Home District ಸರ್ಕಾರ v/s ಸಾರಿಗೆ ನೌಕರರ ನಡುವಿನ‌ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕವಾಗಿ ಬ್ರೇಕ್!

ಸರ್ಕಾರ v/s ಸಾರಿಗೆ ನೌಕರರ ನಡುವಿನ‌ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕವಾಗಿ ಬ್ರೇಕ್!

418
0

14 ದಿನಗಳ ಕಾಲ‌ ನಡೆದ ಸಾರಿಗೆ ಮುಷ್ಕರದಿಂದ ನಾಲ್ಕೂ ನಿಗಮಗಳಿಗೆ ನಷ್ಟದ ಹೊಡೆತ ಬಿದ್ದಿದೆ. ಬರೊಬ್ಬರಿ 287 ಕೋಟಿ ನಷ್ಟದ ಸುಳಿಗೆ ಸಿಲುಕಿದ ಸಾರಿಗೆ ನಿಗಮಗಳಿಂದ ಮತ್ತೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಡೆಡ್ಲಿ ಕೊರೊನಾ ಅಟ್ಟಹಾಸದ ನಡುವೆಯೂ ಪ್ರಯಾಣಿಕರ ಸಹಕಾರಕ್ಕೆ ನಿಂತ ನಿಗಮಗಳಿಗೆ ಮತ್ತೊಂದು ಹೊಡೆತ ಬಿದ್ದಿದೆ.

ಆರನೇ ವೇತನ ಜಾರಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಮರ‌ ಸಾರಿದ್ದ ಸಾರಿಗೆ ನೌಕರರ ಮುಷ್ಕರ ಬುಧವಾರ ಅಂತ್ಯವಾಗಿದೆ. ಸರ್ಕಾರ ವರ್ಸೆಸ್ ಸಾರಿಗೆ ನೌಕರರ ನಡುವಿನ‌ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಬುಧವಾರ ಸಂಜೆಯಿಂದಲೇ ಬಸ್ ಗಳು ಸಂಚಾರವನ್ನ ಪ್ರಾರಂಭಿಸಿವೆ.‌ ಆದ್ರೆ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಭರವಸೆ ಮಾತ್ರ ಹುಸಿಯಾಗಿದ್ದು, ನಿಲ್ದಾಣದತ್ತ ಪ್ರಯಾಣಿಕರು ಮುಖ ಮಾಡುತ್ತಿಲ್ಲ. ಬಿಎಂಟಿಸಿ ಬಸ್ ಗಳು ಮೂಲೆ‌ ಮೂಲೆಗೆ ಸಂಚಾರ ಪ್ರಾರಂಭಿಸಿದ್ರೂ ಪ್ರಯಾಣಿಕರು ಬಾರದಾಗಿದ್ದಾರೆ. ಕೆಎಸ್ ಆರ್ ಟಿಸಿ ಬಸ್ ಗಳು ಸ್ಥಿತಿಯೂ ಹೇಳೋದೆ ಬೇಡವಾಗಿದೆ. ಗಂಟೆಗಟ್ಟಲೇ ನಿಲ್ದಾಣದಲ್ಲಿ ಬಸ್ ನಿಂತಿದ್ರೂ ಯಾರೊಬ್ಬ ಪ್ರಯಾಣಿಕರು ಬಸ್ ಗಳಿಗೆ ಸುಳಿಯದಾಗಿದ್ದಾರೆ.

ಎರಡನೇ ಅಲೆಯ ಆರ್ಭಟಕ್ಕೆ ಹೆದರಿದ ಜನ..!
ಸರ್ಕಾರ ಹೊರಡಿಸಿರುವ ಟಫ್ ರೂಲ್ಸ್ ಮತ್ತು ನಗರದ ಸ್ಮಶಾನಗಳಲ್ಲಿ ಹೆಣಗಳ ಕ್ಯೂ ಇರೋ ಕಾರಣ ಜನರಿಗೆ ಸಖತ್ ಭೀತಿ ಶುರುವಾಗಿದೆ. ಇದೇ ಕಾರಣಕ್ಕಾಗಿ ಜನ ಮನೆಗಳಿಂದ ಹೊರ ಬರುತ್ತಿಲ್ಲ. ಕೇವಲ ಅಗತ್ಯ ಕಾರ್ಯ ಇರೋ ಜನ ಮಾತ್ರ ಮನೆಗಳಿಂದ ಹೊರ ಬರುತ್ತಿದ್ದು, ಅವರು ಮಾತ್ರ ಬಸ್ ಗಳತ್ತ ಮುಖ ಮಾಡ್ತಿದ್ದಾರೆ. ಇದ್ರಿಂದಾಗಿ ಕೇವಲ ಬೆರಳೆಣಿಕೆ ಜನರು ಬಸ್ ಗಳತ್ತ ಮುಖ ಮಾಡ್ತಿರೋದ್ರಿಂದ ಸಾರಿಗೆ ನಿಗಮಗಳಿಗೆ ಇನ್ನಷ್ಟು ಹೊಡೆತ ಬಿದ್ದಿದ್ದಂತಾಗಿದೆ.

ಇನ್ನು ಕೊರೊನಾ ದಿನೆ ದಿನೆ ಏರಿಕೆ ಆಗ್ತಿರೋದ್ರಿಂದ ಸರ್ಕಾರ ಹೇಳಿರೋ ರೂಲ್ಸ್ ಗಳನ್ನ ಪಾಲನೆ ಮಾಡಲಾಗ್ತಿದೆ. ಅಲ್ಲದೇ ಸಾರಿಗೆ ಬಸ್ ಗಳಲ್ಲಿ ಕನಿಷ್ಟ 50% ಸೀಟ್ ಗಳಿಗಷ್ಟೇ ಅವಕಾಶ ಇದೆ. ಅಷ್ಟೇ ಜನರನ್ನ ಸಾಗಾಟ ಮಾಡೋಕೆ‌ ಬಸ್ ನಿಂತ್ರು ಜನರ ರೆಸ್ಪಾನ್ಸ್ ತುಂಬಾ ಡಲ್ ಆಗಿದೆ. ಹೀಗಾಗಿ ಮುಷ್ಕರದ ಬಿಸಿಯ ತಾಪದಿಂದ ಚೇತರಿಸಿಕೊಳ್ಳೋಕೆ ಸಿದ್ದತೆ ನಡೆಸಿಕೊಂಡ ಸಾರಿಗೆ ನಿಗಮಗಳ ಪ್ಲಾನ್ ಜನರ ನಿರುತ್ಸಾಹದಿಂದ ಉಲ್ಟಾ ಹೊಡೆದಿದೆ.

Previous articleಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ!
Next articleಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

LEAVE A REPLY

Please enter your comment!
Please enter your name here