Home Crime “ನಿಷ್ಕರುಣಿ ಕೊರೊನಾಗೆ ಇನ್ನೆಷ್ಟು ಬಲಿಗಳೋ…ಮಹಾಮಾರಿಯ ರಣಕೇಕೆಗೆ ಉಸಿರು ಚೆಲ್ಲುತ್ತಿರುವ ಪ್ರಾಣಗಳು ಅದೆಷ್ಟೋ..”

“ನಿಷ್ಕರುಣಿ ಕೊರೊನಾಗೆ ಇನ್ನೆಷ್ಟು ಬಲಿಗಳೋ…ಮಹಾಮಾರಿಯ ರಣಕೇಕೆಗೆ ಉಸಿರು ಚೆಲ್ಲುತ್ತಿರುವ ಪ್ರಾಣಗಳು ಅದೆಷ್ಟೋ..”

409
0

ವರದಿ: ಥಾಮಸ್ ಪುಷ್ಪರಾಜ್,

ಉಸಿರುಗಟ್ಟಿ ಕಣ್ಣೆದುರೇ ಮಡದಿ ಮಗುವಿನ ಮುಂದೆ ಪ್ರಾಣಬಿಟ್ಟ ಪತ್ರಕರ್ತ, ಆಸ್ಪತ್ರೆಯ ಅಮಾನವೀಯತೆಗೆ ಅಂಬುಲೆ ನ್ಸ್ ನಲ್ಲಿಯೆ ಗಂಡನನ್ನು ಕಳಕೊಂಡ ಪತ್ನಿ..ನಮ್ಮನ್ನು ಉಳಿಸಿ..ಉಳಿಸಿ ಎಂದು ಪ್ರಾಣಭಿಕ್ಷೆ ಬೇಡುತ್ತಲೇ ಉಸಿರು ಚೆಲ್ಲಿದ ಜೀವ ಗಳು.. ಪಶುಗಳಿಗಿಂತ ತುಚ್ಛವಾಗಿ ವ್ಯವಹರಿಸ್ತಿರೋ ಆಸ್ಪತ್ರೆ ವಿರುದ್ಧ ಸೋಂಕಿತರ ಪ್ರತಿಭಟನೆ..ಹೀಗೆ ಒಂದಾ ಎರಡಾ.. ಮಹಾಮಾರಿ ಕೊರೊನಾ ರಾಜಧಾನಿ ಬೆಂಗಳೂರಲ್ಲಿ  ಸೃಷ್ಟಿಸಿರೋ  ಆರ್ತನಾದದ ಮನಕಲಕುವ  ಸನ್ನಿವೇಶಗಳು.

ಹೌದು..ನಿಷ್ಕರುಣಿ ಕೊರೊನಾಕ್ಕೆ ಮನುಕುಲ ಅಕ್ಷರಶಃ ತತ್ತರಿಸಿದೆ.ಜಗತ್ತನ್ನು ಇಷ್ಟೊಂದು ಭೀಕರವಾಗಿ ತಲ್ಲಣಿಸಿದ ಮತ್ತೊಂದು ಮಹಾಮಾರಿ ಇನ್ನೊಂದಿರಲಿಕ್ಕಿಲ್ಲವೇನೋ..ಸರ್ಕಾರ ಹಾಗೂ ವೈದ್ಯಜಗತ್ತು ಏನೆಲ್ಲಾ ಪ್ರಯತ್ನ ನಡೆಸಿದ್ರೂ ಕೊರೊನಾ ಮುಂದೆ ಎಲ್ಲಾ ಪ್ರಯತ್ನಗಳು ನಿಷ್ಪಲವಾಗ್ತಿವೆ.ಕಳೆದ ಕೆಲ ದಿನಗಳಿಂದಲೂ ರಾಜಧಾನಿ ಬೆಂಗಳೂರು ಇಂತಹ ಅದೆಷ್ಟೋ ಮನಕಲಕುವ ಘಟನೆಗಳಿಗೆ ಸಾಕ್ಷಿಯಾಗಿದೆ.ಇಂದು ಕೂಡ ಇಂಥಾ ನಾನಾ ಘಟನೆಗಳು ಪ್ರಜಾದ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಮಡದಿ-ಮಗು ಎದುರೇ ಪ್ರಾಣ ಚೆಲ್ಲಿದ ಪತ್ರಕರ್ತ: ನಿಜಕ್ಕು ಇದೊಂದು ಮನಕಲುವ ಘಟನೆಯೇ ಸರಿ.ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲ್ತಿದ್ದರು ಕಮಲಾನಗರ ಮೂಲದ ಪತ್ರಕರ್ತ ವೇಣು.ಜ್ವರ ಎಂದು ನೆಗ್ಲೆಕ್ಟ್ ಮಾಡಿದ ವೇಣುಗೆ ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.ಆಸ್ಪತ್ರೆಗಳಿಗೆ ಕರೆ ಮಾಡಿದ್ರೆ ಬೆಡ್ಡೂ ಇಲ್ಲ..ಆಕ್ಸಿಜನ್ನೂ ಸಿಕ್ಕಿಲ್ಲ.ರಾತ್ರಿಯೆಲ್ಲಾ ನರಳಾಡಿದ್ದಾರೆ.ಹೆಂಡ್ತಿಗೂ ಕೈಕಾಲಾಡಿಲ್ಲ.ನೋಡ ನೋಡುತ್ತಿದ್ದಂತೆ ಹೆಂಡ್ತಿ-ಮಗುವಿನ ಮುಂದೆಯೇ ಉಸಿರು ಚೆಲ್ಲಿದ್ದಾರೆ.

