Home District ಎಲ್ಲೆಡೆ ಮಹಾಮಾರಿಯದ್ದೇ ಆತಂಕ; ತತ್ತರಿಸಿದ ಜನಸಾಗರ

ಎಲ್ಲೆಡೆ ಮಹಾಮಾರಿಯದ್ದೇ ಆತಂಕ; ತತ್ತರಿಸಿದ ಜನಸಾಗರ

311
0

ಎಲ್ಲೆಡೆ ಮಹಾಮಾರಿಯದ್ದೇ ಆತಂಕವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ರೋಗ ಉಲ್ಬಣವಾಗುತ್ತಿದೆ. ಎಚ್ಚೆತ್ತ ಜಿಲ್ಲಾಡಳಿತ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದೆ. ಸಹಕರಿಸಿ ಎಂದು ಜನರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸೋಂಕಿತನಿಗೆ ಆರೋಗ್ಯ ಸಚಿವರ ತವರಲ್ಲೇ ಆಸ್ಪತ್ರೆ ಸಿಬ್ಬಂದಿ ಅಲೆಸಿದ್ದಾರೆ.

ಎರಡನೇ ಅಲೆ ಸಮಸ್ಯೆಯಾಗಿ ಪರಿಣಮಿಸಿದೆ. ಜನಜೀವನ ತತ್ತರಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳನ್ನು ಬಂದ್ ಮಾಡಿಸಲಾಗಿದೆ. ಹೊಟೇಲ್, ಬೇಕರಿ, ಮೆಡಿಕಲ್, ಹಾಲು, ಹಣ್ಣು ತರಕಾರಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಚಿಕ್ಕಮಗಳೂರಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆ ಸಂಪೂರ್ಣ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಲಾಗಿದೆ. ಮೇ 4ರವರೆಗೆ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಲಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ.

ತುಮಕೂರು ಜಿಲ್ಲೆ ಬಹುತೇಕ ಲಾಕ್ ಆಗಿದೆ. ಅಂಗಡಿ ಮುಂಗಟ್ಟುಗಳನ್ನ ಕ್ಲೋಸ್ ಮಾಡಲಾಗಿದೆ. ತುಮಕೂರಿನ ಎಂ.ಜಿ ರಸ್ತೆ, ಬಿಹೆಚ್ ರಸ್ತೆಯ ಅಂಗಡಿಗಳು ಕ್ಲೋಸ್ ಆಗಿದೆ. ಸರ್ಕಾರದ ಮಾರ್ಗದರ್ಶನದ ಮೇರೆಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಮೈಸೂರಿನಲ್ಲಿ ಕರೊನಾ ಉಲ್ಬಣಿಸುತ್ತಿದೆ. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಸಚಿವ‌ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆದಿದೆ. ಕೋವಿಡ್ ತಡೆಗೆ ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲಾಗಿದೆ. ಇದೇವೇಳೆ ಮಾತನಾಡಿಸ ಸಚಿವ ಸುಧಾಕರ್ 40 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಜಿಂದಾಲ್ ಕಂಪನಿ ಒಪ್ಪಿಕೊಂಡಿದೆ. ಬೆಂಗಳೂರಿಗೆ ಎಲ್ಲಾ ಆಸ್ಪತ್ರೆಗಳಿಗೂ ಜಂಬೂ ಸಿಲಿಂಡರ್‌ಗಳನ್ನೂ ಪೂರೈಕೆ ಮಾಡಲಾಗಿದೆ‌ ಎಂದಿದ್ದಾರೆ.

ಮೈಸೂರಿನಲ್ಲಿ ಮೇ 4ರ ವರಗೆ ಅಗತ್ಯ ಸೇವೆಗಳನ್ನ ಬಿಟ್ಟು ಉಳಿದೆಲ್ಲ ಅಂಗಡಿಗಳು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಮೇ 4ರ ವರಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಮೈಸೂರಿನ ಕಮರ್ಷಿಯಲ್ ಸ್ಟ್ರೀಟ್ ನ ಬಹುತೇಕ ಅಂಗಡಿಗಳನ್ನ ಬಂದ್ ಮಾಡಿಸಲಾಗಿದೆ. ಕೋಲಾರದಲ್ಲೂ ಅಂಗಡಿಗಳನ್ನ ಪೊಲೀಸರು ಲಾಕ್ ಮಾಡಿಸಿದ್ದಾರೆ. ಅಗತ್ಯ ವಸ್ತುಗಳ ಸೇವೆ ಮಾತ್ರ ಲಭ್ಯವಾಗಲಿದೆ. ಕೋಲಾರ ಹಾಗೂ ಮಾಲೂರಿನಲ್ಲಿ ಪೊಲೀಸರು ವರ್ತಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ನಗರಸಭೆ ಅಧಿಕಾರಿಗಳು ಅಂಗಡಿಗಳನ್ನು ಮುಚ್ಚುವಂತೆ ತಾಕೀತು ಮಾಡಿದ್ದಾರೆ.

ಕರೋನಾ ಪಾಸಿಟಿವ್ ನಿಂದ ಬಳಲುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ಸಿಗದೆ ಆಸ್ಪತ್ರೆ ಮುಂದೆ ನರಳಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ. ಚಿಂತಾಮಣಿಯ ಕೆಂಚಾರ್ಲಹಳ್ಳಿಯ ಸೋಂಕಿತನನ್ನ ಆಸ್ಪತ್ರೆಗೆ ಕರೆ ತಂದಾಗ ದಾಖಲಿಸಿಕೊಳ್ಳದೆ ಬೇಜಾವಾಬ್ದಾರಿ ಮೆರೆದಿದ್ದಾರೆ. ರಾತ್ರಿಯಲ್ಲ ಆಸ್ಪತ್ರೆ ಆವರಣದಲ್ಲೇ ಸೋಂಕಿತ ಕಾಲ ಕಳೆದಿದ್ದಾನೆ. ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಆರೋಗ್ಯ ಸಚಿವರ ತವರಲ್ಲೇ ಈ ರೀತಿಯಾದ್ರೆ, ಹೇಗೆ ಎಂದು ಜನ ಪ್ರಶ್ನಿಸಿದ್ದಾರೆ. ಚಿತ್ರದುರ್ಗದಲ್ಲಿ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ ಸಾಮೂಹಿಕ ಕೋವಿಡ್ ಲಸಿಕೆ ಹಾಕಿಸಲಾಗಿದೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗು ಆರೋಗ್ಯ ಇಲಾಖೆಯಿಂದ ಲಸಿಕಾ ಶಿಬಿರ ಆಯೋಜಿಸಿತ್ತು.

Previous articleಯುವ ಕಾಂಗ್ರೆಸ್​​​ನಲ್ಲಿ ಗದ್ದಲ; ನನಗೆ ರಕ್ಷಣೆ ಕೊಡಿ’ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ ಕೆ.ಆರ್​​ ದೂರು
Next articleಬಿಜೆಪಿ ಆಡಳಿತ ಒಂದು “ತುಘಲಕ್ ಆಡಳಿತ”; ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

LEAVE A REPLY

Please enter your comment!
Please enter your name here