Home Latest ಕೊರೊನಾ ಪಾಸಿಟೀವ್ ಪೇಷೆಂಟ್ ಗಳ ಪ್ಲಾಸ್ಮಾ ಗೂ ಫುಲ್  ಡಿಮಾಂಡ್…. ಅಂಗೈಯಲ್ಲೇ ಅರಮನೆ ಕಟ್ಟಲು ಮುಂದಾದ...

ಕೊರೊನಾ ಪಾಸಿಟೀವ್ ಪೇಷೆಂಟ್ ಗಳ ಪ್ಲಾಸ್ಮಾ ಗೂ ಫುಲ್  ಡಿಮಾಂಡ್…. ಅಂಗೈಯಲ್ಲೇ ಅರಮನೆ ಕಟ್ಟಲು ಮುಂದಾದ ಮೆಡಿಸನ್ ಕಂಪನಿಗಳು…?

628
0
SHARE

ನವದೆಹಲಿ. ಬಹುತೇಕ ಎಲ್ಲ ರಾಷ್ಟ್ರಗಳು ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಭಾರಿ ಪ್ರಯತ್ನ ಮಾಡುತ್ತಿದ್ದಾರೆ.ಸಂಶೋಧನೆಗಳೂ ನಡೆಯುತ್ತಿವೆ. ಕೊರೊನಾ ವೈರಸ್ ಗೆ ವ್ಯಾಕ್ಸೀನ್ ಕಂಡು ಹಿಡಿಯಲು ದೇಶ ದೇಶಗಳ ನಡುವೆ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಆದರೆ ಯಾವುದೂ ಇನ್ನೂ ಪೂರ್ಣ ಫಲ ನೀಡಿಲ್ಲ.ಎಲ್ಲ ಸಂಶೋಧನೆಗಳೂ ಸಹ ಕ್ಲೀನಿಕಲ್ ಟೆಸ್ಟ್ ಹಂತದಲ್ಲೇ ಇವೆ.ಈ ಮಧ್ಯೆ ಭಾರತೀಯ ಬಯೋ ಟೆಕ್ನಾಲಜಿ ಕಂಪನಿಯೊಂದರ ಪ್ರಾಡಕ್ಟ್ ನ್ನು ಕೊರೊನಾ ಸೋಂಕು ನಿವಾರಣೆಗೆ ಬಳಸಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಒಪ್ಪಿಗೆ ಕೊಟ್ಟಿದೆಯಂತೆ.ಕೊನೆಗೂ ಕೊರೊನಾ ವೈರಸ್ ಸೋಂಕಿಗೆ ವ್ಯಾಕ್ಸಿನೇಷನ್ ಸಿಕ್ಕಿದೆ.

ಹಾಗಂತ, ಭಾರತೀಯ ಬಯೋ ಟೆಕ್ನಾಲಜಿ ಸಂಸ್ಥೆಯೊಂದು ಹೇಳಿಕೊಂಡಿದೆ. ಹಾಗಂತ, ಈ ಲಸಿಕೆಯನ್ನು ಕೊರೊನಾ ವೈರಸ್ ಸೋಂಕು ನಿವಾರಣೆಗೆ ಕಂಡು ಹಿಡಿದಿದ್ದಲ್ಲ. ಚರ್ಮ ರೋಗ.. ಸೋರಿಯಾಸಿಸ್ ಬರುತ್ತದಲ್ಲ.. ಆ ರೋಗಗಕ್ಕೆ ಅಂತಾ ಬಳಕೆ ಮಾಡಲಾಗುತ್ತಿದ್ದ ಲಸಿಕೆಯನ್ನೇ ಈಗ ಕೊರೊನಾ ಸೋಂಕಿಗೂ ಬಳಕೆ ಮಾಡಬಹುದು. ಅಂತಾ ಬಯೋ ಟೆಕ್ನಾಲಜಿ ಸಂಸ್ಥೆ ಹೇಳಿಕೊಂಡಿದೆ. ಅಯ್ಯಯ್ಯಪ್ಪ ಸೋರಿಯಾಸಿಸ್ ಅನ್ನೋ ಭಯಾನಕ ಚರ್ಮ ರೋಗಕ್ಕೆ ಬಳಕೆ ಮಾಡುವ ಔಷಧ, ಇಂಜೆಕ್ಷನ್ ನ್ನು ಕೊರೊನಾ ಪೇಷೆಂಟ್ ಗಳಿಗೆ ಬಳಕೆ ಮಾಡೋದಾ.. ಇದರಿಂದ ಏನಾದರೂ ಹೆಚ್ಚು ಕಮ್ಮಿ ಆದರೆ, ಏನು ಗತಿ. ಈ ಇಂಜೆಕ್ಷನ್ ಗಳು, ಔಷಧಗಳು ಇವುಗಳ ಹಣೆ ಬರಹಾನೆ ಅಷ್ಟು.

