ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ಉತ್ತರಕನ್ನಡ ಜಿಲ್ಲೆ

ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ಉತ್ತರಕನ್ನಡ ಜಿಲ್ಲೆ

412
0

ವರದಿ: ಸಂದೀಪ ಸಾಗರ, ಕಾರವಾರ.

ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಉತ್ತರಕನ್ನಡ ಜಿಲ್ಲೆಯ ಕರಾವಳಿ ತತ್ತಿರಿಸಿ ಹೋಗಿದೆ. ತಡರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕಡಲತೀರಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ತೌಕ್ತೆ ಚಂಡಮಾರುತದ ಅಬ್ಬರ ನಿನ್ನೆಯಿಂದಲೂ ಜೋರಾಗಿದ್ದು ಕರಾವಳಿ ಭಾಗದಲ್ಲಿ ಮಳೆಗಿಂತಲೂ ಗಾಳಿ ಅಬ್ಬರ ಹೆಚ್ಚಾಗಿದೆ. ಇದರಿಂದ ಕಾರವಾರದ ಕೆ ಎಸ್‌ಆರ್‌ಟಿಸಿ ಡಿಪೋ ಬಳಿ ಭಾರಿ ಗಾತ್ರದ ಮರ ಬಿದ್ದು ಕೆಲ ಕಾಲ ರಸ್ತೆ ಬಂದಾಗಿದೆ. ಇನ್ನು ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲ ಭಾಗದಲ್ಲಿದ್ದ ಸೆಡ್ ಗಳು ಹಾರಿ ಹೋಗಿದೆ. ಇನ್ನು ಕಾರವಾರದ ಹಾರವಾಡ ಹಾಗೂ ಮಾಜಾಳಿಯಲ್ಲಿ ತಡರಾತ್ರಿ ಕಡಲು ಉಕ್ಕೇರಿದ ಪರಿಣಾಮ‌ ಮನೆಗಳಿಗೆ ನೀರು ತುಂಬಿ ಜನಜೀವನ‌ ಅಸ್ತವ್ಯಸ್ಥಗೊಂಡಿದೆ. ಇನ್ನು ಸಮುದ್ರ ತೀರದಲ್ಲಿದ್ದ ದೋಣಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿ ಗೊಳಗಾಗಿದ್ದು, ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಭಯದಲ್ಲೇ ಕಳೆಯುವಂತಾಗಿತ್ತು. ಇನ್ನು ಘಟ್ಟದ ಮೇಲ್ಬಾಗದಲ್ಲಿಯೂ ಗಾಳಿ ಅಬ್ಬರ ಜೋರಾಗಿದ್ದು, ತಡರಾತ್ರಿಯಿಂದಲೇ ಎಲ್ಲೆಡೆ ವಿದ್ಯುತ್ ಕಡಿತಗೊಂಡಿದ್ದರಿಂದ ಜನ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

VIAತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ಉತ್ತರಕನ್ನಡ ಜಿಲ್ಲೆ
SOURCEತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ಉತ್ತರಕನ್ನಡ ಜಿಲ್ಲೆ
Previous articleತಾಯಿಯ ಅಂತಿಮ ದರ್ಶನಕ್ಕೆ ಬಂದ ಮಗನ ಅಂತಿಮ ದರ್ಶನ!; ಮಾಜಿ ಶಾಸಕರ ಮನೆಯಲ್ಲಿ ಮಡುಗಟ್ಟಿದ ಶೋಕ
Next articleಕರಾವಳಿಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ

LEAVE A REPLY

Please enter your comment!
Please enter your name here