ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಕೆ: 10 ವಾರ್ಡ್ ಗಳಲ್ಲಿ ಸೋಂಕು ಉಲ್ಬಣ

ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಏರಿಕೆ ಆಗುತ್ತಲೇ ಇದೆ. ಕಳೆದ ಒಂದು ವಾರದಲ್ಲಿ ಬಿಬಿಎಂಪಿ ವ್ಯಾಪ್ತಿಯ 10 ವಾರ್ಡಗಳಲ್ಲಿ ಸೋಂಕು ತೀವ್ರಗತಿ ಪಡೆದುಕೊಂಡಿದೆ. ನಗರದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳು 4,665. ಬೆಳ್ಳಂದೂರು, ಕಾಡುಗೋಡಿ ವಾರ್ಡ್ ಸೇರಿದಂತೆ ಸುಮಾರು 10 ವಾರ್ಡ್‌ಗಳ ಜನರೇ ಹೆಚ್ಚಾಗಿ ಕೋವಿಡ್‌ಗೆ ತುತ್ತಾಗಿರುವುದು ಬಿಬಿಎಂಪಿಯ ಕೋವಿಡ್ ಹೆಲ್ತ್ ಬುಲೆಟಿನ್‌ನಿಂದ ದೃಢಪಟ್ಟಿದೆ.

ನೆರೆ ರಾಜ್ಯಗಳಲ್ಲಿ ಸೋಂಕಿನ ಅಬ್ಬರ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಲ್ಲೂ ಕೊರೋನಾ ಪರೀಕ್ಷೆಗಳನ್ನು ಹೆಚ್ಚಿಸಲಾಗಿತ್ತು. ಕಳೆದ ಒಂದೇ ವಾರದಲ್ಲಿ ಬೆಳ್ಳಂದೂರಿನಲ್ಲಿ 69 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಅದೇ ರೀತಿ ದೊಡ್ಡಾನೆಕ್ಕುಂದಿಯಲ್ಲಿ 34, ಕಾಡುಗೋಡಿ ವಾರ್ಡನಲ್ಲಿ32, ವರ್ತೂರು 24, ಹಗದೂರಿನಲ್ಲಿ18 ಜನರಿಗೆ ಸೋಂಕು ತಗುಲಿದೆ. ಇನ್ನು ಎಚ್‌ಎಸ್‌ಆರ್ ಬಡಾವಣೆಯಲ್ಲಿ15, ಹೊರಮಾವು ಮತ್ತು ಹೂಡಿಯಲ್ಲಿ ತಲಾ 14 ಮಂದಿಗೆ, ಬೇಗೂರು 10 ಹಾಗೂ ವಿಜ್ಞಾನ ನಗರದಲ್ಲಿ 9ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.

Leave a Reply

Your email address will not be published.