Home District ಕೊರೊನಾಕ್ಕೆ ಹೆದರಿ ನೇಣಿಗೆ ಶರಣಾದ ವೃದ್ಧೆ

ಕೊರೊನಾಕ್ಕೆ ಹೆದರಿ ನೇಣಿಗೆ ಶರಣಾದ ವೃದ್ಧೆ

ಕೊರೊನಾಕ್ಕೆ ಹೆದರಿ ನೇಣಿಗೆ ಶರಣಾದ ವೃದ್ಧೆ

625
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ: ನನಗೆ‌ ಬಂದ ಕೊರೊನಾ ಸೋಂಕು ಮೊಮ್ಮಕ್ಕಳಿಗೂ ಹರಡುವುದೋ ಎಂದು ಹೆದರಿದ ವೃದ್ಧೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದಲ್ಲಿ ನಡೆದಿದೆ.ವೃದ್ದೆಯೊರ್ವಳಿಗೆ ಏಳು ದಿನದ ಹಿಂದೆ ಕೊರೊನಾ ಪಾಸಿಟಿವ್ ದೃಡಪಟ್ಟಿತ್ತು. ವೈದ್ಯರ ಸಲಹೆಯಂತೆ ಹೋಂ ಐಸೋಲೇಟ್ ಆಗಿದ್ದ ಆಕೆ ನನ್ನಿಂದ ನನ್ನ ಕುಟುಂಬಕ್ಕೂ ಕೊರೊನಾ ಹರಡುಬಿಡುತ್ತದೆ ಎಂದು ಎದುರಿ ನೇಣಿಗೆ ಕೊರಳೊಡ್ಡಿದ ಘಟನೆ ಜರುಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಸಿದ್ದಮ್ಮ(70) ಮೃತ ದುರ್ದೈವಿ. ಈಕೆಗೆ ಮೇ .1 ರಂದು ಜ್ವರ ಕಾಣಿಸಿಕೊಂಡಿದ್ದು ಚಿಕಿತ್ಸೆಕೊಡಿಸಲಾಗಿದ್ದು ಮಾ.3 ರಂದು ಕೊರೊನಾ ಪಾಸಿಟಿವ್ ಇರುವುದು ದೃಡವಾಗಿದೆ. ವೈದ್ಯರ ಸಲಹೆಯಂತೆ ಹೋಂ ಐಸೋಲೇಟ್ ಆಗಿದ್ದ ಸಿದ್ದಮ್ಮ ನನ್ನಿಂದ ಕೊರೊನಾ ನನ್ನ ಮೊಮ್ಮಕ್ಕಳಿಗೆ ಹರಡುವುದೊ ಎಂದು ಯೋಚಿಸುತ್ತ ಜಿಗುಪ್ಸೆ ಗೊಳಗಾಗಿದ್ದರು ಎನ್ನಲಾಗಿದೆ. ಇಂದು ವೃದ್ಧೆಯ ಕೊಠಡಿಗೆ ಕಾಫಿ ನೀಡಲು‌ ಹೋದಾಗ ಪ್ಲಾಸ್ಟಿಕ್ ಹಗ್ಗದಿಂದ ಮನೆಯ ಮೇಲ್ಚಾವಣಿಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವೃದ್ದೆಯ ಮಗ ಸೀಗನಾಯಕ ನನ್ನ ತಾಯಿ ಕೊರೊನಾ ಜಿಗುಪ್ಸೆಗೊಳಗಾಗಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ ಎಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ. ವಿಚಾರ ತಿಳಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿ ಶಿವಕುಮಾರ್ ಇನ್ನಿತರರು ಹಾಗೂ ವೈದ್ಯರು ಸ್ಥಳಕ್ಕೆ ದೌಡಾಯಿಸಿ ಕೊರೊನಾ ನಿಯಮಾವಳಿಯಂತೆ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

VIAಕೊರೊನಾಕ್ಕೆ ಹೆದರಿ ನೇಣಿಗೆ ಶರಣಾದ ವೃದ್ಧೆ
SOURCEಕೊರೊನಾಕ್ಕೆ ಹೆದರಿ ನೇಣಿಗೆ ಶರಣಾದ ವೃದ್ಧೆ
Previous articleಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ; KGFಗೆ 500LPM ಆಕ್ಸಿಜನ್​ ಉತ್ಪಾದನಾ ಯಂತ್ರ
Next articleರಸ್ತೆಗಿಳಿದ ವಾಹನಗಳು ಸೀಜ್; ವಾಹನ ಸವಾರರ ಅಳಲು!

LEAVE A REPLY

Please enter your comment!
Please enter your name here