Home Home ಪಿಚ್ ನಿನ್ನ ಮನೆಯಲ್ಲ…; ಕೊಹ್ಲಿ- ಆಂಡರ್ಸನ್‌ ನಡುವೆ ಜಟಾಪಟಿ!

ಪಿಚ್ ನಿನ್ನ ಮನೆಯಲ್ಲ…; ಕೊಹ್ಲಿ- ಆಂಡರ್ಸನ್‌ ನಡುವೆ ಜಟಾಪಟಿ!

Clash between Kohli and Anderson | ಕೊಹ್ಲಿ- ಆಂಡರ್ಸನ್‌ ನಡುವೆ ಜಟಾಪಟಿ!

255
0

ಇತಿಹಾಸ ಪ್ರಸಿದ್ಧ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಭಾನುವಾರ, ಪದೇ ಪದೇ ಸ್ಲೆಡ್ಜಿಂಗ್‌ ಮೂಲಕ ಕೆಣಕುತ್ತಿದ್ದ ಜೇಮ್ಸ್‌ ಆಂಡರ್ಸನ್‌ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಪಂದ್ಯದ ಮೂರನೇ ದಿನದ ಆಟದಲ್ಲೇ ಸ್ಲೆಡ್ಜಿಂಗ್‌ ಶುರು ಮಾಡಿದ್ದ ಆಂಡರ್ಸನ್‌, ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ನಿಂದಿಸಲು ಆರಂಭಿಸಿದ್ದರು. ಬಳಿಕ ನಾಲ್ಕನೇ ದಿನಾದಾಟದಲ್ಲೂ ತಮ್ಮ ನಾಲಿಗೆ ಹರಿಬಿಟ್ಟಿದ್ದ ಆಂಡರ್ಸನ್‌, ಕ್ಯಾಪ್ಟನ್‌ ಕೊಹ್ಲಿ ಪಿಚ್‌ ಮೇಲೆ ಓಡುತ್ತಿದ್ದಾರೆ ಎಂದು ಅಂಪೈರ್‌ ಬಳಿ ದೂರು ನೀಡಿದರು.

ಇದಕ್ಕೆ ಖಡಕ್ ಉತ್ತರವನ್ನೇ ಕೊಟ್ಟ ಕೊಹ್ಲಿ, “ಪಿಚ್‌ ನಿನ್ನ ಮನೆಯಲ್ಲ. ಪಿಚ್‌ ಮೇಲೆ ನಾನು ಓಡುತ್ತಿದ್ದೇನೆ ಎಂದು ನಿನ್ನಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ವಯಸ್ಸಾಗುತ್ತಿದ್ದಂತೆ ನೀನು ಕಲಿತಿರುವುದು ಇಷ್ಟೇ,” ಎಂದು 38 ವರ್ಷದ ಅನುಭವಿ ಬಲಗೈ ವೇಗಿಗೆ ಕೊಹ್ಲಿ ಬಿಸಿ ಮುಟ್ಟಿಸಿದರು.

VIAClash between Kohli and Anderson | ಕೊಹ್ಲಿ- ಆಂಡರ್ಸನ್‌ ನಡುವೆ ಜಟಾಪಟಿ!
SOURCEClash between Kohli and Anderson | ಕೊಹ್ಲಿ- ಆಂಡರ್ಸನ್‌ ನಡುವೆ ಜಟಾಪಟಿ!
Previous articleಮನೆಗಳ್ಳರ ಹಾವಳಿ; ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಹಣ ಲೂಟಿ
Next articleಶಾಸಕರ ಕಾರಿಗೆ ಬೆಂಕಿ!; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ

LEAVE A REPLY

Please enter your comment!
Please enter your name here