Home Home ವ್ಯಾಕ್ಸಿನ್ ವಿರುದ್ಧ ಮೊದಲು ಅಪಪ್ರಚಾರ ಮಾಡಿದ್ದು ಕಾಂಗ್ರೆಸ್; ಬಿಜೆಪಿ ರಾಜ್ಯ SC ಮೋರ್ಚಾ ಅಧ್ಯಕ್ಷ ಛಲವಾದಿ...

ವ್ಯಾಕ್ಸಿನ್ ವಿರುದ್ಧ ಮೊದಲು ಅಪಪ್ರಚಾರ ಮಾಡಿದ್ದು ಕಾಂಗ್ರೆಸ್; ಬಿಜೆಪಿ ರಾಜ್ಯ SC ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

Congress has first defaulted on vaccines; | ವ್ಯಾಕ್ಸಿನ್ ವಿರುದ್ಧ ಮೊದಲು ಅಪಪ್ರಚಾರ ಮಾಡಿದ್ದು ಕಾಂಗ್ರೆಸ್; ಬಿಜೆಪಿ ರಾಜ್ಯ SC ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

276
0

ವ್ಯಾಕ್ಸಿನ್ ವಿರುದ್ಧ ಮೊದಲು ಅಪಪ್ರಚಾರ ಮಾಡಿದ್ದು ಕಾಂಗ್ರೆಸ್ ಎಂದು ಕೋಲಾರದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಕೊಲಾರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಕೇಂದ್ರದ ಮೋದಿ ಸರ್ಕಾರ ನಾಳೆಗೆ 7 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ದೇಶದೆಲ್ಲೆಡೆ ಗಿಡ ನೆಡುವ ಮೂಲಕ 7 ವರ್ಷದ ಆಚರಣೆ ಮಾಡುತ್ತಿದ್ದೇವೆ ಎಂಬ ಮಾಹಿತಿ ನೀಡಿದ ಅವರು.

ವ್ಯಾಕ್ಷಿನ್ ಬಂದಾಗ ಹಾಕಿಸಿಕೊಳ್ಳಬೇಡಿ ಅದರಿಂದ ಮಕ್ಕಳಾಗಲ್ಲ ಹೀಗೆ ಅಪಪ್ರಚಾರ ಮಾಡಿದ್ರು ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ಅಲ್ಲದೆ ಕೊರೊನಾ ಸಂಕಷ್ಟದಲ್ಲಿ ದೀಪ ಬೆಳಗಿಸಿದ್ದು, ಶಬ್ದ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿದ ಅವರು, ಅದೆಲ್ಲವೂ ಕೊರೊನಾ ವಾರಿಯರ್ಸ್‌ನ್ನು ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಹಾಗೆ ಮಾಡಿದ್ದು ಎಂದು ಸಮರ್ಥನೆ ನೀಡಿದ್ರು.

ಇನ್ನೂ ಇದೆ ವೇಳೆ ಕೇಂದ್ರ ಗೃಹ ಇಲಾಖೆ ವತಿಯಿಂದ ಜು-30 ರವರೆಗೆ ಲಾಕ್ ಡೌನ್ ವಿಸ್ತರಣೆಗೆ ಸೂಚನೆ ಬಂದಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಕೇಂದ್ರ ಗೃಹ ಇಲಾಖೆ ಇಂದು ಎಲ್ಲಾ ರಾಜ್ಯಗಳಿಗೂ ಜು-೩೦ ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಸೂಚನೆ ನೀಡಿದೆ. ಹಾಗಾಗಿ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದ್ರು. ಆದ್ರೆ ಏಕಾಏಕಿ ಲಾಕ್ ಡೌನ್ ಸಡಿಲಗೊಳಿಸಿದರೆ ಮತ್ತೆ ಅಪಾಯ ಎದುರಾಗುವುದರಿಂದ ನಿಧಾನವಾಗಿ ಜಿಲ್ಲೆಗಳ ಸ್ಥಿತಿಗತಿಗಳನ್ನು ನೋಡಿಕೊಂಡು ಲಾಕ್ ಡೌನ್ ಸಡಿಲಗೊಳಿಸಲಾಗುವುದೆಂದರು.

ಇನ್ನು ಜಿಲ್ಲಾಡಳಿತ ಲಾಕ್ ಡೌನ್ ಮಾಡಿದ ಮೇಲೆ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲೂ ಕೊರೊನಾ ಸಂಪೂರ್ಣ ಮುಕ್ತವಾಗಬೇಕಾಗಿದೆ ಎಂದರು.

VIACongress has first defaulted on vaccines; | ವ್ಯಾಕ್ಸಿನ್ ವಿರುದ್ಧ ಮೊದಲು ಅಪಪ್ರಚಾರ ಮಾಡಿದ್ದು ಕಾಂಗ್ರೆಸ್; ಬಿಜೆಪಿ ರಾಜ್ಯ SC ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ
SOURCECongress has first defaulted on vaccines; | ವ್ಯಾಕ್ಸಿನ್ ವಿರುದ್ಧ ಮೊದಲು ಅಪಪ್ರಚಾರ ಮಾಡಿದ್ದು ಕಾಂಗ್ರೆಸ್; ಬಿಜೆಪಿ ರಾಜ್ಯ SC ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ
Previous articleಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ!
Next articleಅಧಿಕಾರಿಗಳು v/s ಜನಪ್ರತಿನಿಧಿಗಳ ವೈಮನಸ್ಸಿಗೆ Medicine ನೀಡಿದ ಸಚಿವ S.T ಸೋಮಶೇಖರ್!

LEAVE A REPLY

Please enter your comment!
Please enter your name here