Home District ಕೊರೊನಾ ಅಬ್ಬರದ ನಡುವೆ ಒಂದು ಪಾಸಿಟಿವ್ ಪ್ರಕರಣಗಳಿಲ್ಲದೆ ಸೇಫ್ ಆಗಿದೆ ಈ ಗ್ರಾಮ!

ಕೊರೊನಾ ಅಬ್ಬರದ ನಡುವೆ ಒಂದು ಪಾಸಿಟಿವ್ ಪ್ರಕರಣಗಳಿಲ್ಲದೆ ಸೇಫ್ ಆಗಿದೆ ಈ ಗ್ರಾಮ!

756
0

 ಕೊಡಗು : ಅದು ಪಾಸೀಟಿವ್ ರೇಟ್ನನಲ್ಲಿ ಮುಂಚುಣಿಯಲ್ಲಿ ಇರೋ ಜಿಲ್ಲೆ. ಆ ಒಂದು ಜಿಲ್ಲೆಯಲ್ಲಿ  ಪ್ರತಿನಿತ್ಯ ಐನೂರಕ್ಕೂ ಹೆಚ್ಚು ಪಾಸೀಟಿವ್ ಪ್ರಕರಣಗಳು ದಖಾಲಾಗುತ್ತಿದೆ. ಆದ್ರೆ ಅದೇ ಜಿಲ್ಲೆಯ ಒಂದು ಗ್ರಾಮ ಮಾತ್ರ ಯಾವುದೇ ಪಾಸೀಟಿವ್ ಪ್ರಕರಣಗಳಿಲ್ಲದೆ ಸೇಫ್ ಆಗಿದೆ. ಇಲ್ಲಿಯವರೆಗೆ ಒಂದೆ ಒಂದು ಕೇಸ್ ಕೂಡ ಈ ಗ್ರಾಮದಲ್ಲಿ ದಾಖಲಾಗಿಲ್ಲಾ. ಅರೆ ಇಷ್ಟೋಂದು ಸ್ಪೀಟ್ ಆಗಿ ಹಬ್ಬುತ್ತಿರುವ ಕೋವಿಡ್ ನಡುವೆ ಸೇಫ್ ಆಗಿರೋ ಗ್ರಾಮವಾದ್ರು ಯಾವುದು? ಪಾಸೀಟಿವ್ ಪ್ರಕರಣ ಬಾರದಿರಲು ಏನು ಆ ಸೀಕ್ರೇಟ್ಸ್ ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ‌.

ಕೊರೋನಾ ನಡುವೆ ಪಾಸಿಟೀವ್ ಪ್ರಕರಣಗಳಿಲ್ಲದ ಈ ಗ್ರಾಮ, ಒಂದೇ  ಒಂದು ಪಾಸಿಟಿವ್ ಪ್ರಕರಣಗಳಿಲ್ಲದೆ ಸೇಫ್ ಆಗಿದೆ , ಗ್ರಾಮದ ಸುರಕ್ಷತೆಗೆ ಟೊಂಕ‌ ಕಟ್ಟಿನಿಂತ ಪಂಚಾಯತ್ ಅಧಿಕಾರಿಗಳು. ಗ್ರಾಮ ಪಂಚಾಯತ್ ನ ಮುನ್ನೆಚ್ಚರಿಕೆಯಿಂದ ಸೇಫ್ ಆಗಿದೆ ಈ ಗ್ರಾಮ. ಎಸ್ ಹಿಗೋಂದು ದೃಶ್ಯ ಕಂಡು ಬಂದಿದ್ದು  ಬೇರೆ ಎಲ್ಲೂ ಅಲ್ಲ ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಹಾಕತ್ತೂರು ಗ್ರಾಮದ ತೊಬ್ಬಂತ್ತು ಮನೆ ಎಂಬ ಗ್ರಾಮದಲ್ಲಿ.

