Home District ಚಾಮರಾಜನಗರದಲ್ಲಿ ಕಂಡುಬಂದ ಕೊರೋನಾದ ಕರಾಳಮುಖ!

ಚಾಮರಾಜನಗರದಲ್ಲಿ ಕಂಡುಬಂದ ಕೊರೋನಾದ ಕರಾಳಮುಖ!

ಚಾಮರಾಜನಗರದಲ್ಲಿ ಕಂಡುಬಂದ ಕೊರೋನಾದ ಕರಾಳಮುಖ

482
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಶುಕ್ರವಾರ ಕರಾಳವೆನಿಸಿದೆ.

ಶುಕ್ರವಾರ ಒಂದೇ ದಿನ 622 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 6 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 279 ಸೋಂಕಿತರು ಮೃತಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 4553ಕ್ಕೇರಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 575 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 14684 ಮಂದಿ ಗುಣಮುಖರಾಗಿದ್ದಾರೆ. ಬುಧವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 605 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 17 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ .

ಶುಕ್ರವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 622ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 231 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 114 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 141, ಹನೂರು ತಾಲ್ಲೂಕಿನಲ್ಲಿ 98 ಯಳಂದೂರು ತಾಲ್ಲೂಕಿನಲ್ಲಿ 35 ಮಂದಿ, ಹೊರ ಜಿಲ್ಲೆಯ ಮೂವರು ಸೇರಿ 622 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಗುರುವಾರ 1083 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 169561 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ಪಟ್ಟಣದ 54 ವರ್ಷದ ಮಹಿಳೆ, 75 ವರ್ಷದ ಮಹಿಳೆ, ತಾಲ್ಲೂಕಿನ ಹರವೆ ಗ್ರಾಮದ 60 ವರ್ಷದ ಪುರುಷ, ಮರಿಯಾಲ ಗ್ರಾಮದ 65 ವರ್ಷದ ಮಹಿಳೆ , ಹನೂರು ತಾಲ್ಲೂಕಿನ ಮಂಗಲ ಗ್ರಾಮದ 65 ವರ್ಷದ ಮಹಿಳೆ, ತಮಿಳುನಾಡಿನ ತಾಳವಾಡಿಯ 60 ವರ್ಷದ ಮಹಿಳೆ, ಕೋವಿಡ್ ಆಸ್ಪತ್ರೆಯಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ. ಇದೂವರೆಗೂ ಕೋವಿಡ್ ಸೋಂಕಿತರು ಮೃತಪಟ್ಟಿದ್ದರೆ, ದೃಡೀಕೃತ ಕೋವಿಡ್ ಪಾಸಿಟೀವ್ ರೋಗಿಯು ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಚಾಮರಾಜನಗರದಲ್ಲಿ ಕಂಡುಬಂದ ಕೊರೋನಾದ ಕರಾಳಮುಖ
SOURCEಚಾಮರಾಜನಗರದಲ್ಲಿ ಕಂಡುಬಂದ ಕೊರೋನಾದ ಕರಾಳಮುಖ
Previous articleಆಕ್ಸಿಜನ್ ದುರಂತದ ಬಗ್ಗೆ ಪ್ರಶ್ನಿಸಿದಾಗ ನಾಜೂಕಾಗಿ ನುಣುಚಿಕೊಂಡ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ
Next articleರೋಗಿ ನರಳಾಡುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳು!

LEAVE A REPLY

Please enter your comment!
Please enter your name here