
ಉಗ್ರರ ನಡೆಯ ಮತ್ತಷ್ಟು ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ
ಬೆಂಗಳೂರು: ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟ ಉಗ್ರರ ಬಂಧನ ಪ್ರಕರಣ ಸಂಬಂಧ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಬ್ಬರು ಶಂಕಿತ ಉಗ್ರರನ್ನು ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದು, ನಿನ್ನೆ ದಿನ ಇಬ್ಬರು ಶಂಕಿತ ಉಗ್ರರ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು, ಇದೇ ದಿನಾಂಕ ೧೮ ರವರೆಗೆ ನ್ಯಾಯಾಂಗ ಬಂಧನಕ್ಕೆ ಎನ್.ಐ.ಎ.ಸ್ಪೆಷಲ್ ಕೊರ್ಟ್ ನೀಡಿದೆ. ಇಬ್ಬರು ಶಂಕಿತರ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯವನ್ನು ಕಲೆ ಹಾಕುತ್ತಿದ್ದೇವೆ.
ಕೊಲ್ಕತ್ತಾದಲ್ಲಿ ಒಬ್ಬನ ವಿಚಾರಣೆ ಮಾಡಲಾಗಿದೆ. ಇವರ ಸಂಪರ್ಕದಲ್ಲಿ ಯಾರು ಇದ್ದಾರೆ ಅನ್ನೋ ಮಾಹಿತಿ ಕಲೆ ಹಾಕ್ತ ಇದ್ದೇವೆ. ಅಲ್ಲದೇ ಶಂಕಿತ ಉಗ್ರರು ಕಾಶ್ಮೀರಕ್ಕೆ ತೆರಳಲು ಸಿದ್ದರಾಗಿದ್ರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ನಾವು ಡಿಜಿಟಲ್ ಸಾಕ್ಷ್ಯವನ್ನು ಪರಿಶೀಲನೆ ಮಾಡ್ತ ಇದ್ದೇವೆ. ಕೆಲವು ಡಿಜಿಟಲ್ ಸಾಕ್ಷ್ಯಗಳ ವರದಿ ಬರಬೇಕಾಗಿದೆ ಅದಕ್ಕಾಗಿ ಕಾಯುತ್ತಿದ್ದೇವೆ. ನಿಷೇಧಿತ ಸಂಘಟನೆ ಸೇರಲು ತಯಾರಾಗಿದ್ರು ಅನ್ನೋ ಮಾಹಿತಿ ಪಕ್ಕವಾಗಿದ್ದು, ಕೆಲವು ಗ್ರೂಫ್ ಗಳಲ್ಲಿ ಇಬ್ಬರು ಶಂಕಿತರು ಆ್ಯಕ್ಟೀವ್ ಆಗಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಹೇಳಿದ್ದಾರೆ.