Home Health ಕೊರೊನಾ ಭೀತಿ ಹಿನ್ನೆಲೆ : ಜಿಲ್ಲಾದ್ಯಾಂತ ವಾರದಲ್ಲಿ ಎರಡು ದಿನ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶ

ಕೊರೊನಾ ಭೀತಿ ಹಿನ್ನೆಲೆ : ಜಿಲ್ಲಾದ್ಯಾಂತ ವಾರದಲ್ಲಿ ಎರಡು ದಿನ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶ

543
0

ಕೊಡಗು : ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದ್ದು ಜಿಲ್ಲಾದ್ಯಾಂತ  ಟಫ್ ರೂಲ್ಸ್ ಜಾರಿಯಾದ ಕಾರಣದಿಂದ   ವಾರದಲ್ಲಿ ಎರಡು ದಿನ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಸ್ತುಗಳ ಖರೀದಿಗೆ ಜನಜಂಗುಳಿ ಹೆಚ್ಚಾಗಿದ್ದವು. ತರಕಾರಿ‌ ಹಾಗೂ ಅಗತ್ಯವಸ್ತುಗಳ ಖರೀದಿಯ ಭರಾಟೆಯಲ್ಲಿ ಸಾಮಾಜಿಕ ಅಂತರ ಕಾಪಾಡದೆ, ಕೆಲವರು ಮಾಸ್ಕ್ ಹಾಕದೆ, ಅಂಗಡಿಯಲ್ಲಿ ಅಂತರ ಕಾಯ್ದುಕೊಳ್ಳದೆ, ಇದ್ದ  ಕಾರಣದಿಂದ  ಸ್ಥಳದಲ್ಲಿಯೇ ಅಂಗಡಿ ಮಾಲೀಕನಿಗೆ  ಪೊಲೀಸರು ದಂಡವಿಸಿದ್ದರು,  ಇನ್ನು ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಗೊಂಡ ಮಾರ್ಕೆಟ್ ಗೆ ಜನಜಂಗುಳಿ ಹೆಚ್ಚಾಗಿದ್ದವು, ಅಗತ್ಯ ವಸ್ತುಗಳ ಖರೀದಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ನಗರಕ್ಕೆ ಸಾಕಷ್ಟು ವಾಹನ ದಂಡೆ ಬಂದಿತ್ತು . ಇನ್ನೂ ಸಾಮಾಜಿಕ  ಅಂತರ ಕಾಪಾಡುವಂತೆ ಪೋಲಿಸರು ಎಷ್ಟೇ ಹೇಳಿದರು ತಲೆ ಕೆಡಿಸಿಕೊಳ್ಳದ ಜನರಿಂದ ಬೇಸರ ಉಂಟಾಗಿದ್ದು ,ಹೀಗಾಗಿ ಕೊರೋನ ತಡೆಯಲು ವಾರದಲ್ಲಿ ಎರಡು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

Previous articleಬೆಂಗಳೂರು ನಗರವನ್ನು ಲಾಕ್ ಡೌನ್ ಮಾಡಿ; ಬೆಂಗಳೂರು ನಗರ ಆಯುಕ್ತ ಗೌರವ್ ಗುಪ್ತಾ ಪಟ್ಟು
Next articleಉಡುಪಿಯಲ್ಲಿ ತಪ್ಪಿದ ಕೊರೋನಾ ಕಂಟ್ರೋಲ್ !

LEAVE A REPLY

Please enter your comment!
Please enter your name here