ಯಾವುದೋ ಉದ್ದೇಶಕ್ಕೆ ಕಂಡುಹಿಡಿಯೋದು, ಇನ್ಯಾವುದೋ ಉದ್ದೇಶಕ್ಕೆ ಬಳಕೆ ಮಾಡೋದು. ಮಾರ್ಚ್ ಕೊನೆ ವಾರದಲ್ಲಿ ಆಗ, ಮಲೇರಿಯಾ ಸಾಂಕ್ರಾಮಿಕ ರೋಗಗಕ್ಕ ಬಳಕೆ ಮಾಡಲಾಗುತ್ತಿದ್ದ ಮಾತ್ರೆಯನ್ನೇ ಕೊರೊನಾ ವೈರಸ್ ಸೋಂಕಿಗೂ ಕೊಡಬಹುದು ಅಂತ ತಜ್ಞರು ಹೇಳಿ ಬಿಟ್ಟಿದ್ದರು. ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಂಡರೆ ಕೊರೊನಾ ಸೋಂಕು ಗುಣವಾಗುತ್ತದೆ ಎಂದು ನಂಬಲಾಗಿತ್ತು. ಭಾರತ ಬಿಟ್ಟರೆ ವಿಶ್ವದ ಯಾವುದೇ ರಾಷ್ಟ್ರದಲ್ಲಿ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳನ್ನು ಉತ್ಪಾದಿಸಲಾಗುತ್ತಿರಲಿಲ್ಲ. ಕೊನೆಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಧಮ್ಕಿ ಹಾಕಿ ಸುಮಾರು 35,82 ಲಕ್ಷ ಮಾತ್ರೆಗಳನ್ನು  ತರಿಸಿಕೊಂಡರು. ತಾವೂ ಕೂಡ ಪ್ರತಿ ದಿನ ಹೈಡ್ರಾಕ್ಸಿ ಕ್ಲೋರೋ ಕ್ವಿನ್ ಮಾತ್ರೆಗಳನ್ನು ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

ಈಗ ನೋಡಿ ಅದೇ ತಜ್ಞರು ಹೇಳುತ್ತಿದ್ದಾರೆ.ಯಾವುದೇ ಕಾರಣಕ್ಕು ಕೊರೊನಾ ಸೋಂಕಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಯಾವುದೋ ಕಾಯಿಲೆಗೆ ಇನ್ನಾವುದೋ ಮಾತ್ರೆ ಔಷಧ ಸೇವನೆ ಮಾಡಿದ್ರೆ, ಅಪಾಯ. ಸೈಡ್ ಎಫೆಕ್ಟ್ ಗಳೇ ಹೆಚ್ಚು. ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳ ಸೇವನೆಯಿಂದ ಹೃದ್ರೋಗ ಕಾಣಿಸಿಕೊಳ್ಳುತ್ತದೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎನ್ನುತ್ತಿದ್ದಾರೆ. ಇದುವರೆಗೆ ಆ ಮಾತ್ರೆಗಳನ್ನು ತೆಗೆದುಕೊಂಡ ಡೋನಾಲ್ಡ್ ಟ್ರಂಪ್ ಸೇರಿದಂತೆ ಅಮೇರಿಕಾ  ನಾಗರೀಕರ ಗತಿ ಏನಾಗಿರಬೇಕು. ಈಗ ನಿಜವಾಗಲೂ ಹಾರ್ಟ್ ಅಟ್ಯಾಕ್ ಆಗುವ ಸರದಿ ಅಮೇರಿಕನ್ನರದ್ದು.

