Home NATIONAL ಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಹಾವಳಿ; ತತ್ತರಿಸಿದ ಜನಸಾಗರ

ಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಹಾವಳಿ; ತತ್ತರಿಸಿದ ಜನಸಾಗರ

ಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಹಾವಳಿ; ತತ್ತರಿಸಿದ ಜನಸಾಗರ

273
0

ದೇಶಾದ್ಯಂತ ಕೊರೊನಾ ಎರಡನೆ ಅಲೆ ತೀವ್ರವಾಗಿ ಏರುತ್ತಲೇ ಇದೆ. ಮೊದಲನೆ ಅಲೆ ಕಾಣಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಂಡು ಸ್ಯಾನಿಟೈಸೇಷನ್, ವಿದೇಶಿ ಪ್ರಯಾಣಿಕರ ಸ್ಕ್ರೀನಿಂಗ್ ನಂತರ ಲಾಕ್ ಡೌನ್ ನಂತಹಾ ಕ್ರಮ ಕೈಗೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈಗ 2ನೆ ಅಲೆಯ ಸಂದರ್ಭದಲ್ಲಿ ಮಾತ್ರ ಭಾರಿ ನಿರ್ಲಕ್ಷ್ಯ ತೋರಿಸುತ್ತಿವೆ.

ದೇಶದಲ್ಲಿ ಕೊರೊನಾ ಅಲೆ ತೀವ್ರವಾಗಿ ಏರಿಕೆಯಾಗಲು ಕಾರಣವೇನು.ಯಾರ ನಿರ್ಲಕ್ಷದಿಂದಾಗಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ತಪ್ಪು ಮಾಡಿದವರು ಇಲ್ಲಿ ಯಾರು ಜನಪ್ರತಿನಿಧಿಗಳು-ಸರ್ಕಾರಗಳೋ ಅಥವಾ ಜನ ಸಾಮಾನ್ಯರೋ..ಹೊಣೆ ಯಾರು ?… ಈ ಪ್ರಶ್ನೆಗಳಿಗೆ ಇಲ್ಲಿದೆ ಸಂಪೂರ್ಣ ಉತ್ತರ

ಕೊರೊನಾ ವೈರಸ್ ಸೋಂಕಿನ 2ನೆ ಅಲೆ ದೇಶಾದ್ಯಂತ ವ್ಯಾಪಕವಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಹೆಚ್ಚು ಮತ್ತೆ ಕೆಲವು ರಾಜ್ಯಗಳಲ್ಲಿ ಕಡಿಮೆ ಇರಬಹುದು. ಈ ರೀತಿ ಸೋಂಕು ನಿರೀಕ್ಷೆಗೂ ಮೀರಿ ಹೆಚ್ಚಾಗೋದಕ್ಕೆ ನಮ್ಮ ಜನಪ್ರತಿನಿಧಿಗಳೇ ಕಾರಣ, ಚುನಾವಣೆಗಳ ನೆಪದಲ್ಲಿ ನಾಯಕರು ಅನಿಸಿಕೊಂಡವರೇ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು ಸೋಂಕು ಹೆಚ್ಚಳಕ್ಕೆ ಕಾರಣವಾಯ್ತು.

ಯಥಾ ರಾಜಾ ತಥಾ ಪ್ರಜಾ ಎನ್ನುತ್ತಾರೆ. ಭಾರತದಲ್ಲೂ ಪರಿಸ್ಥಿತಿ ಹಾಗೆ ಆಗಿದೆ.ಯಾವಾಗ ನಮ್ಮನ್ನಾಳುವವರು, ಜನಪ್ರತಿನಿಧಿಗಳು ಅನ್ನಿಸಿಕೊಂಡವರೇ, ಕೊರೊನಾ ಸೋಂಕಿನ ಆತಂಕವನ್ನು ಮರೆತು, ಯಾವುದೇ ನಿಯಮಾವಳಿಯನ್ನೂ ಅನುಸರಿಸದೇ, ಸಾವಿರಾರು ಸಂಖ್ಯೆಯ ಕಾರ್ಯಕರ್ತರ ದಂಡು ಕಟ್ಟಿಕೊಂಡು ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದಲೇ ಭಾರತದಲ್ಲಿ ಸ್ಪೀಡೀ ಕೊರೊನಾ ಮತ್ತಷ್ಟು ಸ್ಪೀಡಾಗಿ ಹರಡುವಂತಾಗಿದೆ. ನಮ್ಮ ನಾಯಕರ ನಡವಳಿಕೆ ಜಾಗತಿಕ ಮಟ್ಟದಲ್ಲೂ ನಗೆಪಾಟಲಿಗೆ ಈಡಾಗಿದೆ.