‘ಅಂಬುಲೆನ್ಸ್ ನಲ್ಲಿ ಉಸಿರು ಚೆಲ್ಲಿದ ಪತಿ’..ಕೊವಿಡ್ ಸನ್ನಿವೇಶದಲ್ಲಿ ಸೋಂಕಿತರಿಗೆ ಹೆಚ್ಚು ಹತ್ತಿರವಾಗ್ಬೇಕಿದ್ದ ಆಸ್ಪತ್ರೆಗಳು ಬಲಿಪೀಠಗಳಾಗುತ್ತಿರುವುದು ದುರಾದೃಷ್ಟಕರ. ದಿನ ನಿತ್ಯ ವರದಿಯಾಗ್ತಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿ.ಶಿವಾಜಿನಗರದ ಚರಕ ಆಸ್ಪತ್ರೆ ಮುಂದೆ ಬೆಡ್ ಗಾಗಿ ಅಂಗಲಾಚಿದ್ರೂ ಮಹಿಳೆಯ ಪತಿಗೆ ಸ್ಪಂದನೆ ಸಿಕ್ಕಿಲ್ಲ.ಅಂಬುಲೆನ್ಸ್ ನಲ್ಲೇ ನರಳಾಡುತ್ತಿರುವ ಪತಿಯನ್ನಿಟ್ಟುಕೊಂಡು ಮಹಿಳೆ ಸಹಾಯಕ್ಕಾಗಿ ಪರಿತಪಿ ಸಿದ್ದಾಳೆ.ಆಸ್ಪತ್ರೆ ನೆರವಿಗೆ ಬಂದೇ ಇಲ್ಲ.ಕಣ್ಣೀರಿಡುವಾಗ್ಲೇ  ಆಕೆಯ ಪತಿ ಕೊನೆಯಿಸಿರೆಳೆದಿದ್ದಾರೆ.

‘ತಾಯಿಯಿಂದ ಮಗನನ್ನು ಬೇರ್ಪಡಿಸಿದ ಆಸ್ಪತ್ರೆ’..ಇದು ಕೆಂಗೇರಿ ಸಮೀಪದ ರಾಜರಾಜೇಶ್ವರಿ ಆಸ್ಪತ್ರೆಯ ಕ್ರೂರ ಮುಖ.ಅಮ್ಮನನ್ನು ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ಸೇರಿಸಿದ ಮಗ ದಿನದ 24 ಗಂಟೆ ಆಕೆಯ ಹೆಲ್ತ್ ಬುಲೆಟಿನ್ ಗೆ ಅಂಗಲಾಚಿದ್ದಾನೆ.ಆದ್ರೆ ಏನನ್ನೂ ಹೇಳದ ವೈದ್ಯರು ಬೆಳಗ್ಗೆ ಬಂದು ವಿ ಆರ್ ಸ್ಸಾರಿ ಎಂದ್ಹೇಳಿದ್ದಾರೆ.ಅಮ್ಮನನ್ನು ಆಸ್ಪತ್ರೆಯವ್ರೇ ಕೊಂದ್ರು ಎಂದು ಮಗ ಕಣ್ಣೀರಿಟ್ರೆ,ತಮ್ಮವರನ್ನು ಆಸ್ಪತ್ರೆಗೆ ಸೇರಿಸಿದ ಅದೆಷ್ಟೋ ಸಂಬಂಧಿಗಳು ಸೂಕ್ತ ಚಿಕಿತ್ಸೆ ನೀಡದೆ ಅಲೆದಾಡಿಸುತ್ತಿರುವ ವೈದ್ಯರ ಸಹವಾಸನೇ ಬೇಡ.ನಮ್ಮವರನ್ನು ಡಿಸ್ಚಾರ್ಜ್ ಮಾಡಿ ನಾವು ಕರ್ಕೊಂಡು ಹೋಗ್ತೇವೆ ಎಂದು ಪಟ್ಟು ಹಿಡಿದಿದ್ರು.