ಈಗ ಬೆಂಗಳೂರು ಮೂಲದ ಬಯೋಕಾನ್ ಲಿಮಿಟೆಡ್ ಸಂಸ್ಥೆ ತಯಾರು ಮಾಡಿರುವ ಇಟೋಲಿಜಮ್ಯಾಬ್ ಅನ್ನೋ ಇಂಜೆಕ್ಷನ್ನು ಕೊರೊನ ಸೋಂಕಿತರಿಗೆ ಕೊಡಬಹುದು ಅಂತಾ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅಪ್ರೂವ್ ನೀಡಿದೆಯಂತೆ. ಈ ಇಟೋಲಿ ಜಮ್ಯಾಬ್ ಇಂಜೆಕ್ಷನ್ನು ಸೋರಿಯಾಸಿಸ್ ರೋಗಿಗಳಿಗೆ ಕೊಡಲಾಗುತ್ತಿತ್ತು. ಈ ಇಂಜೆಕ್ಷನನ್ನು ಅಲ್ಬುಮ್ಯಾಬ್ ಅಂತಲೂ ಕರೆಯುತ್ತಾರೆ. ಅಂದ ಹಾಗೆ ಈ ಇಂಜೆಕ್ಷನ್ ನ್ನು 120 ದಿನಗಳ ಕಾಲ ದೇಶದ ನಾಲ್ಕು ಪ್ರಮುಖ ಕೇಂದ್ರಗಳಲ್ಲಿ ಪ್ರಯೋಗ ಮಾಡಲಾಗಿದೆಯಂತೆ. ಸುಮಾರು 100ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ಇಂಜೆಕ್ಷನ್ ಕೊಡಲಾಗಿದೆ.ಇಂಜೆಕ್ಷನ್ ಪಡೆದವರು ಇದರಿಂದ ಗುಣಮುಖರಾಗಿದ್ದಾರೆ ಅಂತಾ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂಮ್ದಾರ್ ಷಾ ಹೇಳಿಕೊಂಡಿದ್ದಾರೆ.

ಅಂದ ಹಾಗೆ, ಈ ಇಟೋಲಿ ಜಮ್ಯಾಬ್  ಇಂಜೆಕ್ಷನ್ ಕೊಡಬಹುದು ಅಂತಾ, ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಾಗಲಿ, ವಿಶ್ವಸಂಸ್ಥೆಯ who ಆಗಲಿ ಒಪ್ಪಿಕೊಂಡಿಲ್ಲ. ಕೇವಲ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆಯಂತೆ.ಹಾಗಂತ ಕಿರಣ್ ಮಂಜುಮ್ದಾರ್ ಷಾ ಹೇಳಿಕೊಂಡಿದ್ದಾರೆ. ಆದರೆ, ಡಿಜಿಸಿಐ ಆಗಲೇ, ಐಎಂಎ ಆಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇಟೋಲಿ ಜಮ್ಯಾಬ್ ನಿಂದ ಕೊರೊನಾ ವೈರಸ್ ಸೋಂಕು ಗುಣವಾಗುತ್ತದೆ ಎಂದು ಅವರು ಯಾರು ಅಧಿಕೃತವಾಗಿ ಒಪ್ಪಿಕೊಂಡೇ ಇಲ್ಲ.

