Home Home ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ; ಆಶಾ ಕಾರ್ಯಕರ್ತೆಯರಿಂದ ಮನೆ ಮನೆಯ ಸಮೀಕ್ಷೆ

ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ; ಆಶಾ ಕಾರ್ಯಕರ್ತೆಯರಿಂದ ಮನೆ ಮನೆಯ ಸಮೀಕ್ಷೆ

Corona which is out of control in the district | ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ

292
0
SHARE

ರಾಯಚೂರು ಬ್ರೇಕಿಂಗ್; ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಈಗಾಗಲೇ 31-05-2021 ರಿಂದ 04-06-2021 ರ ವರೆಗೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆಯನ್ನು ನಡೆಸಿ ಈ ಸಮೀಕ್ಷೆಯಲ್ಲಿ SARI, ILI, ಜ್ವರದ ಜೊತೆಗೆ ತಲೆನೋವು ಮತ್ತು ಬೇದಿ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರಿಗೆ ಜಿಲ್ಲಾಡಾಳಿತದಿಂದ ಔಷಧಿ ಕಿಟ್ ನ್ನು ವಿತರಿಸಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿರುತ್ತದೆ.

ಮೊದಲನೇ ಸುತ್ತಿನ ಸಮೀಕ್ಷೆಯಲ್ಲಿ 4,37,999 ಮನೆಗಳಿಗೆ ಮತ್ತು 21,16,399 ಜನರಿಗೆ ಬೇಟಿ ನೀಡಲಾಗಿದ್ದು ಇವರಲ್ಲಿ ಒಟ್ಟು ಜ್ವರದ ಜೊತೆಗೆ ತಲೆನೋವು ಕಂಡುಬಂದಿದ್ದು 479, ಬೇದಿ ಪ್ರಕರಣಗಳು 142, ILI ಪ್ರಕರಣಗಳು 2453 ಮತ್ತು SARI ಪ್ರಕರಣಗಳು 78 ಕಂಡುಬಂದಿರುತ್ತವೆ. ಒಟ್ಟು 2549 ಔಷಧಿ ಕಿಟ್ ಗಳನ್ನು ಈ ಪ್ರಕರಣಗಳಿಗೆ ವಿತರಿಸಲಾಗಿದೆ.

ಮುಂದುವರೆದು, ಇದೇ ರೀತಿಯಾಗಿ ದಿನಾಂಕ: 07-06-2021 ರಿಂದ 10-06-2021 ರ ವರೆಗೆ 2 ನೇ ಸುತ್ತಿನ ಮತ್ತು 14-06-2021 ರಿಂದ 17-06-2021ರ ವರೆಗೆ 3 ನೇ ಸುತ್ತಿನ ಮನೆ ಮನೆ ಸಮೀಕ್ಷೆಯನ್ನು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಕೈಗೊಳ್ಳಲು ನಿರ್ಧರಿಸಲಾಗಿರುತ್ತದೆ. ಆದ್ದರಿಂದ ಈಗಾಗಲೇ ಮೊದಲನೆ ಸುತ್ತಿನ ಸಮೀಕ್ಷೆಗೆ ಸಹಕರಿಸಿದಂತೆ 2 ನೇ ಸುತ್ತಿನ ಮತ್ತು 3 ನೇ ಸುತ್ತಿನ ಸಮೀಕ್ಷೆಗೆ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here