ನೆಲದ ಮೇಲೆ ಚಿಕಿತ್ಸೆ-ಆಸ್ಪತ್ರೆ ವಿರುದ್ಧ ಸೋಂಕಿತರ ಪ್ರತಿಭಟನೆ:

ಅದೇಕೋ ರಾಜಧಾನಿ ಬೆಂಗಳೂರು ಸಾವಿನ ಮನೆಯಾಗುತ್ತಿದೆಯಾ..ಪರಿಣಿತಿ ಇರುವ ವೈದ್ಯರು ಕೈ ಚೆಲ್ಲುತ್ತಿದ್ದಾರಾ.? ಆಸ್ಪತ್ರೆ ಗಳು ಕೊವಿಡ್ ವಿಷಯದಲ್ಲಿ ಮಾನವೀಯತೆ  ತೋರೋದ್ ಬಿಟ್ಟು ಲೂಟಿಗೆ ಇಳಿದಿವೆಯಾ ಎನಿಸ್ತದೆ.ಏಕೆಂದ್ರೆ ರಾಜಾಜಿನಗರದ ಇಎಸ್ ಐ ಆಸ್ಪತ್ರೆ ಸೇರಿದಂತೆ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಗಳಿಲ್ಲದೆ ನೆಲದ ಮೇಲೆ ಟ್ರೀಟ್ಮೆಂಟ್ ಕೊಡಲಾಗ್ತಿದೆ.ಕಿಮ್ಸ್ ಆಸ್ಪತ್ರೆ ಯಲ್ಲಿ ಸೋಂಕಿತರನ್ನು ವಿಚಾರಿಸೋರೆ ಇಲ್ಲವಾಗಿದೆ.ಈ ಕಾರಣಕ್ಕೆ ಪ್ರಾಣ ಉಳಿಸೊಕ್ಕೆ ಟ್ರೀಟ್ಮೆಂಟ್ ಕೊಡಿ ಎಂದು ಸೋಂಕಿತರು ಪ್ರತಿಭಟನೆ ನಡೆಸಿದ್ರು.

ಇವು ಇಂದು ಕಂಡುಬಂದ ಕೆಲ ಸನ್ನಿವೇಶಗಳು ಅಷ್ಟೇ.ಕೊರೊನಾ ಸೃಷ್ಟಿಸಿರುವ ತಲ್ಲಣಗಳು ಎಂಥಾ ಗುಂಡಿಗೆಯನ್ನು ಅದುರಿಸಿಬಿ ಡ್ತಿದೆ.ಸರ್ಕಾರ ಹಾಗೂ ಆಸ್ಪತ್ರೆ ಕೇವಲ ಜನ ಎಚ್ಚೆತ್ತುಕೊಳ್ತಿಲ್ಲ ಎಂಬ ನೆವ ಹೇಳಿ  ಸುಮ್ಮನಾಗುತ್ತಿವೆ.ಆದ್ರೆ ನಿಜಕ್ಕೂ ಕಾರಣ ಅದೇನಾ..?ಸರ್ಕಾರವೇ ಕೈ ಚೆಲ್ಲಿ ಕೂರುವ ಮಾತನ್ನಾಡುತ್ತಿರುವಾಗ ಜನ ಯಾರನ್ನು ನಂಬಬೇಕು..ಯಾರ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಳ್ಳಬೇಕೋ ಗೊತ್ತಾಗ್ತಿಲ್ಲ.

Previous articleಅಟ್ಟಹಾಸ ಮೆರೆದ ಜವರಾಯ; ಚಾಲಕನ ಅಜಾಗರುಕತೆಯಿಂದ ಐವರು ಮಸಣಕ್ಕೆ ರವಾನೆ!
Next articleನೈಟ್ ಕರ್ಫೂ ಹಿನ್ನಲೆ; ಅನಗತ್ಯವಾಗಿ ರಸ್ತೆಗಿಳಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು!

LEAVE A REPLY

Please enter your comment!
Please enter your name here