 ಈ ಗ್ರಾಮದ ಜನರು  ತಾವೇ ಲಾಕ್ ಡೌನ್ ವಿಧಿಸಿಕೊಂಡಿದ್ದಾರೆ. ಕಳೆದೊಂದು ವಾರದಿಂದ ಈ ಗ್ರಾಮಕ್ಕೆ ಯಾರೂ ಹೊರಗಿನವರು ಬರುವ ಹಾಗಿಲ್ಲ. ಈ ಗ್ರಾಮದವರೂ ಹೊರಗೆ ಹೋಗುವಂತಿಲ್ಲ. ಈ ಗ್ರಾಮದಲ್ಲಿ ಸುಮಾರು 100 ಕ್ಕೂ ಅಧೀಕ ಮನೆಗಳಿವೆ. ಎಲ್ಲಾ ಮನೆಗಳು ಹತ್ತಿರ ಹತ್ತಿರವೇ ಇದೆ. ಮತ್ತು ಬಹುತೇಕ ಮಂದಿ ಕೂಲಿ ಕೆಲಸ ಮಾಡುವವರೇ ಆಗಿದ್ದಾರೆ. ಎಲ್ಲಾದ್ರೂ ಕೊರೊನಾ ಬಂದ್ರೆ ತಮ್ಮ ಗ್ರಾಮದಕ್ಕೆ ಅದೋಗತಿಯಾಗುತ್ತೆ ಅನ್ನೋದನ್ನ ಅರಿತ ಇವರು ತಾವೇ ಟಾಸ್ಕ್ ಫೋರ್ಸ್ ರಚನೆ ಮಾಡಿ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.

ವಿಶೇಷ ಅಂದ್ರೆ ಇವರ ಈ ಲಾಕ್ ಡೌನ್ ನ ಪರಿಣಾಮವೋ ಏನೋ ಈ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ. ಅದೇ ಇವರ ಅಕ್ಕಪಕ್ಕದ ಗ್ರಾಮಗಳಲ್ಲಿ ಹಲವು ಕೊರೊನಾ ಕೇಸ್ ಗಳು ವರದಿಯಾಗಿದೆ. ಗ್ರಾಮದ ಪಿಡಿಒ, ಗ್ರಾಮ ಪಂಚಾಯಿತಿ ಸದಸ್ಯರುಗಳೇ ಈ ದಿಗ್ಬಂಧನದ ರೂವಾರಿಯಾಗಿದ್ದು  ಲಾಕ್ ಡೌನ್ ನನ್ನು  ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ಬಹುತೇಕ ಮಂದಿ ಕೂಲಿ ಕಾರ್ಮಿಕರೇ ಆಗಿರೊದರಿಂದ   ಎಲ್ಲರಿಗೂ ಬಿಪಿಎಲ್ ಕಾರ್ಡ್ ಇದೆ. ಹಾಗಾಗಿ ಇವರಿಗೆ ದುಡಿಮೆ ಇಲ್ಲಾಂದ್ರೂ ಇವರಿಗೆ ಪಡಿತರ ಸಾಮಾಗ್ರಿ ದೊರೆಯುತ್ತಿದೆ.  ಸರ್ಕಾರ ಲಾಠೀ ರುಚಿ, ದಂಡದ ಬಿಸಿ ತೋರಿಸಿದ್ದರು  ಜನರು ಅನಗತ್ಯ ಓಡಾಟ ಮಾತ್ರ ಬಿಡೋದಿಲ್ಲ. ಅಂತಹದರಲ್ಲಿ ಗ್ರಾಮ ಭದ್ರವಾಗಿದ್ದರೆ, ದೇಶ ಎನ್ನುವ ದೇಹದಿಂದ ತೊಂಬತ್ತು ಮನೆ ಗ್ರಾಮ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದೂ ಮಾತ್ರವಲ್ಲದೆ, ಕೊರೊನಾ ಕೂಡ ನುಸುಳಿಯದ ಹಾಗೇ ನೋಡಿಕೊಂಡಿರೋದು ಇದು ಎಲ್ಲರಿಗೂ ಮಾದರಿಯಾಗಿದೆ.

ಲೋಹಿತ್ ಎಂ.ಆರ್ ಪ್ರಜಾ ಟಿ.ವಿ ಕೊಡಗು

Previous articleಕೊರೋನಾ ಅಬ್ಬರದ ನಡುವೆ ರಾಮಜನ್ಮ ಭೂಮಿ ಅಯೋಧ್ಯೆಗೆ ಸೈಕಲ್ ಯಾತ್ರೆ!
Next articleಅನವಶ್ಯಕ ಓಡಾಟ; ಲಾಠಿ ರುಚಿ; ವಾಹನಗಳು ಜಪ್ತಿ!

LEAVE A REPLY

Please enter your comment!
Please enter your name here