ಚಟ್ನಿ ವಿಚಾರಕ್ಕೆ ಕಿರಿಕ್; ಪೊಲೀಸರೆದುರು ಬ್ಲೇಡ್ ನಿಂದ ಕುತ್ತಿಗೆ ಕುಯ್ದ ಯುವಕ

ಜಿಲ್ಲೆ

ಹುಬ್ಬಳ್ಳಿ: ಹೊಟೇಲ್‌ ನಲ್ಲಿ ಊಟದ ವಿಷಯವಾಗಿ ಮಾಲಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಓರ್ವನನ್ನು ಠಾಣೆಗೆ ವಿಚಾರಣೆಗೆಂದು ಪೊಲೀಸರ ಬಳಿ ಕರೆದುಕೊಂಡು ಬಂದಾಗ, ಆತ ಕುತ್ತಿಗೆಗೆ ಬ್ಲೇಡ್‌ ನಿಂದ ಕೊಯ್ದುಕೊಂಡು ಬೆದರಿಕೆ ಹಾಕಲು ಮುಂದಾದ ಘಟನೆ ಇಲ್ಲಿನ ಹಳೇಹುಬ್ಬಳ್ಳಿ ಠಾಣೆಯಲ್ಲಿ ನಡೆದಿದೆ.

ಇಲ್ಲಿನ ಗಣೇಶಪೇಟೆ ಮೀನು ಮಾರುಕಟ್ಟೆಯ ರಾಘವೇಂದ್ರ ನಾಯಕ ಎಂಬಾತನೆ ಕುತ್ತಿಗೆಗೆ ಬ್ಲೇಡ್ ಇರಿದುಕೊಂಡವ.ಈತನು ಗುರುವಾರ ಇಂಡಿ ಪಂಪ್ ವೃತ್ತ ಬಳಿಯ ಬಿರಿಯಾನಿ ಹೌಸ್ ಅಂಗಡಿಯ ಮಾಲಕರೊಂದಿಗೆ ತಿಂಡಿಗೆ ಚಟ್ನಿ ಕೊಡಲಿಲ್ಲವೆಂದು ಜಗಳ ಮಾಡಿಕೊಂಡಿದ್ದಾನೆ. ಆಗ ಪೊಲೀಸರು ಅಂಗಡಿಯ ಮಾಲಕ ಮತ್ತು ರಾಘವೇಂದ್ರನನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿದಾಗ, ಒಮ್ಮೇಲೆ ತನ್ನ ಬಳಿಯಿದ್ದ ಬ್ 22 ವರ್ಷದ ರಾಘವೇಂದ್ರನು ಹಣಕ್ಕಾಗಿ ಆಗಾಗ ತಾಯಿ ಹಾಗೂ ಸ್ನೇಹಿತರ ಬಳಿ ದುಂಬಾಲು ಬೀಳುತ್ತಿದ್ದ.

ಕೊಡದಿದ್ದರೆ ಕುತ್ತಿಗೆಗೆ ಬ್ಲೇಡ್‌ನಿಂದ ಕೊಯ್ದುಕೊಂಡು ಬೆದರಿಕೆ ಹಾಕುತ್ತಿದ್ದ. ಹೊಟೇಲ್‌ ಗಳಲ್ಲಿ ತಿಂಡಿ ತಿಂದು ಹಣ ಕೊಡದೆ ಜಗಳ ಮಾಡಿಕೊಳ್ಳುತ್ತಿದ್ದ. ಅದೇ ರೀತಿ ಗುರುವಾರವು ಹೊಟೇಲ್‌ನ ಮಾಲಕರೊಂದಿಗೆ ಜಗಳ ತೆಗೆದಿದ್ದಾಗ ವಿಚಾರಣೆಂದು ಠಾಣೆಗೆ ಕರೆಯಿಸಿದಾಗ ಕುತ್ತಿಗೆಗೆ ಬ್ಲೇಡ್‌ ನಿಂದ ಕೊಯ್ದುಕೊಂಡು ಬೆದರಿಸಲು ಮುಂದಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಳೇಹುಬ್ಬಳ್ಳಿ ಪೊಲೀಸರು ರಾಘವೇಂದ್ರನ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.