ಹೋಗಲಿ,  ಇಟೋಲಿ ಜಮ್ಯಾಬ್ ಇಂಜೆಕ್ಷನ್ ತೆಗೆದುಕೊಂಡರೆ, ಕೊರೊನಾ ವೈರಸ್ ಸೋಂಕು ಗುಣವಾಗುತ್ತದಲ್ಲಾ ಅಂತಾ ಜನ ಸಾಮಾನ್ಯರು ಔಷಧದ ಅಂಗಡಿಗಳಿಗೆ ಮುಗಿಬಿದ್ದಾರು. ಆದ್ರೆ ಇಂಜೆಕ್ಷನ್ ರೇಟ್ ಎಷ್ಟು ಗೊತ್ತಾ. ಒಂದು ಇಂಜೆಕ್ಷನ್ ಗೆ 7950 ರೂಪಾಯಿ ಆಗುತ್ತದೆ. ಕೊರೊನಾ ವೈರಸ್ ಸೋಂಕು ಪೂರ್ಣ ಗುಣವಾಗಬೇಕಾದರೆ, ಪ್ರತಿಯೊಬ್ಬ ಸೋಂಕಿತನೂ ತಲಾ 25 ಮಿಲಿ ಗ್ರಾಂನ ಅಥವಾ ಐದು ಮಿಲೀ ಲೀಟರ್ ನ ಕನಿಷ್ಟ 4 ಇಂಜೆಕ್ಷನ್ ಪಡೆಯಬೇಕಂತೆ. ಅಂದರೆ, ನಾಲ್ಕು ಇಂಜೆಕ್ಷನ್ ಗೆ 32,000 ರೂಪಾಯಿ ಆಯ್ತು.ಅಲ್ಲಾ.. ಒಂದು ಹೊತ್ತಿನ ಊಟಕ್ಕೂ ಜನ ಪರದಾಡುತ್ತಿರುವ ಸಂದರ್ಭದಲ್ಲಿ 4 ಇಂಜೆಕ್ಷನ್ ಗೆ 32 ಸಾವಿರ ರೂಪಾಯಿ ಕೊಡಬೇಕು ಅಂದ್ರೆ ಜನ ದುಡ್ಡು ಎಲ್ಲಿಂದ ತಂದಾರು.

ಅಂದ ಹಾಗೆ ಈ ಚುಚ್ಚು ಮದ್ದನ್ನು ಎ ಸಿಂಪ್ಟಮ್ಯಾಟಿಕ್ ಪೇಷೆಂಟ್ ಗಳಿಗೆಲ್ಲಾ ಕೊಡಬೇಕಾದ ಅಗತ್ಯವಿಲ್ಲ. ಯಾರಿಗೆ ತುರ್ತು ಉಂಟಾಗಿರುತ್ತದೆ. ಐಸಿಯು ನಲ್ಲಿ ವೆಂಟಿಲೇಟರ್ ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುತ್ತಾರೋ ಅವರಿಗೆ ಮಾತ್ರ ಕೊಡಬೇಕಂತೆ. ಆಕ್ಸಿಜನ್ ಸಪೋರ್ಟ್ ಮೇಲಿರುವ ರೋಗಿಗಳಿಗೆ ಈ ಇಂಜೆಕ್ಷನ್ ಕೊಡ್ತಾ ಇದ್ದಂತೆಯೇ, ಮರು ದಿನದಿಂದ ಅವರು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತಾರಂತೆ. ಇದುವರೆಗೆ ಈ ಇಂಜೆಕ್ಷನ್ ತೆಗೆದುಕೊಂಡಿರುವ 100ಕ್ಕೆ ನೂರೂ ಸೋಂಕಿತರು ಕೇವಲ ಎರಡು ವಾರಗಳಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರಂತೆ.

