Home Latest ಅವಾಚ್ಯ ಶಬ್ದಗಳಿಂದ ಬೈದು ತುಮಕೂರಿನಲ್ಲಿ ಇಬ್ಬರು ಜನಪ್ರತಿನಿಧಿಗಳ ಬೀದಿ ರಂಪಾಟ !

ಅವಾಚ್ಯ ಶಬ್ದಗಳಿಂದ ಬೈದು ತುಮಕೂರಿನಲ್ಲಿ ಇಬ್ಬರು ಜನಪ್ರತಿನಿಧಿಗಳ ಬೀದಿ ರಂಪಾಟ !

ಅವಾಚ್ಯ ಶಬ್ದಗಳಿಂದ ಬೈದು ತುಮಕೂರಿನಲ್ಲಿ ಇಬ್ಬರು ಜನಪ್ರತಿನಿಧಿಗಳ ಬೀದಿ ರಂಪಾಟ !

251
0

ವರದಿ; ಯಶವಂತ್, ತುಮಕೂರು

ತುಮಕೂರಿನಲ್ಲಿ ಇಬ್ಬರು ಜನಪ್ರತಿನಿಧಿಗಳು ಬೀದಿ ರಂಪಾಟ ನಡೆಸಿಕೊಂಡಿದ್ದಾರೆ.ಬಿಜೆಪಿ ಹಿರಿಯ ಸಂಸದ ಜಿ.ಎಸ್ ಬಸವರಾಜು ಹಾಗೂ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ನಡುವೆ ಮಾತಿನ ಚಕಮಕಿ ನಡೆದಿದ್ದು,ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿತ್ತು..ಅವರಿಬ್ಬರ ಮಧ್ಯೆ ನಡೆದ ಗಲಾಟೆಯ ಫುಲ್ ಡಿಟೈಲ್ಸ್ ಇಲ್ಲಿದೆ

ನಿನ್ ಯೋಗ್ಯತೆಗಷ್ಟು ಬೆಂಕಿ ಹಾಕು,ಸುಳ್ಳು ಯಾಕೆ ಬೊಗಳುತ್ತೀಯ,,ರೈತರಿಗೆ ಸುಳ್ಳು ಹೇಳ್ತಿಯ,ವಯಸ್ಸಾಗಿದೆ ಈಗ್ಲಾದ್ರೂ ಸುಳ್ಳು ಹೇಳೋದುನ್ನ ನಿಲ್ಲಿಸು..ಅಬ್ಬಬ್ಬಾ ಇದು ಬೇರ್ಯಾರೋ ಆಡಿದ ಮಾತುಗಳಲ್ಲಾ,,ಸ್ವತಃ ಜನರಿಂದ ಜನರಿಗಾಗಿ,ಜನರಿಗೋಸ್ಕರ ಆಯ್ಕೆಯಾದ ಶಾಸಕರೇ,ಸಂಸದರೇ ಹೀಗೆ ಹಿಗ್ಗಾಮುಗ್ಗಾ ಬೈದಾಡಿಕೊಂಡಿದ್ದಾರೆ..