ಭಾರತದಲ್ಲಿ ಕೊರೊನಾ 2ನೆ ಅಲೆ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗೋದಕ್ಕೆ ಪಂಚ ರಾಜ್ಯಗಳ ಚುನಾವಣೆಯೂ ಪ್ರಮುಖ ಕಾರಣವಾಗಿದೆ. ಐದೂ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ನೆಪದಲ್ಲಿ ನಮ್ಮ ರಾಜಕೀಯ ಪಕ್ಷಗಳ ಮುಖಂಡರು ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆಂದು ವಿವಿಧ ರಾಜ್ಯಗಳಿಂದ ಅಲ್ಲಿಗೆ ಹೋಗಿದ್ದ ಕಾರ್ಯಕರ್ತರೂ ಸಹ ಕೊರೊನಾ ವಾಹಕರ ಪಾತ್ರವನ್ನು ಯಶಸ್ವಿಯಾಗಿಯೇ ನಿಬಾಯಿಸಿದ್ದಾರೆ.

ಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ. ಚುನಾವಣಾ ಪ್ರಚಾರಕ್ಕೆ ಹೋಗಿದ್ದ ವಿವಿಧ ರಾಜಕೀಯ ಪ ಕ್ಷಗಳ ಕಾರ್ಯಕರ್ತರು ಮತ್ತು ಪ್ರಮುಖರೂ ಸಹ ಕೊರೊನಾ ವಾಹಕರ ಪಾತ್ರವನ್ನು ಯಶಸ್ವಿಯಾಗಿಯೇ ನಿಬಾಯಿಸಿದ್ದಾರೆ.ಪಂಚರಾಜ್ಯಗಳಲ್ಲಿ ಕೊರೊನಾ ಸೋಂಕು ಹಬ್ಬಿಸುವಲ್ಲಿ ಹಾಗೂ ಪಂಚರಾಜ್ಯಗಳಿಂದ ಸೋಂಕು ದೇಶದ ವಿವಿಧ ಭಾಗಗಳಲ್ಲಿ ಹರಡುವಲ್ಲಿ ಈ ಕಾರ್ಯಕರ್ತರ ಪಾತ್ರವೂ ಬಹಳ ಹಿರಿದಾದುದು

ಲಾಕ್ ಡೌನ್ ಈಗ ಯಾರಿಗೂ ಬೇಕಾಗಿಲ್ಲ.ಕೊರೊನಾ ಬಗ್ಗೆ ಜನರಿಗೆ ಈಗ ಭಯವೂ ಇಲ್ಲ, ಆತಂಕವೂ ಇಲ್ಲ. ಜನಪ್ರತಿನಿಧಿಗಳಿಗೂ ಕೊರೊನಾ ಬಗ್ಗೆ ಭಯವಿಲ್ಲ, ಜನ ಸಾಮಾನ್ಯರಿಗೂ ಇಲ್ಲ, ಯಥಾ ರಾಜಾ ತಥಾ ಪ್ರಜಾ ಅನ್ನೋದು ಸಾಬೀತಾಗುತ್ತಿದೆ.ಯಾರು ಕೇರ್ ಮಾಡ್ತಾರೋ ಬಿಡ್ತಾರೋ..ನಾವು ನೀವು ಮಾತ್ರ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೆಯದಲ್ಲವೇ.

VIAಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಹಾವಳಿ; ತತ್ತರಿಸಿದ ಜನಸಾಗರ
SOURCEಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಹಾವಳಿ; ತತ್ತರಿಸಿದ ಜನಸಾಗರ
Previous articleವಿರಸ ಬಿಟ್ಟು ಸಾಮರಸ್ಯದಿಂದ ಮುನ್ನಡೆಯೋಣ; ಸಾರಿಗೆ ನೌಕರರಿಗೆ ಮನವಿ ಮಾಡಿದ ನಟ ಯಶ್
Next articleಕೊರೊನಾ ಹಿನ್ನಲೆ; ಜನರ ಜೀವದ ಬಗ್ಗೆ ಬಿಜೆಪಿ ನಾಯಕರಿಗೆ ಸ್ವಲ್ಪವೂ ಕಾಳಜಿ ಇಲ್ಲ; ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

LEAVE A REPLY

Please enter your comment!
Please enter your name here