರಾಮದ 39 ವರ್ಷದ ಪುರುಷ, ಅರಳೀಪುರ ಗ್ರಾಮದ 34 ವರ್ಷದ ಪುರುಷ ಮೃತಪಟ್ಟರೆಂದು ಚಾಮರಾಜನಗ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

Previous articleಪಾಪನಾಶಿನಿ ನದಿಗೆ ಮೂವರು ನೀರುಪಾಲು; ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Next articleಚುನಾವಣೆಯಲ್ಲಿ ಮತಗಳ ಮೂಲಕ ಜಾರಕಿಹೊಳಿ ಪ್ರತ್ಯುತ್ತರ ನೀಡಿದ ಮಂಗಳಾ ಅಂಗಡಿ

LEAVE A REPLY

Please enter your comment!
Please enter your name here