Home Sports ಇಂದು ಮುಖಾಮುಖಿ ಆಗಲಿರೋ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್

ಇಂದು ಮುಖಾಮುಖಿ ಆಗಲಿರೋ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್

500
0

ಟಿ-ಟ್ವೆಂಟಿ ಅಂದ್ರೇನೇ ಅದು ಬ್ಯಾಟು ಬಾಲ್ ನ ನಡುವಿನ ಹೊಡಿ ಬಡಿ ಆಟ. ಈ ಆವೃತ್ತಿಯ ಇವತ್ತಿನ ಪಂದ್ಯದಲ್ಲಿ ಶಾರುಖ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿದ್ದೂ ಸೋತುಹೋದ ಕೆಕೆಆರ್ ಇವತ್ತು ಹೊಸ ಹುಮ್ಮಸ್ಸಿನೊಂದಿಗೆ ಇಂದಿನ ಪಂದ್ಯವನ್ನು ಎದುರು ನೋಡುತ್ತಿದೆ. ಕೆಕೆಆರ್ ಗೆಲುವು ಅನಿವಾರ್ಯವಾಗಿದ್ದು, ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಚ್ಚಳ ಜಯ ಸಾಧಿಸುವ ಲೆಕ್ಕಾಚಾರದಲ್ಲಿದೆ. ಮತ್ತೊಂದ್ಕಡೆ ಆರ್ ಸಿಬಿಯ ಹೊಡೆತಕ್ಕೆ ಸಿಲುಕಿ ಕುಗ್ಗಿ ಹೋಗಿರುವ ರಾಜಸ್ತಾನ್ ರಾಯಲ್ಸ್ ಗೂ ಈ ಪಂದ್ಯ ಅತೀ ಮುಖ್ಯವಾಗಿದೆ. ಕೆಕೆ ಆರ್ ಹಾಗು ರಾಜಸ್ತಾನ್ ರಾಯಲ್ಸ್ ಎರಡೂ ತಂಡಗಳು ಮೇಲ್ನೋಟಕ್ಕೆ ಬಲಿಷ್ಠ ವಾಗಿರುವಂತೆ ಕಂಡರೂ ಸಹ ಮೈದಾನದಲ್ಲಿ ಸಾಂಘಿಕ ಪ್ರದರ್ಶನ ಕಂಡುಬರ್ತಿಲ್ಲ. ಇತ್ತಂಡಗಳಲ್ಲಿ ಕೇವಲ ಒಬ್ಬಿಬ್ಬರು ವಯಕ್ತಿಕ ಪ್ರದರ್ಶನ ನೀಡುತ್ತಿದ್ದರೂ, ಇಡೀ ತಂಡವಾಗಿ ಗೆಲುವು ಕಾಣಲು ಸಾಧ್ಯವಾಗ್ತಿಲ್ಲ. ಟೂರ್ನಿ ಮುಂದುವರಿಯದಂತೆ ಎರಡೂ ತಂಡಗಳ ನೀರಸ ಪ್ರದರ್ಶನ ಹೀಗೇ ಮುಂದುವರಿದಲ್ಲಿ ಅಂಕಪಟ್ಟಿಯಲ್ಲೂ ಸವಾಲು ಎದುರಾಗಲಿದೆ. ಅಲ್ಲದೆ ಗೆಲುವು ಮತ್ತು ನೆಟ್ ರನ್ ರೇಟ್ ಕೂಡ ಇಲ್ಲಿ ಕೌಂಟ್ ಆಗುತ್ತೆ. ಆ ಕಾರಣಕ್ಕಾದ್ರೂ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದೇ ಆಗಿದೆ.

ಸೋಲುಗಳಿಂದ ಕಂಗೆಟ್ಟಿರುವ ಉಭಯ ತಂಡಗಳು ಇಂದು ಮುಖಾಮುಖಿಯಾಗಲಿದ್ದು, ಇಬ್ಬರೂ ನಾಯಕರಿಗೆ ಅಗ್ನಿ ಪರೀಕ್ಷೆಯಾಗಿದೆ. ಜಯದ ಹುಡುಕಾಟದಲ್ಲಿರುವ ಕೆಕೆಆರ್ ಹಾಗು ರಾಜಸ್ತಾನ್ ರಾಯಲ್ಸ್ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ 23 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಕೆಕೆಆರ್ 12 ಬಾರಿ ಗೆಲುವು ಕಂಡಿದ್ರೆ, ರಾಜಸ್ತಾನ್ ರಾಯಲ್ಸ್ 10 ಬಾರಿ ಗೆಲುವು ಕಂಡಿದೆ.