ಕೊರೊನಾ ವೈರಸ್ ಗಳದ್ದು ವಿಲಕ್ಷಣವಾದ ಮತ್ತೊಂದು ಪ್ರವೃತ್ತಿ ಇದೆ. ಒಮ್ಮೆ ವ್ಯಕ್ತಿಯ ದೇಹ ಪ್ರವೇಶಿಸಿ 12 ದಿನಗಳಾದ ಬಳಿಕ ಇದೇ ಕೊರೊನಾ ವೈರಸ್ ಗಳು, ವ್ಯಕ್ತಿಯ ದೇಹದಲ್ಲಿ ಆಂಟಿ ಬಾಡಿಗಳಾಗಿ ಪರಿವರ್ತನೆಯಾಗುತ್ತವಂತೆ. ಬಿಳಿಯ ರಕ್ತ ಕಣಗಳು ಹಾಗೂ ಪ್ಲೇಟ್ ಲೆಟ್ ಗಳ ಜತೆ ಸೇರಿಕೊಂಡು, ಹೊರಗಿನಿಂದ ಪ್ರವೇಶಿಸುವ ಅನ್ಯ ವೈರಸ್ ಗಳ ವಿರುದ್ದ ಹೋರಾಡುತ್ತವಂತೆ. ಹಾಗಾಗಿಯೇ ಕೊರೊನಾ ಸೋಂಕು ಬಂದು ನಂತರ ಗುಣಮುಖರಾದ ವ್ಯಕ್ತಿಯ ದೇಹದಿಂದ ರಕ್ತದ ಪ್ಲಾಸ್ಮಾವನ್ನು ಪಡೆದುಕೊಂಡು, ಸೋಂಕಿತರಿಗೆ ಪೂರಣ ಮಾಡುವ ಚಿಕಿತ್ಸಾ ವಿಧಾನವೊಂದನ್ನು ರೂಢಿಸಲಾಗಿದೆ. ಈ ಚಿಕಿತ್ಸಾ ವಿಧಾನವನ್ನು ಪ್ಲಾಸ್ಮಾ ಥೆರಪಿ ಎನ್ನುತ್ತಾರೆ. ಅಮೇರಿಕಾದ ಗ್ಲೋಬಲ್ ಫಾರ್ಮಾಸೂಟಿಕಲ್ ಕಂಪನಿ ಮೊದಲಿಗೆ ಈ ಪ್ಲಾಸ್ಮಾ ಥೆರಪಿ ವಿಧಾನವನ್ನು ಜಗತ್ತಿಗೆ ಪರಿಚಯಿಸಿತು. ಭಾರತದಲ್ಲೂ ಕೇರಳದಲ್ಲಿ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಮಾಡಲಾಗಿತ್ತು. ಆರಂಭದಲ್ಲಿ ಪ್ಲಾಸ್ಮಾ ಥೆರಪಿ ವಿಫಲವಾಗಿತ್ತು. ಆದರೆ, ಗ್ಲೋಬಲ್ ಫಾರ್ಮಾಸೂಟಿಕಲ್ ಕಂಪನಿ, ಪ್ಲಾಸ್ಮಾ ಥೆರಪಿಯನ್ನು TKK-888 ಹೆಸರಿನಲ್ಲಿ ರೀ ಇಂಟ್ರಡ್ಯೂಸ್ ಮಾಡಿದೆ.ಎರಡನೆ ಬಾರಿಗೆ TKK-888 ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆಯಂತೆ.