ವಾ/ಓ.02: ಹೌದು,ಗುಬ್ಬಿ ತಾಲ್ಲೂಕಿನ ನಂದಿಹಳ್ಳಿಯಲ್ಲಿ ವಿದ್ಯುತ್ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಈ ಇಬ್ಬರೂ ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ.ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಜಾಲಗುಣಿ ಭಾಗದಲ್ಲಿ ಬೃಹತ್ ಅಣೆಕಟ್ಟೆ ನಿರ್ಮಾಣ ಮಾಡುವ ಕುರಿತು ಸಂಸದ ಜಿ.ಎಸ್‌ ಬಸವರಾಜ್ ಮಾತನಾಡುತ್ತಿದ್ದರು.ಈ ಅಣೆಕಟ್ಟೆ ಮೂಲಕ ತುಮಕೂರು ಜಿಲ್ಲೆ ಹಾಗೂ ಕೋಲಾರ ಜಿಲ್ಲೆಗೆ ಹೆಚ್ಚಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದಾಗಿ ಹಾಗೂ ಇದಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ 1 ಎಕರೆಗೆ 1 ಕೋಟಿ ರೂ. ಪರಿಹಾರ ಸಿಗುವ ಸಾಧ್ಯತೆಗಳ ಬಗ್ಗೆ ಸಂಸದರು ತಿಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಸ್. ಆರ್ ಶ್ರೀನಿವಾಸ್, ರೈತರನ್ನು ಹಾದಿ ತಪ್ಪಿಸುವ ಕೆಲಸ ಮಾಡಬೇಡಿ, ಈಗಾಗಲೇ ರೈಲ್ವೆ ಹಳಿಗೆ ಭೂಮಿ ಕೊಟ್ಟ ರೈತರಿಗೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಈಗ ಎಲ್ಲಿಂದ ಹಣ ಕೊಡುತ್ತೀರಿ, ರೈತರನ್ನು ಒಕ್ಕಲೆಬ್ಬಿಸುವಂತ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು..

ಬೈಟ್_ಶ್ರೀನಿವಾಸ್, ಗುಬ್ಬಿ ಶಾಸಕ

ವಾ/ಓ.03: ಈ ವೇಳೆ ಸಾರ್ವಜನಿಕರ ಎದುರೇ ಈ ಇಬ್ಬರೂ ಪರಸ್ಪರ ಏಕವಚನದಲ್ಲಿ ಹಾಗೂ ವೈಯಕ್ತಿಕ ನಿಂದನೆಗಳನ್ನು ಮಾಡಿಕೊಂಡಿದ್ದಾರೆ..ನೀನು ಅಯೊಗ್ಯ ನನ್ಮಗ ಅಂತಾ ಜಿಎಸ್ ಬಸವರಾಜು ಕಿಡಿಕಾರಿದ್ರೇ,ನಿಮ್ ತಾತ 550 ಕೋಟಿ ತಂದಿದ್ನಾ ಅಂತಾ ಶ್ರೀನಿವಾಸ್ ವಾಪಸ್ ಗುಡುಗಿದ್ರು.ಸದ್ಯ ಈ ಘಟನೆ ಎರಡೂ ಪಕ್ಷದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದು,ಇಷ್ಟು ದಿನಗಳ ಕಾಲ ಮಾಧ್ಯಮಗಳ ಮೂಲಕ ಪರಸ್ಪರ ಬೈದಾಡಿಕೊಳ್ತಿದ್ದ ರಾಜಕೀಯ ಬದ್ದ ವೈರಿಗಳು,ಇದೀಗ ಬೀದಿ ರಂಪಾಟ ನಡೆಸಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ..
ಯಶಸ್.ಕೆ.ಪದ್ಮನಾಭ್,,ಪ್ರಜಾ ಟಿವಿ,,ತುಮಕೂರು..

VIAಅವಾಚ್ಯ ಶಬ್ದಗಳಿಂದ ಬೈದು ತುಮಕೂರಿನಲ್ಲಿ ಇಬ್ಬರು ಜನಪ್ರತಿನಿಧಿಗಳ ಬೀದಿ ರಂಪಾಟ !
SOURCEಅವಾಚ್ಯ ಶಬ್ದಗಳಿಂದ ಬೈದು ತುಮಕೂರಿನಲ್ಲಿ ಇಬ್ಬರು ಜನಪ್ರತಿನಿಧಿಗಳ ಬೀದಿ ರಂಪಾಟ !
Previous article3ಪಾತ್ರಧಾರಿಗಳು, 1ಸೂತ್ರಧಾರನ ಸುತ್ತ ಅನುಮಾನದ ಹುತ್ತ; ಸತೀಶ್ ರೆಡ್ಡಿ
Next articleಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟ ಸಿ.ಟಿ.ರವಿ; ವಿಡಿಯೋ ವೈರಲ್

LEAVE A REPLY

Please enter your comment!
Please enter your name here