ಇಯಾನ್ ಮಾರ್ಗನ್ ನಾಯಕತ್ವದ ಕೆಕೆಆರ್ ತಂಡದಲ್ಲಿ ಮಾರ್ಗನ್ ಸೇರಿದಂತೆ ನಿತಿಶ್ ರಾಣಾ, ಭರವಸೆಯ ಯುವ ಬ್ಯಾಟ್ಸಮನ್ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಅನುಭವಿ ದಿನೇಶ್ ಕಾರ್ತಿಕ್ ರಂತಹ ಅಗ್ರ ಬ್ಯಾಟ್ಸ್ ಮನ್ ಗಳ ವೈಫಲ್ಯ ತಂಡಕ್ಕೆ ಹಿನ್ನಡೆಯಾಗ್ತಿದೆ. ಆದ್ರೆ ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್ ಆಲ್ ರೌಂಡ್ ಆಟವಾಡ್ತಿದ್ರೂ ಕೂಡ ತಂಡ ಗೆಲುವಿನ ದಡ ಸೇರಲು ಸಾಧ್ಯವಾಗ್ತಿಲ್ಲ.

ಬೌಲಿಂಗ್ ವಿಭಾಗದಲ್ಲಿ ಕೆಕೆಆರ್ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮೊನಚನ್ನು ಪ್ರದರ್ಶಿಸುತ್ತಿಲ್ಲ. . ಕಳೆದ ಪಂದ್ಯದಲ್ಲಿನ ಚೆನ್ನೈ ವಿರುದ್ಧ ಸೋಲು ಕೆಕೆಆರ್ ನ್ನು ಒತ್ತಡಕ್ಕೆ ಸಿಲುಕಿಸಿದೆ. ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಅವರ ಕಡೇ ಕ್ಷಣದ ಹೋರಾಟದ ಹೊರತಾಗಿಯೂ ಕೆಕೆಆರ್, ಚೆನ್ನೈ ಎದುರು ವಿರೋಚಿತ ಸೋಲು ಕಂಡಿತ್ತು. ಉತ್ತಮ ಮೊತ್ತ ಪೇರಿಸಿಯೂ ಸಹ ಆ ಮೊತ್ತವನ್ನು ರಕ್ಷಿಸಿಕೊಂಡು ಗೆಲುವು ಕಾಣಲು ಸಾಧ್ಯವಾಗ್ತಿಲ್ಲ. ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್ ಆಲ್ ರೌಂಡ್ ಕೊಡುಗೆ ಕೂಡ ತಂಡದ ಗೆಲುವಿಗೆ ಸಾಕಾಗ್ತಿಲ್ಲ. ಯಾಕಂದ್ರೆ ಬೌಲರ್ ಗಳಾದ ಸುನೀಲ್ ನರೈನ್, ನಾಗರಕೋಟಿ, ವರುಣ್ ಚಕ್ರವರ್ತಿ, ಪ್ರಸಿದ್ಧ ಅವರಿಂದ ಸಾಮರ್ಥ್ಯಕ್ಕೆ ತಕ್ಕಂತ ಬೌಲಿಂಗ್ ಪ್ರದರ್ಶನ ಹೊರಹೊಮ್ಮಬೇಕಿದೆ. ಹೀಗಾಗಿ ಕಮಲೇಶ್ ನಾಗರಕೋಟಿ ಬದಲಿಗೆ ಶಿವಂ ಮಾವಿ, ವರುಣ್ ಚಕ್ರವರ್ತಿ ಬದಲಿಗೆ ಕುಲ್ದೀಪ್ ಯಾದವ್ ಗೆ ಸ್ಥಾನ ಸಿಗಬಹುದು.
ಇನ್ನು ರಾಜಸ್ತಾನ್ ರಾಯಲ್ಸ್ ಗೆ ಕೂಡ ಗೆಲುವು ಅನಿವಾರ್ಯ. ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದೂ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದ ಕೈ ಸುಟ್ಟುಕೊಳ್ಳುತ್ತಿರುವ ಸಂಜು ಸ್ಯಾಮ್ಸನ್ ಪಡೆಯ ಸ್ಟ್ರೆಂತ್ ಹಾಗು ವೀಕ್ ನೆಸ್ ಏನು ನೋಡೋಣ
ಇನ್ನು ಆಡಿದ 3 ಪಂದ್ಯಗಳಲ್ಲಿ 2 ಸೋಲುಗಳ ಬಳಿಕ ಕಂಗಾಲಾಗಿರುವ ರಾಜಸ್ತಾನ್ ರಾಯಲ್ಸ್ ಗೆಲುವಿಗಾಗಿ ಹವಣಿಸುತ್ತಿದೆ. ಆರ್ ಆರ್ ತಂಡದಲ್ಲಿ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ಹಾಗು ಆರ್ ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಚೇತನ್ ಸಕಾರಿಯಾ, ಕ್ರಿಸ್ ಮಾರಿಸ್ ರಂತಹ ಬಲಾಢ್ಯ ಬ್ಯಾಟಿಂಗ್ ಪಡೆ ಇದ್ದರೂ ಸಾಲು ಸೋಲುಗಳು ಹಾಗು ಆರ್ ಸಿಬಿ ವಿರುದ್ಧದ 10 ವಿಕೆಟ್ ಸೋಲು ನಾಯಕ ಸಂಜು ಸ್ಯಾಮ್ಸನ್ ಅವರನ್ನು ಕಂಗೆಡಿಸಿರೋದಂತೂ ನಿಜ. ಇದ್ರ ನಡುವೆ ಸತತ ವೈಫಲ್ಯ ಕಾಣುತ್ತಿರುವ ಮನನ್ ವೊಹ್ರಾ ಬದಲಿಗೆ ಯಶಸ್ವೀ ಜೈಸ್ವಾಲ್ ಗೆ ತಂಡದಲ್ಲಿ ಸ್ಥಾನ ಸಿಗಬಹುದು.

