Home Home ಜನರಿಗೆ ಒಂದು ನ್ಯಾಯವಾದರೆ ಸಿಎಂ ಪುತ್ರನಿಗೆ ಇನ್ನೊಂದು ನ್ಯಾಯ!

ಜನರಿಗೆ ಒಂದು ನ್ಯಾಯವಾದರೆ ಸಿಎಂ ಪುತ್ರನಿಗೆ ಇನ್ನೊಂದು ನ್ಯಾಯ!

ಜನರಿಗೆ ಒಂದು ನ್ಯಾಯವಾದರೆ ಸಿಎಂ ಪುತ್ರನಿಗೆ ಇನ್ನೊಂದು ನ್ಯಾಯ!

628
0

ಲಾಕ್ ಡೌನ್ ನಿಯಮಗಳು ಯಾರಿಗೆ ಅನ್ವಯ ಆಗುತ್ತೋ ಬಿಡುತ್ತೋ ಆದ್ರೆ, ಮುಖ್ಯಮಂತ್ರಿ ಪುತ್ರನಿಗೆ ಮಾತ್ರ ಕಿಂಚಿತ್ತೂ ಅನ್ವಯ ಆಗೋಗಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಮೈಸೂರು ಜಿಲ್ಲೆ ನಂಜನಗೂಡು ದೇವಸ್ಥಾನಕ್ಕೆ ಕುಟುಂಬ ಸಮೇತ ಪೂಜೆ ಸಲ್ಲಿಸಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜೇಂದ್ರ , ಕುಟುಂಬ ಸಮೇತರಾಗಿ ನಂಜನಗೂಡು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಪ್ರಕರಣ ರಾಜಕೀಯವಾಗಿ ಚರ್ಚೆಯಾತ್ತಿದೆ. ಲಾಕ್ ಡೌನ್ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪಕ್ಕೆ ವಿಜಯೇಂದ್ರ ಗುರಿಯಾಗಿದ್ದು, ಸಿಎಂ ಪುತ್ರನಿಗೆ ಒಂದು ಕಾನೂನು ಜನ ಸಾಮಾನ್ಯರಿಗೆ ಒಂದು ಕಾನೂನಾ..? ಎಂಬ ಪ್ರಶ್ನೆ ತಲೆ ಎತ್ತಿದೆ. ಈ ಪ್ರಕರಣವನ್ನು ರಾಜಕೀಯವಾಗಿ ತೆಗೆದುಕೊಂಡಿರುವ ಮೈಸೂರು ಕಾಂಗ್ರೆಸ್ ನಾಯಕರು ವಿಜಯೇಂದ್ರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಂತೆಯೇ ನಂಜನಗೂಡಿನಲ್ಲಿ ಮತ್ತೋರ್ವ ಮಾಜಿ ಸಿಎಂ ಪುತ್ರ ಹಾಗೂ ಶಾಸಕ ಯತೀಂದ್ರ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಜಯೇಂದ್ರ ನಡೆಯನ್ನು ಖಂಡಿಸಿದ್ದಾರೆ.

ಈ ನಡುವೆ ಬೆಂಗಳೂರಿನ ಜ್ಯುಡಿಷಿಯಲ್ ಲೇಔಟ್ ನಿವಾಸಿ ಒಬ್ಬರು ನಂಜನಗೂಡು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಅವರಿಗೆ ಕರೆ ಮಾಡಿ, ದೇವಸ್ಥಾನಕ್ಕೆ ಬರಲು ಅನುಮತಿ ನೀಡಿ ಎಂದು ಕರೆ ಮಾಡುತ್ತಿದ್ದಂತೆ ತಬ್ಬಿಬ್ಬಾದ ಅಧಿಕಾರಿ ನನ್ನಿಂದ ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಗೋಗರೆಯುವ ಆಡಿಯೋ ವೈರಲ್ ಆಗಿದ್ದು ಯಾರೋ ಮಾಡಿದ ತಪ್ಪಿಗೆ ಅಧಿಕಾರಿ ಪೇಚಿಗೆ ಸಿಲುಕುವಂತಾಗಿದೆ. ಇನ್ನೂ ಮೈಸೂರು ಪ್ರವಾಸದಲ್ಲಿರುವ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಗೆ ಈ ಬಗ್ಗೆ ಪ್ರಶ್ನಿಸಿದರೆ, ನನಗೇನು ಗೊತ್ತಿಲ್ಲ, ಈ ಬಗ್ಗೆ ಮಾಹಿತಿ ಇಲ್ಲ ಎನ್ನುವ ಮೂಲಕ ಸುಖಾ ಸುಮ್ಮನೆ ವಿಜಯೇಂದ್ರರನ್ನು ಏಕೆ ಎದುರು ಹಾಕಿಕೊಳ್ಳಬೇಕೆಂದು ನುನುಚಿಕೊಳ್ಳುವ ಪ್ರಯತ್ನ ಮಾಡಿದ್ರು.

ಇದೇನೇ ಇರಲಿ, ಲಾಕ್ ಡೌನ್ ವೇಳೆಯಲ್ಲಿ ಜೀವನೋಪಾಯಕ್ಕಾಗಿ ಬೀದಿಗೆ ಬಂದ ಜನಸಾಮಾನ್ಯರಿಗೆ ಲಾಠಿ ಏಟು ಬೀಳುತ್ತಿರುವುದು ಒಂದೆಡೆಯಾದರೆ, ಅಧಿಕಾರಸ್ಥರ ಮಕ್ಕಳಿಗೆ ಯಾವ ನಿಯಮಗಳು ಅನ್ವಯ ಆಗುವುದಿಲ್ಲ ಎಂಬಂತಾಗಿದೆ.

VIAಜನರಿಗೆ ಒಂದು ನ್ಯಾಯವಾದರೆ ಸಿಎಂ ಪುತ್ರನಿಗೆ ಇನ್ನೊಂದು ನ್ಯಾಯ!
SOURCEಜನರಿಗೆ ಒಂದು ನ್ಯಾಯವಾದರೆ ಸಿಎಂ ಪುತ್ರನಿಗೆ ಇನ್ನೊಂದು ನ್ಯಾಯ!
Previous articleತಂದೆ ತಾಯಿ ಇಲ್ಲದ ಹಸುಗೂಸು ಯಾರ ಮಡಿಲಿಗೆ?
Next articleಕೋಲಾರದಲ್ಲಿ ವರುಣನ ಆರ್ಭಟ!

LEAVE A REPLY

Please enter your comment!
Please enter your name here