Home District ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ!

ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ!

ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ!

433
0

ವರದಿ: ನಾ.ಅಶ್ವಥ್ ಕುಮಾರ್

ಕೋವಿಡ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ 12 ಮಂದಿ ಸಾವು.ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 12 ಸಾವು.ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ತನಕ ಹನ್ನೆರಡು ಮಂದಿ ದುರ್ಮರಣ.ಚಾಮರಾಜನಗರ ತಾಲ್ಲೂಕಿನ ಐವರು, ಕೊಳ್ಳೇಗಾಲ ತಾಲ್ಲೂಕಿನ ಆರು ಮಂದಿ ಯಳಂದೂರು ತಾಲ್ಲೂಕಿನ ಒಬ್ಬರು ದುರ್ಮರಣ.

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ತನಕ ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ.

9 ಗಂಟೆ ಅವಧಿಯಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 12 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಚಾಮರಾಜನಗರ ತಾಲ್ಲೂಕಿನ 5 ಮಂದಿ, ಕೊಳ್ಳೇಗಾಲ ತಾಲ್ಲೂಕಿನ ಆರು ಮಂದಿ ಯಳಂದೂರು ತಾಲ್ಲೂಕಿನ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಕೋವಿಡ್ ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ವೈದ್ಯರು ನೀಡಲಾಗುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ 9 ಗಂಟೆಗಳಂತರದಲ್ಲಿ 12 ಮಂದಿ ಸಾವನ್ನಪ್ಪಿದ್ದು ಗಮನಿಸಿದೆ ಕೋವಿಡ್ ಸೋಂಕು ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಮಿತಿ ಮೀರುತ್ತಿದೆ ಎನ್ನಲಾಗುತ್ತಿದೆ.

ಕೋವಿಡ್ ಸೋಂಕು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಇಂದಿನಿಂದ ಟಫ್ ರೂಲ್ಸ್ ಜಾರಿಗೊಳಿಸುವ ಮೂಲಕ ಲಾಕ್ ಡೌನ್ ಗೆ ಮುಂದಾಗಿದೆ. ಇಷ್ಟೆಲ್ಲಾ ಕಟ್ಟೆಚ್ಚರ ಇದ್ದರೂ ಸಹ ಚಾಮರಾಜನಗರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣವೂ ಸಹ ಅಧಿಕವಾಗುತ್ತಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಬಗ್ಗೆ ಹಾಗೂ ಸೋಂಕಿತರು ಸಾವನ್ನಪ್ಪುತ್ತಿರುವ ಸಂಖ್ಯೆ ಅಧಿಕವಾಗುತ್ತಿರುವ ಬಗ್ಗೆ ಜಿಲ್ಲೆಯ ಜನತೆ ತೀರಾ ಆತಂಕದಲ್ಲಿದ್ದಾರೆ.

VIAಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ!
SOURCEಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ!
Previous articleಬಯಲಾಯ್ತು ಸ್ಕಾನಿಂಗ್ ಸೆಂಟರ್ ನ ಕರಾಳ ದಂಧೆ!
Next articleರಾಮಲಿಂಗಾರೆಡ್ಡಿ ಸರ್ಕಾರಕ್ಕೆ ನೀಡಿದ ಸಲಹೆಗಳೇನು ಗೊತ್ತೇ?; ಪ್ರಜಾ ಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here