ಇನ್ನು ಆರ್ ಆರ್ ಬೌಲಿಂಗ್ ಪಡೆ ಸದೃಢವಾಗಿದ್ದರೂ ಸ್ಲ್ಯಾಗ್ ಓವರ್ ಗಳಲ್ಲಿ ಹೆಚ್ಚಾಗಿ ರನ್ ಗಳನ್ನು ಬಿಟ್ಟುಕೊಡುತ್ತಿರುವುದೂ ತಂಡಕ್ಕೆ ಹಿನ್ನಡೆಯನ್ನು ತಂದೊಡ್ಡುತ್ತಿದೆ. ಕ್ರಿಸ್ ಮಾರಿಸ್ ರಂತಹ ಆಲ್ ರೌಂಡರ್ ಇದ್ದೂ, ಮುಸ್ತಾಪಿಝರ್, ಸಕಾರಿಯಾ ಹಾಗು ಜಯದೇವ್ ಉನಾದ್ಕತ್ ರಂತಹ ಯುವ ಎಡಗೈ ವೇಗಿ ಇದ್ದೂ ಪಂದ್ಯವನ್ನು ಗೆಲುವಾಗಿ ಪರಿಣಮಿಸಲು ಸಾಧ್ಯವಾಗಿಲ್ಲ. ಇನ್ನು ಬೌಲಿಂಗ್ ನಲ್ಲಿ ಶ್ರೇಯಸ್ ಗೋಪಾಲ್ ಬದಲಿಗೆ ಕಾರ್ತಿಕ್ ತ್ಯಾಗಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

Previous articleಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಂ ಅವರ ಜೊತೆ ಪ್ರಜಾಟಿವಿ ಚಿಟ್ ಚಾಟ್
Next articleವಾರದ ಏಳೂ ದಿನವೂ ವಿಸ್ತರಣೆಯಾಗುತ್ತಾ ಲಾಕ್ ಡೌನ್?

LEAVE A REPLY

Please enter your comment!
Please enter your name here