Home District ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಮುಖಂಡರ ಸಲಹೆ ಸಹಕಾರ

ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಮುಖಂಡರ ಸಲಹೆ ಸಹಕಾರ

ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಮುಖಂಡರ ಸಲಹೆ ಸಹಕಾರ

851
0

ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ, ಇಂದು ತಾಲೂಕಿನ ಪ್ರಮುಖ ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಳಕಳಿಯ ಉದ್ಯಮಿಗಳನ್ನು ಭೇಟಿಮಾಡಿ ಸಲಹೆ ಸಹಕಾರವನ್ನು ಕೋರಲಾಯಿತು.

 

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇಲ್ಲಿಯ ಆಡಳಿತ ಮೊಕ್ತೇಸರರಾದ ಶ್ರೀ ವಿಜಯರಾಘವ ಪಡ್ವೆಟ್ನಾಯ ಮತ್ತು ಶರತ್ ಕೃಷ್ಣ ಪಡ್ವೆಟ್ನಾಯ, ತಿಮ್ಮಣ್ಣರಸರಾದ ಡಾ ಪದ್ಮ ಪ್ರಸಾದ್ ಅಜಿಲರು ಅಳದಂಗಡಿ ಅರಮನೆ,ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ,ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ‌ ಜಮಾಅತ್ ನ ಅಧ್ಯಕ್ಷರು ಸಯ್ಯಿದ್ ಇಸ್ಮಾಯಿಲ್ ತಂಙಳ್, ಬರೋಡ ತುಳು ಸಂಘದ ಅಧ್ಯಕ್ಷರೂ ಖ್ಯಾತ ಉದ್ಯಮಿಗಳಾದ ಶ್ರೀ ಶಶಿಧರ್ ಶೆಟ್ಟಿ ನವಶಕ್ತಿ,ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಲಕ್ಷ್ಮಿ ಗ್ರೂಪ್ ಮತ್ತು ರಾಜೇಶ್ ಪೈ ಉಜಿರೆ, ಬಿ.ಕೆ. ಧನಂಜಯ ರಾವ್ ಅಧ್ಯಕ್ಷರು ರೋಟರಿ ಕ್ಲಬ್ ಬೆಳ್ತಂಗಡಿ, ವಾಣಿ ವಿದ್ಯಾಸಂಸ್ಥೆಗಳ ಗೌರವಾಧ್ಯಕ್ಷರಾದ ಶ್ರೀ ಪದ್ಮ ಗೌಡ ಬೆಳಾಲು ಹಾಗೂ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಲೋಬೊ ಮುಂತಾದ ಗಣ್ಯರನ್ನು ಸಂದರ್ಶಿಸಿ ತಾಲೂಕಿನಲ್ಲಿ ಕೊರೋನಾದ ವಿರುದ್ಧ ಹೋರಾಟವನ್ನು ಒಗ್ಗಟ್ಟಿನಿಂದ ಎದುರಿಸುವ ನಿಟ್ಟಿನಲ್ಲಿ ಸಹಕಾರವನ್ನು ಕೋರಲಾಯಿತು.

ಕೊರೋನಾದ ಈ ವಿಷಮ ಸ್ಥಿತಿಯಲ್ಲಿ ಎಲ್ಲರೂ ಸರಕಾರ ವಿಧಿಸಿರುವ #ಲಾಕ್ಡೌನ್ ನಿಬಂಧನೆಗಳನ್ನು ಪಾಲಿಸಿ ಕೊರೋನಾದ ವಿರುದ್ಧದ ಈ ಸಮರದಲ್ಲಿ ಗೆಲ್ಲೊಣ.

 

VIAಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಮುಖಂಡರ ಸಲಹೆ ಸಹಕಾರ
SOURCEಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಮುಖಂಡರ ಸಲಹೆ ಸಹಕಾರ
Previous articleಸರ್ಕಾರದ ನಿರ್ಲಕ್ಷಕ್ಕೆ ಕಿಡಿಕಾರಿದ ಟಗರು!
Next articleನಾಳೆಯಿಂದ 4 ದಿನ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆ ಸಂಪೂರ್ಣ ಲಾಕ್ ಡೌನ್!

LEAVE A REPLY

Please enter your comment!
Please enter your name here