
ಗುತ್ತಿಗೆದಾರ ಸಂತೋಷ್ ಪಾಟೀಲ ಅಂತ್ಯಕ್ರಿಯೆಗೆ ಯಾರೋಬ್ಬ ಬಿಜೆಪಿ ಮುಖಂಡರು ಬಂದಿಲ್ಲ ಶಾಸಕಿ ಹೆಬಾಳ್ಕರ್ ಆಕ್ರೋಶ.!
ಬೆಳಗಾವಿ : ತಾಲೂಕಿನ ಸ್ವಗ್ರಾಮ ಬಡಸ್ ನ ಗುತ್ತಿಗೆದಾರ ಸಂತೋಷ ಪಾಟೀಲ್ ಅಂತ್ಯಕ್ರಿಯೆಗೆ ಯಾರೋಬ್ಬ ಬಿಜೆಪಿಯ ಮುಖಂಡರು ಬಂದಿಲ್ಲವೇಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ್ ವ್ಯಕ್ತಪಡಿಸಿದರು. ಕಳೆದ ಎರಡು ದಿನಗಳಿಂದ ಸಂತೋಷ ತಾಯಿ, ಪತ್ನಿ ಕುಟುಂಬಸ್ಥರು ಊಟ ನಿದ್ರೆ ಇಲ್ಲದೇ ಸಂಕಷ್ಟದಲ್ಲಿದ್ರು. ಹೀಗಾಗಿ ಅಂತ್ಯಕ್ರಿಯೆ ಸರಳವಾಗಿ ನಡೆಯಲು ಬಿಟ್ಟಿದ್ದೇವೆ.
ನಾನು ಒಂದು ಕರೆ ಕೊಟ್ಟಿದ್ದರೆ 10 ಸಾವಿರ ಜನ ಸೇರ್ತಿದ್ರು. ಆದ್ರೆ ದುರದೃಷ್ಟ ಬಿಜೆಪಿಯ ಯಾವೊಬ್ಬ ಮುಖಂಡರು ಅಂತ್ಯಕ್ರಿಯೆಗೆ ಬರಲಿಲ್ಲ. ಸಂತೋಷ ಪಾಟೀಲ್ ಅಪ್ಪಟ ಮೋದಿಜೀ ಅಭಿಮಾನಿ, ಯಡಿಯೂರಪ್ಪನವರ ಅಭಿಮಾನಿಯಾಗಿದ್ದ. ಸೌಜನ್ಯಕ್ಕೂ, ಮಾನವೀಯತೆಗಾದ್ರು ಬಿಜೆಪಿಯವ್ರು ಬರಲಿಲ್ಲ.
24 ಗಂಟೆ ರಾಮನ ಭಜನೆ ಮಾಡೋರು, ದೇವರ ಪೂಜಿಸೋರು ಇಷ್ಟೋಂದು ಅವರ ಮನಸು ಕಠೋರವಾಯ್ತಾ ಅವರ ಕಣ್ಣಲ್ಲಿ ನೀರು ಬರೋದಿಲ್ಲ. ಅವರ ಮನೆಯಲ್ಲಿ ಹೀಗೆ ಆಗಿದ್ರೆ ಹೀಗೆ ಎನ್ ಮಾಡ್ತಿದ್ರಾ ಎಂದು ಮಾಧ್ಯಮಗಳ ಮೂಲಕ ಬಿಜೆಪಿಗೆ ಪ್ರಶ್ನಿಸಿದರು. ಸಂತೋಪ್ ಪಾಟೀಲ ಒಬ್ಬ ಬಿಜೆಪಿಯ ಕಾರ್ಯಕರ್ತ ಇವತ್ತು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ.
ಸಂತೋಷ ಕುಟುಂಬಸ್ಥರಿಗೆ 4 ಕೋಟಿ ಕಾಮಗಾರಿ ಬಿಲ್ ನೀಡಬೇಕು, 1 ಕೋಟಿ ಪರಿಹಾರ ನೀಡಬೇಕು. ಸಂತೋಷ ಪತ್ನಿಗೆ ಸರಕಾರಿ ನೌಕರಿ ನೀಡಬೇಕು. ನಿನ್ನೆ ಪೋಸ್ಟಮಾರ್ಟಂ ಆಗಿದೆ, ಸಂತೋಷ ಮೊಬೈಲ್ ನಲ್ಲಿ ಎಲ್ಲ ಎವಿಡೆನ್ಸ್ ಸಿಕ್ಕಿದೆ. ಎವಿಡೆನ್ಸ್ ಇದ್ರು ಕೂಡ ಇದುವರೆಗೆ ಮೂವರನ್ನು ಯಾಕೆ ಬಂಧಿಸಿಲ್ಲ.
ಸಾಕ್ಷಿ ಏನಾದರೂ ತಿರುಚಲು ನಿಂತಿದ್ದೀರಾ ಎಂದು ಬಿಜೆಪಿ ಸರಕಾರದ ವಿರುದ್ದ ಕೆಂಡಾಮಂದಲ ಯಾದರು. ಸತ್ತಹೊದ ವ್ಯಕ್ತಿ ಮರಳಿ ಬರೋದಿಲ್ಲ. ಈಶ್ವರಪ್ಪಗೆ ಮಂತ್ರಿಗಿರಿಯಿಂದ ವಜಾ ಅಷ್ಟೇಯಲ್ಲ, ಈಶ್ವರಪ್ಪ ಅರೆಸ್ಟ್ ಆಗಬೇಕು, ಶಿಕ್ಷೆ ಆಗಬೇಕು ಎಂದು ಮೃತ ವ್ಯಕ್ತಿ ಅಂತ್ಯಕ್ರಿಯೆ ಬಳಿಕ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದರು.