Home District ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಸತಾಯಿಸಿದ ಆಸ್ಪತ್ರೆ ಸಿಬ್ಬಂದಿ; ರಸ್ತೆಯಲ್ಲಿ ಪಾಸಿಟಿವ್ ರೋಗಯ ನರಳಾಟ

ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಸತಾಯಿಸಿದ ಆಸ್ಪತ್ರೆ ಸಿಬ್ಬಂದಿ; ರಸ್ತೆಯಲ್ಲಿ ಪಾಸಿಟಿವ್ ರೋಗಯ ನರಳಾಟ

293
0

ಚಿಕ್ಕಬಳ್ಳಾಪುರ: ಸಕಾಲಕ್ಕೆ ಚಿಕಿತ್ಸೆ ಸೀಗದೇ ನರಳಾಡಿದ ಕರೋನಾ ಪಾಸಿಟಿವ್ ರೋಗಿ.ಆರೋಗ್ಯ ಸಚಿವ ಸುಧಾಕರ್ ಉಸ್ತುವಾರಿ ಜಿಲ್ಲೆಯಲ್ಲೇ ಕೋರೋನಾ ರೋಗಿಗಳ ಜೊತೆ ವೈದ್ಯರ ಚೆಲ್ಲಾಟ.

ಕರೋನಾ ಪಾಸಿಟಿವ್ ಬಂದು ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ಸಿಗದೆ ಆಸ್ಪತ್ರೆ ಮುಂದೆ ಹಲವು ಗಂಟೆಗಳ ಕಾಲ ನರಳಾಡಿದ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದೆ.. ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಂತಾಮಣಿ ತಾಲ್ಲೂಕು ಕೆಂಚಾರ್ಲಹಳ್ಳಿ ಬಳಿಯ ಪೂತಕಪಲ್ಲಿ ಗ್ರಾಮದ 40 ವರ್ಷದ ವ್ಯಕ್ತಿ ಬಂದಿದ್ದ.. ಕೊರೋನಾ ಸೋಂಕಿತ ರೋಗಿ ಹಾಗೂ ಆತನ ಪತ್ನಿ ಆಸ್ಪತ್ರೆಗೆ ದಾಖಲಿಸಿಕೊಳ್ಳವಂತೆ ವೈದ್ಯರ ಬಳಿ ಬೇಡಿಕೊಂಡಿದ್ದಾರೆ.. ಆದರೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇಲ್ಲಿ ಬೆಡ್ ಖಾಲಿ ಇಲ್ಲ ನಿಮ್ಮ ದಾಖಲೆಗಳಲ್ಲಿ ಬೆಂಗಳೂರು ವಿಳಾಸ ಇರೋದ್ರಿಂದ ಬೆಂಗಳೂರಿಗೆ ಹೋಗಿ ಇಲ್ಲಿ ಚಿಕಿತ್ಸೆ ಕೊಡಲು ಆಗುವುದಿಲ್ಲ ಜೊತೆಗೆ ಅಡ್ಮಿಟ್ ಮಾಡಿಕೊಳ್ಳುವುದಿಲ್ಲ ಅಂತ ವಾಪಸ್ ಕಳುಹಿಸಿದ್ದಾರೆ.. ಆರೋಗ್ಯ ಸಚಿವ ಸುಧಾಕರ್ ಉಸ್ತುವಾರಿ ಜಿಲ್ಲೆಯಲ್ಲೇ ವೈದ್ಯರ ನಿರ್ಲಕ್ಷ್ಯದಿಂದ ಕೋವಿಡ್ ರೋಗಿಗಳು ಚಿಕಿತ್ಸೆ ಸಿಗದೆ ಆಸ್ಪತ್ರೆ ಆವರಣದಲ್ಲೇ ನರಳುವಂತಾಗಿದೆ… ಇನ್ನು ಸುಮಾರು 5-6 ಗಂಟೆಗಳ ನಂತರ ಕೋವಿಡ್ ಆಸ್ಪತ್ರೆ ವೈದ್ಯ ಡಾ. ಸಂತೋಷ್ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ..

Previous articleಗಮಕ; ಮಲೆನಾಡಿನ ಒಂದು ವಿಶಿಷ್ಟ ಕಲೆ
Next articleಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಭಾರೀ ಮಳೆ; ನೆಲಕಚ್ಚಿದ ಬಾಳೆ ಮರಗಳು!

LEAVE A REPLY

Please enter your comment!
Please enter your name here