ಹಿಂದೆ ಡೆಂಘಿ ರೋಗಗಕ್ಕೂ ಇದೇ ಪ್ಲಾಸ್ಮಾ ಚಿಕಿತ್ಸೆ ಅಥವಾ ಪ್ಲೇಟ್ ಲೆಟ್ ಗಳ ಚಿಕಿತ್ಸೆಯನ್ನೇ ಮಾಡಲಾಗುತ್ತಿತ್ತು. ರಕ್ತದಲ್ಲಿ ಪ್ಲೇಟ್ ಲೆಟ್ ಗಳ ಕೊರತೆಯಾಗುವುದರಿಂದ ಮಾರಕ ಡೆಂಘಿ  ಹರಡುತ್ತಿತ್ತು. ಡಿಂಘಿ ಸೋಂಕಿತರ ಸಾವಿನ ಪ್ರಮಾಣವೂ ಹೆಚ್ಚಿತ್ತು. ಹಾಗಾಗಿ ಆಗ ಪಪ್ಪಾಯಿ ಎಲೆಯ ರಸ ಕುಡಿಸುವ ಮೂಲಕ ರಕ್ತದಲ್ಲಿ ಪ್ಲೇಟ್ ಲೆಟ್ ಗಳ ಸಂಖ್ಯೆಯ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಅದು ನಿಶ್ಚಿತವಾದ ಫಲ ನೀಡಲಿಲ್ಲ ಎಂದರೆ, ದಾನಿಗಳ ರಕ್ತದಿಂದ ಪ್ಲೇಟ್ ಲೆಟ್ ಗಳನ್ನು ಬೇರ್ಪಡಿಸಿ ತಂದು ಸೋಂಕಿತರಿಗೆ ಪೂರಣ ಮಾಡಲಾಗುತ್ತಿತ್ತು. ಪ್ಲೇಟ್ ಲೆಟ್ ಗಳ ಪೂರಣ ಚಿಕಿತ್ಸೆ ಹಂಡ್ರೆಡ್ ಪರ್ಸೆಂಟ್ ಯಶಸ್ವಿಯಾಗಿತ್ತು. ಈಗ ಪ್ಲಾಸ್ಮಾ ಚಿಕಿತ್ಸೆ ಕೆಲವು ಕಡೆಗಳಲ್ಲಿ ಯಶಸ್ವಿಯಾದರೆ, ಇನ್ನು ಕೆಲವು ಕಡೆಗಳಲ್ಲಿ ಪೂರಣ ಯಶಸ್ವಿಯಾಗಿಲ್ಲ. ರಾಜಧಾನಿ ದೆಹಲಿಯಲ್ಲೇ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿಲ್ಲ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ಪ್ಲಾಸ್ಮಾ ಥೆರಪಿಗೆ ಭಾರಿ ಡಿಮಾಂಡ್ ಬಂದು ಬಿಟ್ಟಿದೆ. ರಕ್ತಕ್ಕೆ ಪ್ಲಾಸ್ಮಾ ಪೂರಣ ಮಾಡಿಸಿಕೊಂಡರೆ, ಕೊರೊನಾ ಸೋಂಕು ಒಂದು ವಾರದಲ್ಲೇ ಗುಣವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಕೊರೊನಾ ಸೋಂಕು ಬಂದು, ಈಗ ಗುಣವಾಗಿರುವರನ್ನು, ಕೊರೊನಾ ಸೋಂಕಿತರ ಸಂಬಂಧಿಕರು, ವೈದ್ಯರು ಹುಡುಕಾಡುತ್ತಿದ್ದಾರೆ. ಈ ಮೊದಲು ಅಂಗಾಂಗ ದಾನಕ್ಕೆ ಇದೇ ರೀತಿಯ ಡಿಮಾಂಡ್ ಇತ್ತು. ಅದರಲ್ಲೂ ರೇರ್ ಬ್ಲಡ್ ಗ್ರೂಪ್ ಹೊಂದಿರುವ ಎಬಿ ನೆಗೇಟಿವ್, ಓ ನೆಗೆಟೀವ್ ಬ್ಲಡ್ ಗ್ರೂಪಿನ ದಾನಿಗಳಿಗೆ ಈಗ ಭಾರಿ ಡಿಮಾಂಡ್. ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ನೆಗೆಟೀವ್ ಬ್ಲೆ ಡ್ ಗ್ರೂಪ್ ಹಿಂದಿರುವವರಿಗೆ 250 ಎಂಎಲ್  ರಕ್ತಕ್ಕೆ 60,000 ರೂಪಾಯಿ ವರೆಗೆ ಆಫರ್ ಮಾಡ್ತಾ ಇದ್ದಾರೆ. ಹೈದ್ರಾಬಾದಿನ ವ್ಯಕ್ತಿಯೊಬ್ಬರಂತೂ, ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ದಾನಿಯೊಬ್ಬರನ್ನು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೈದ್ರಾಬಾದ್ ಗೆ ಕರೆದುಕೊಂಡು ಹೋಗಿ, ಅವರಿಗೆ ಪಂಚತಾರಾ ಹೊಟೇಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ, ಅವರಿಂದ ರಕ್ತ ದಾನ ಪಡೆದು, ಕೈ ತುಂಬಾ ಹಣಕೊಟ್ಟು ಕಳಿಸಿದ್ರಂತೆ.

