Home KARNATAKA ರಾಜ್ಯದಲ್ಲೇ ಮೊದಲ ಬಾರಿಗೆ ಮನೆ ಮನೆಗೆ ತೆರಳಿ ಕೊರೊನಾ ಸರ್ವೇ ಕಾರ್ಯಕ್ಕೆ ಎಸ್.ಆರ್ ವಿಶ್ವನಾಥ್ ಚಾಲನೆ

ರಾಜ್ಯದಲ್ಲೇ ಮೊದಲ ಬಾರಿಗೆ ಮನೆ ಮನೆಗೆ ತೆರಳಿ ಕೊರೊನಾ ಸರ್ವೇ ಕಾರ್ಯಕ್ಕೆ ಎಸ್.ಆರ್ ವಿಶ್ವನಾಥ್ ಚಾಲನೆ

598
0
SHARE

ಬೆಂಗಳೂರು. ರಾಜ್ಯದಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರಕ್ಕೆ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದಿಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಇನ್ನೂ ಹಲವಾರು ಜನ ಕೋವಿಡ್ ಪರೀಕ್ಷೆಗೆ ಒಳಗಾಗದೇ ಮನೆಯಲ್ಲೆ ಇದ್ದಾರೆ. ಅಂತವರನ್ನ ಪತ್ತೆಹಚ್ಚುವ ಕೆಲಸಕ್ಕೆ ಇದೀಗ ಯಲಹಂಕ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್‌ಆರ್ ವಿಶ್ವನಾಥ್ ಮುಂದಾಗಿದ್ದಾರೆ.

ಅಂದಹಾಗೆ ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ಮನೆಮನೆಗೆ ತೆರಳಿ ಕೊರೊನಾ ಸೋಂಕಿತರನ್ನ ಪತ್ತೆಹಚ್ಚುವ ಕೆಲಸಕ್ಕೆ ಇಂದು ಯಲಹಂಕದಲ್ಲಿ ಶಾಸಕರು ಚಾಲನೆ ನೀಡಿದ್ದಾರೆ. ಮುಖ್ಯವಾಗಿ “ನಾನು, ನನ್ನ ಮನೆ, ನಮ್ಮ ಬೂತ್” ಹೆಸರಿನಡಿ ಸರ್ವೆ ಕಾರ್ಯ ಇಂದಿನಿಂದ ರಾಜನುಕುಂಟೆಯಿಂದ ಆರಂಭವಾಗಿದ್ದು, ಬೂತ್ ಮಟ್ಟದಲ್ಲಿ ಪ್ರತಿ ತಂಡದ ೧೫ ಮಂದಿ ಸದಸ್ಯರು ಪ್ರತಿಯೊಂದು ಕುಟುಂಬಗಳನ್ನು ಸಂಪರ್ಕಿಸಿ ಆರೋಗ್ಯ ಮಾಹಿತಿ ಸಂಗ್ರಹಿಸಲಿದ್ದಾರೆ.

ಕೊರೋನ ಸೋಂಕಿತರನ್ನ ಪತ್ತೆಹಚ್ಚಲು ರಾಜ್ಯದಲ್ಲೇ ಮೊದಲ ಬಾರಿಗೆ ಯಲಹಂಕ ಕ್ಷೇತ್ರದಲ್ಲಿ ಮನೆಮನೆ ಸರ್ವೆ ನಡೆಸಲಾಗುತ್ತಿದ್ದು, ಸಮುದಾಯ ಮಟ್ಟಕ್ಕೆ ಕೊರೊನಾ ಹಬ್ಬಿದ್ದರೇ ಇದರ ನಿಯಂತ್ರಣ ಮಾಡಲು ಸ್ವಯಂ ಸೇವಕರನ್ನ ಬಳಸಿಕೊಂಡು ಯಲಹಂಕ ತಹಶಿಲ್ದಾರ ರಘುಮೂರ್ತಿ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಇಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂದಹಾಗೆ ಮೂರ್ನಾಲ್ಕು ದಿನಗಳಲ್ಲಿ ಯಲಹಂಕ ವಿಧಾನ ಸಭಾ ಕ್ಷೇತ್ರದ ಪ್ರತಿಯಿಂದು ಮೆನೆಯಲ್ಲೂ ಈ ಸರ್ವೆ ಕಾರ್ಯ ನಡೆಯಲಿದ್ದು, ಕೊರೊನಾ ಸೋಂಕಿತರನ್ನ ಪತ್ತೆ ಹಚ್ಚಲು ಸರ್ವೆ ತಂಡದಲ್ಲಿ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಇನ್ನಿತರ ಉಪಕರಣಗಳಿಂದ ಪ್ರತಿಯೊಬ್ಬರ ಆರೋಗ್ಯವನ್ನ ತಪಾಸಣೆ ಮಾಡಲಾಗುತ್ತದೆ.

ಈ ವೇಳೆ ಯಾರಿಗಾದ್ರು ಜ್ವರ ಕೆಮ್ಮು, ನೆಗಡಿ, ಸೇರಿದಂತೆ ಇನ್ನಿತರ ಕೊರೊನಾ ಲಕ್ಷಣಗಳು ಕಂಡು ಬಂದ್ರೆ ಅಂತವರನ್ನ ಕೋವಿಡ್ ಪರೀಕ್ಷೆ ಮಾಡಿಸಿ ನಿಯಂತ್ರಣ ತರುವ ಉದ್ದೇಶದಿಂದ ಶಾಸಕ ಎಸ್ ಆರ್ ವಿಶ್ವನಾಥ್ ರಾಜ್ಯದಕ್ಕೆ ಮೊದಲ ಪ್ರಯೋಗ ತಮ್ಮ ಕ್ಷೇತ್ರದಲ್ಲಿ ಮಾಡಿಸುತ್ತಿದ್ದಾರೆ. ಇದು ಸಕ್ಸಸ್ ಆದ್ರೆ ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ಪ್ರಯೋಗ ಮಾಡಲು ಪ್ಲಾನ್ ರೂಪಿಸಲಾಗಿದೆ.

LEAVE A REPLY

Please enter your comment!
Please enter your name here