ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಗೆ ಕರೆತರಲು ನಿರ್ಧಾರ

ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಗೆ ಕರೆತರಲು ನಿರ್ಧಾರ

552
0

ವರದಿ: ನಾ.ಅಶ್ವತ್ಥ್ ಕುಮಾರ್

ಚಾಮರಾಜನಗರ: ಜಿಲ್ಲಾದ್ಯಂತ ಕೋವಿಡ್ ಸೊಂಕಿತರು ಹೋಂ ಐಸೋಲೇಷನ್ ಇಲ್ಲಿದ್ದವರನ್ನು ಪತ್ತೆ ಹಚ್ಚಿ ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ಕರೆತರಲು ಜಿಲ್ಲಾ ಕೋವಿಡ್ ಟಾಸ್ಕ್ ಪೋರ್ಸ್ ನಿರ್ಧಾರ ಕೈ ಗೊಂಡಿದೆ.ಚಾಮರಾಜನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆ ಸಭೆಯ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲಾದ್ಯಂತ ಈಗಾಗಲೇ ಇರುವ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಒಟ್ಟು 2006 ಹಾಸಿಗೆ ಸಾಮರ್ಥ್ಯವಿದೆ ಆದರೆ, ಕೇವಲ 400 ಮಂದಿಯಷ್ಟೇ ಇದ್ದು, ಹೋಂ ಐಸೋಲೇಷನ್ ನಲ್ಲಿ 3,842 ಸೋಂಕಿತರಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ನಗರ ಪ್ರದೇಶವೂ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹೋಂ ಐಸೋಲೇಷನ್ ನಲ್ಲಿರಲು ಸೂಕ್ತ ವ್ಯವಸ್ಥೆ ಇಲ್ಲ. ಹೋಂ ಐಸೋಲೇಷನ್ನಲ್ಲಿರುವವರಿಂದಲೇ ಸೋಂಕು ಹೆಚ್ಚಾಗುತ್ತಿರುವುದರಿಂದ, ಸೌಲಭ್ಯ ಇಲ್ಲದಿದ್ದರೂ ಹೋಂ ಐಸೋಲೇಷನ್ ಆಗಿರುವವರ ಪತ್ತೆಗೆ ತಹಶೀಲ್ದಾರ್, ಟಿಎಚ್ಒ ಸೇರಿದಂತೆ ತಂಡ ರಚಿಸಲಾಗಿದ್ದು, ಇನ್ನೆರೆಡು ದಿನಗಳಲ್ಲಿ ಸಮೀಕ್ಷೆ ನಡೆಸಿ ಅವೈಜ್ಞಾನಿಕವಾಗಿ ಹೋಂ ಐಸೋಲೇಷನ್ನಲ್ಲಿ ಇರುವವರನ್ನು ಕೇರ್ ಸೆಂಟರಿಗೆ ದಾಖಲಿಸಲಾಗುತ್ತದೆ ಎಂದು ವಿವರಿಸಿದರು.ಗ್ರಾಮೀಣ ಭಾಗದಲ್ಲಿನ ಸೋಂಕು ತಡೆಗಟ್ಟಲು ಹೆಚ್ಚು ಕ್ರಮ ಮತ್ತು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ‘ಕೊರೊನಾ ಮುಕ್ತ ಗ್ರಾಮ’ ಎಂಬ ಆಂದೋಲನವನ್ನು ದೊಡ್ಡ ಮಟ್ಟದಲ್ಲಿ ಮಾಡಲು ತಯಾರಿ ನಡೆದಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರಿಗೆ ಸೇರಿಸುವುದು ಸೇರಿ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸುವ ಗ್ರಾಪಂ ಪಿಡಿಒ, ಸದಸ್ಯರು ಆಂದೋಲನದ ಭಾಗವಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಇನ್ನು, ಸೋಂಕಿತರ ಮನೆಗಳಿಗೆ ಭೇಟಿಗೆ ತೆರಳುವ ಆಶಾ ಕಾರ್ಯಕರ್ತೆಯರನ್ನು ಬೈಯ್ಯುವುದು, ಹೀಯಾಳಿಸುವುದು ಮಾಡುತ್ತಿರುವುದು ಕಂಡು ಬಂದಿರುವುದರಿಂದ ಆಶಾ ಕಾರ್ಯಕರ್ತರೊಂದಿಗೆ ಹೋಂ ಕ್ವಾರೈಂಟನ್ ಗೆ ಪೊಲೀಸ್ ಕಾನ್ಸ್ಟೇಬಲ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಸುದ್ದಿ ಘೋಷ್ಟಿಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಹಾಜರಿದ್ದರು.

VIAಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಗೆ ಕರೆತರಲು ನಿರ್ಧಾರ
SOURCEಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಗೆ ಕರೆತರಲು ನಿರ್ಧಾರ
Previous articleಗ್ರಾಮೀಣ ಭಾಗದ ಕೊರೋನಾ ಸೋಂಕು ತಡೆಯಲು ಮುಂದಾದ ಸರ್ಕಾರ
Next articleಕೋವಿಡ್ ಆಸ್ಪತ್ರೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ!

LEAVE A REPLY

Please enter your comment!
Please enter your name here