ಅಂದ ಹಾಗೆ ಇದು ಅಧಿಕೃತ ವ್ಯವಹಾರವಂತೂ ಅಲ್ಲ, ಸುಪ್ರೀಮ್ ಕೋರ್ಟ್ ಆದೇಶದ ಪ್ರಕಾರ, ದೇಹದ ಅಂಗಾಂಗಗಳು ಮತ್ತು ರಕ್ತ ಮಾರಾಟಕ್ಕೆ ಅವಕಾಶವಿಲ್ಲ. ಎರಡೂ ಕಡೆಯವರ ಸಮ್ಮತಿಯ ನಂತರ ದಾನ ಮಾಡಲು ಮಾತ್ರ ಅವಕಾಶವಿದೆ. ಹಿಂದೆಲ್ಲಾ, ರಕ್ತ ಮಾರಾಟ ಮಾಡುವ ಬಹು ದೊಡ್ಡ ದಂಧೆಯೇ ನಡೆಯುತ್ತಿತ್ತು. ಖಾಸಗಿ ಬ್ಲಡ್ ಬ್ಯಾಂಕ್ ಗಳಿಗೆ ಹೋಗಿ ರಕ್ತ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಜೀವನ ಮಾಡುವವರು ಎಷ್ಟೋ ಮಂದಿ ಇದ್ದರು. ಆದರೆ, ಏಡ್ಸ್ ಮಹಾಮಾರಿ ಭಾರತಕ್ಕೆ ಕಾಲಿಟ್ಟ ನಂತರ, ರಕ್ತ ಮಾರಾಟ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲಾಯ್ತು. ಖಾಸಗಿ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತ ಖರೀಧಿ ಮಾಡುವುದು ಕಂಡು ಬಂದರೆ, ಅವರ ಮೇಲೆಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಸುಪ್ರಿಂಕೋರ್ಟ್ ಎಚ್ಚರಿಕೆ ನೀಡಿತ್ತು. ಸುಪ್ರಿಂ ಕೋರ್ಟ್ ಎಚ್ಚರಿಕೆಯ ನಂತರ, ರಕ್ತ, ಮತ್ತು ಕಿಡ್ನಿ ಮತ್ತಿತರ ಅಂಗಾಗಳ ಮಾರಾಟ ದಂಧೆಗೆ ಸಂಪೂರ್ಣ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಪ್ಲಾಸ್ಮಾ ಚಿಕಿತ್ಸೆಯ ಹೆಸರಲ್ಲಿ ರಕ್ತ ಮಾರಾಟ ದಂಧೆ ಪರೋಕ್ಷವಾಗಿ ವಕ್ಕರಿಸುತ್ತಿದೆ.

ಯೋಚನೆ ಮಾಡಿ, ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ, ಕೇವಲ ಕೊರೊನಾ ಸೋಂಕು ಒಂದೇ ಇದ್ದರೆ, ಪರವಾಗಿಲ್ಲ. ಒಂದು ವೇಳೆ ಅವರಲ್ಲಿ ಬ್ಲಡ್ ಕ್ಯಾನ್ಸರ್, ಏಡ್ಸ್ ನಂತಹಾ ಭೀಕರ ಕಾಯಿಲೆಗಳೇನಾದರೂ ಇದ್ದರೆ, ಖಾಸಗಿ ಆಸ್ಪತ್ರೆಗಳವರು ಧನ ದಾಹಕ್ಕೆ, ಅಕಸ್ಮಾತ್, ಯಾವುದೇ ಚಕಪ್ ಮಾಡದೆ, ಖರೀಧಿ ಮಾಡಿದ ರಕ್ತ ಅಥವಾ ಪ್ಲಾಸ್ಮಾವನ್ನು , ಕೊರೊನಾ ಸೋಂಕಿತರಿಗೇನಾದರು ಪೂರಣ ಮಾಡಿದ್ರೆ, ಅಲ್ಲಿಗೆ ಮುಗಿದೇ ಹೋಯ್ತು. ಕೊರೊನಾ ಸೋಂಕಿನಿಂದ ಗುಣಮುಖವಾಗುತ್ತಾರೆ. ಆದರೆ, ಬೇರೆ ಬೇರೆ ಕಾಯಿಲೆಗಳು ಅಟಕಾಯಿಸಿಕೊಳ್ಳುತ್ತವೆ. ಜೀವನ ಪೂರ್ತಿ ಹೆಣಗಬೇಕಾಗುತ್ತದೆ. ಹಾಗಾಗಿ ಪ್ಲಾಸ್ಮಾ ಚಿಕಿತ್ಸೆಯೂ ಅಷ್ಟು ಸೇಫ್ ಅಲ್ಲ ಅಂತಾ ತಜ್ಞರೇ ಅಭಿಪ್ರಾಯಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here