Home Home ಚಾಮರಾಜನಗರ ಜಿಲ್ಲೆಯಲ್ಲಿ 265 ಮಂದಿ ಕೋರೊನಾ ದೃಢ; 5 ಸಾವು; 2808 ಸಕ್ರಿಯ...

ಚಾಮರಾಜನಗರ ಜಿಲ್ಲೆಯಲ್ಲಿ 265 ಮಂದಿ ಕೋರೊನಾ ದೃಢ; 5 ಸಾವು; 2808 ಸಕ್ರಿಯ ಪ್ರಕರಣ

Corona in Chamarajanagar | ಚಾಮರಾಜನಗರ ಜಿಲ್ಲೆಯಲ್ಲಿ 265 ಮಂದಿ ಕೋರೊನಾ ದೃಢ; 5 ಸಾವು; 2808 ಸಕ್ರಿಯ ಪ್ರಕರಣ

239
0
SHARE

ಭಾನುವಾರ 06 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ – ಇದೂವರೆಗೂ 448 ಸಾವು ; ಶನಿವಾರ 4193 ಮಂದಿಗೆ ಲಸಿಕೆ ಇದೂವರೆಗೂ 209072 ಮಂದಿಗೆ ಲಸಿಕೆ

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗಿದ್ದರೆ, ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಭಾನುವಾರ ಒಂದೇ ದಿನ 265 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 06 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 448 ಸೋಂಕಿತರು ಮೃತಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಏರಳಿತವಾಗುತ್ತಿದೆ. ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 2808 ಕ್ಕೆ ಇಳಿದಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 313 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 24977 ಮಂದಿ ಗುಣಮುಖರಾಗಿದ್ದಾರೆ .

ಭಾನುವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 224 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 41 ಮಂದಿ ಸೇರಿ 265 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ. ಭಾನುವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 265 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 107 ಮಂದಿ , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 59 ಮಂದಿ, ಕೋಳ್ಳೆಗಾಲ ತಾಲ್ಲೂಕಿನಲ್ಲಿ 36 ಮಂದಿ , ಹನೂರು ತಾಲ್ಲೂಕಿನಲ್ಲಿ 38 ಮಂದಿ , ಯಳಂದೂರು ತಾಲ್ಲೂಕಿನಲ್ಲಿ 22 ಮಂದಿ, ಹೊರ ಜಿಲ್ಲೆಯ ಮೂವರು ಸೇರಿ 265 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಶನಿವಾರ 4193 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 209072 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ . ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ತಾಲ್ಲೂಕಿನ ಗಂಗವಾಡಿ ಗ್ರಾಮದ 35 ವರ್ಷದ ಮಹಿಳೆ, ಚಂದಕವಾಡಿ ಗ್ರಾಮದ 75 ವರ್ಷದ ಮಹಿಳೆ, ಕಿಳಲೀಪುರ ಗ್ರಾಮದ 30 ವರ್ಷದ ಮಹಿಳೆ, ಮಸಣಾಪುರದ 41 ವರ್ಷದ ಮಹಿಳೆ,
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ 50 ವರ್ಷದ ಮಹಿಳೆ, ಗುಂಡ್ಲುಪೇಟೆ ಪಟ್ಟಣದ 80 ವರ್ಷದ ಮಹಿಳೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದೂವರೆಗೂ 448 ಮಂದಿ ಮೃತರಾಗಿದ್ದು, ಇದೂವರೆಗೂ ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here