Home District ಸಿಡಿ ಲೇಡಿ ವಿಷಯದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ; ಡಿ ಸುಧಾಕರ್ ಸ್ಪಷ್ಟನೆ 

ಸಿಡಿ ಲೇಡಿ ವಿಷಯದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ; ಡಿ ಸುಧಾಕರ್ ಸ್ಪಷ್ಟನೆ 

407
0

ರಾಜ್ಯದಲ್ಲಿ ಸಿಡಿ ಪ್ರಕರಣ ಬಾರಿ ಸದ್ದು ಮಾಡುತ್ತಿದ್ದು, ಇತ್ತ ನಿನ್ನೆ ಸಿಡಿ ಲೇಡಿ ವಿಚಾರದಲ್ಲಿ ಮಾಜಿ ಸಚಿವ ಡಿ ಸುಧಾಕರ್ ಜೊತೆಗೆ ಸುಧೀರ್ಘ ಕಾಲ ಸಂಪರ್ಕವನ್ನು ಹೊಂದಿದ್ದರು ಎಂಬ ಮಾಹಿತಿ ಎಸ್ಐಟಿ ಯಿಂದ ಹೊರ ಬಿದ್ದ ಹಿನ್ನೆಲೆಯಲ್ಲಿ ಸಿಡಿ ಲೇಡಿ ವಿಷಯದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ ಎಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಡಿ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ನನ್ನದು ಕಾಂಗ್ರೆಸ್ ಕುಟುಂಬ ನಾನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೂ ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಒಂದೇ ರೀತಿಯ ಬಾಂಧವ್ಯವನ್ನು ಹೊಂದಿದ್ದೆನೆ ಎಂದರು. ನನ್ನ ತಂದೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿಗೆ ಹೋಗಿ ಬಂದವರಾಗಿದ್ದು, ಅಂತಹ ಕುಟುಂಬದಿಂದ ಬಂದವನು ಆಗಿದ್ದೆನೆಂದರು. ನನಗೂ ಸಿಡಿ ಲೇಡಿಗೂ ಯಾವುದೇ ಸಂಬಂಧವಿಲ್ಲ ನನ್ನ ಹೆಸರು ಮಾಧ್ಯಮದಲ್ಲಿ ಪ್ರಸ್ತಾಪಿಸಿರುವುದು ಆಚ್ಚರಿ ಮೂಡಿಸಿದೆ. ನಾನು ಜನಪ್ರತಿನಿಧಿ ನನಗೆ ದಿನನಿತ್ಯ ನೂರಾರು ಜನ ಪೋನ್ ಮಾಡುತ್ತಾರೆ ಅದರಲ್ಲಿ ಆ ಹುಡುಗಿ ಯಾರು ಎಂದು ನನಗೆ ಗೊತ್ತಿಲ್ಲ. ನಾನು ಯಾವುದೇ ಖಾತೆಗೆ ಹಣ ಕಳುಹಿಸಿಲ್ಲ. ಯಾರಿಗೂ 10 ರೂಪಾಯಿನೂ ನೀಡಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎಂದರು. SIT ನನಗೆ ಯಾವುದೇ ನೋಟಿಸ್ ನೀಡಿಲ್ಲ ಹಾಗೇನಾದರೂ ನೋಟಿಸ್ ನೀಡಿದಲ್ಲಿ ನಾನು ವಿಚಾರಣೆ ಹೋಗಲು ಸಿದ್ದವಿದ್ದೇನೆ ಎಂದರು.

ಸದರಿ ಪ್ರಕರಣದಲ್ಲಿ ನಾನು ತಪ್ಪಿತಸ್ಥ ಎನ್ನುವ ಭಯ ನನ್ನಲ್ಲಿ ಇದ್ದಿದ್ದರೆ ಕೆಲವು ಸಚಿವರು ಮತ್ತು ಜನಪ್ರತಿನಿಧಿಗಳು ತಮ್ಮ ವಿರುದ್ಧ ವಿಚಾರಣೆ ನಡೆಸದಂತೆ ಘನ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆಯನ್ನು ತಂದಿರುವಂತೆ ನಾನು ಸಹ ನ್ಯಾಯಾಲಯದ ಮೊರೆ ಹೋಗುವವನಿದ್ದೆ ಎಂದು ಹೇಳಿದರು.

Previous articleಮಲೆಮಹದೇಶ್ವರ ಬೆಟ್ಟದಲ್ಲಿ ಅಧಿಕಾರಿಗಳು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ; ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Next articleದಾವಣಗೆರೆ ಜಿಲ್ಲೆಯ ಕನಕ ಮಠಕ್ಕೆ ಈಶ್ವರಪ್ಪ, ಸಿಎಂ ಬಿ.ಎಸ್.ವೈ ಭೇಟಿ; ವಿಶೇಷ ಪೂಜೆ

LEAVE A REPLY

Please enter your comment!
Please enter your name here