ಚಂಕಿ ಪಾಂಡೆಗೆ ಸಾಕಷ್ಟು ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಪಾಂಡೆ

ಚಲನಚಿತ್ರ

ಇತ್ತೀಚೆಗಷ್ಟೇ ತೆರೆಕಂಡ ಲೈಗರ್ ಸಿನಿಮಾದ ಮೂಲಕ ಸಖತ್ ಸದ್ದು ಮಾಡಿದ್ದ ಬಾಲಿವುಡ್ ನಟಿ ಅನನ್ಯಾ ಪಾಂಡೆ ತಂದೆ ಚಂಕಿ ಪಾಂಡೆ ಕುರಿತಾಗಿ ಸ್ವತಃ ಪತ್ನಿಯೇ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪತಿ ಚಂಕಿ ಪಾಂಡೆಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು ಎಂದು ಭಾವನ ಬಹಿರಂಗವಾಗಿ ಭಾವನಾ ಹೇಳಿಕೊಂಡಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.

ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಾವನಾ ಪಾಂಡೆ, ತನ್ನ ಪತಿಯ ಡೇಟಿಂಗ್ ಕುರಿತಾಗಿಯೂ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಗಂಡನಿಗೆ ಸಿನಿಮಾ ರಂಗದ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು. ಅದು ನನಗೂ ಗೊತ್ತಿತ್ತು. ನನಗೆ ಗೊತ್ತಿದೆ ಅಂತ ಚಂಕಿ ಪಾಂಡೆಗೂ ಗೊತ್ತಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನೂರಾರು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ಚಂಕಿ ಪಾಂಡೆ ಬಗ್ಗೆ ಇಂಥದೊಂದು ಮಾತು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಡೇಟಿಂಗ್, ಸೆಕ್ಸ್, ಅನೈತಿಕ ಸಂಬಂಧ, ಬಾಯ್ ಫ್ರೆಂಡ್ ಹೀಗೆ ಇಂಥದ್ದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈವರೆಗೂ ಬಂದಿರುವಂತಹ ಅತಿಥಿಗಳು, ಯಾವುದಕ್ಕೂ ಮುಜಗರ ಪಟ್ಟುಕೊಳ್ಳದೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಲ್ಲದೇ, ಇನ್ನೂ ಅನೇಕ ಸಂಗತಿಗಳನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಈ ಶೋ ಬಗ್ಗೆ ಎಲ್ಲರಿಗೂ ಕುತೂಹಲ. ಬಾಲಿವುಡ್ ನ ಖ್ಯಾತ ನಟ ನಟಿಯರೆಲ್ಲ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಕೂಡ ಬಂದಿದ್ದರು. ಅವರು ಅನೇಕ ವಿಷಯಗಳನ್ನು ಖುಲ್ಲಂ ಖುಲ್ಲ ಮಾತನಾಡಿದ್ದರು. ತಮ್ಮ ಮತ್ತು ವಿಜಯ್ ದೇವರಕೊಂಡ ಜೊತೆಗೆ ಖಾಸಗಿ ಸಂಗತಿಗಳನ್ನೂ ಅವರು ಹಂಚಿಕೊಂಡಿದ್ದರು. ಮಗಳ  ಆ ಮಾತುಗಳಿಗೆಲ್ಲ ಚಂಕಿ ಬೆಂಬಲ ವ್ಯಕ್ತ ಪಡಿಸಿದ್ದರು. ಇದೀಗ ಚಂಕಿ ಬಗ್ಗೆಯೇ ಅಂತಹ ಮಾತುಗಳು ಕೇಳಿ ಬಂದಿದ್ದು ಇದಕ್ಕೆ ಅನನ್ಯಾ ಪಾಂಡೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಶುರುವಾಗಿದೆ.